ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈರ್ಮಲ್ಯ: ಬೆಂಗಳೂರು-ಮೈಸೂರು ರ‍್ಯಾಂಕಿಂಗ್‌ ಕುಸಿತ

By Nayana
|
Google Oneindia Kannada News

ಬೆಂಗಳೂರು, ಜೂನ್ 25: ಕೇಂದ್ರದ ಸ್ವಚ್ಛ ಸರ್ವೇಕ್ಷಣ್‌ ಅಭಿಯಾನದಲ್ಲಿ ಬೆಂಗಳೂರು ಮತ್ತೊಮ್ಮೆ ಕಳಪೆ ಪ್ರದರ್ಶನ ತೋರಿ 216ನೇ ರ‍್ಯಾಂಕ್​ ಪಡೆದುಕೊಂಡಿದೆ. ಸ್ವಚ್ಛತೆ ವಿಚಾರದಲ್ಲಿ ಬೆಂಗಳೂರು ಮತ್ತೊಮ್ಮೆ ಮುಜುಗರಕ್ಕೆ ಈಡಾಗಿದೆ.

2017ರಲ್ಲಿ 210ನೇ ರ‍್ಯಾಂಕ್​ ಪಡೆದಿದ್ದ ರಾಜಧಾನಿ ಇದೀಗ 216ನೇ ಸ್ಥಾನಕ್ಕೆ ಕುಸಿದಿದೆ. 2016ರಲ್ಲಿ ಬೆಂಗಳೂರು 16ನೇ ರ‍್ಯಾಂಕ್​ ಪಡೆದಿತ್ತು. ಉಳಿದಂತೆ ಮೈಸೂರು5 ರಿಂದ 8ನೇ ಸ್ಥಾನಕ್ಕೆ ಕುಸಿದರೆ, ಮಂಗಳೂರು 63ರಿಂದ 52, ಹುಬ್ಬಳ್ಳಿ-ಧಾರವಾಡ 199ರಿಂದ 145, ದಾವಣಗೆರೆ 288ರಿಂದ 214ನೇ ರ‍್ಯಾಂಕ್​ಗೆ ಜಿಗಿದಿದೆ.

Mysuru and Bengaluru losing their clean image

ಉಡುಪಿ 143ರಿಂದ 198, ಶಿವಮೊಗ್ಗ 147ರಿಂದ 204, ತುಮಕೂರು 152ರಿಂದ 190ನೇ ಸ್ಥಾನಕ್ಕೆ ಕುಸಿದಿವೆ. ರಾಜ್ಯವಾರು ವಿಭಾಗದಲ್ಲಿ ಕರ್ನಾಟಕಕ್ಕೆ 14ನೇ ರ‍್ಯಾಂಕ್​ ಸಿಕ್ಕರೆ, ಜಾರ್ಖಂಡ್‌, ಮಹಾರಾಷ್ಟ್ರ, ಛತ್ತೀಸ್‌ಗಢ ಕ್ರಮವಾಗಿ 1,2,3ನೇ ಸ್ಥಾನ ಪಡೆದುಕೊಂಡಿದೆ.ದೇಶದಲ್ಲಿನ 3ರಿಂದ 10 ಲಕ್ಷ ಜನಸಂಖ್ಯೆ ಇರುವ ನಗರಗಳ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದ ಮೈಸೂರು, ಒಟ್ಟಾರೆ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ.

ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಫ್ರೆಂಚ್‌ ಕಂಪನಿಯೊಂದಿಗೆ ಒಪ್ಪಂದತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಫ್ರೆಂಚ್‌ ಕಂಪನಿಯೊಂದಿಗೆ ಒಪ್ಪಂದ

ಮಂಗಳೂರು 3-10 ಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ಅತ್ಯುತ್ತಮ ಘನತ್ಯಾಜ್ಯ ನಿರ್ವಹಣೆಯಲ್ಲಿ ಮೊದಲ ಸ್ಥಾನ ಪಡೆದರೆ, ಮೈಸೂರು 3-10 ಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ಸ್ವಚ್ಛತೆಗೆ ಮೊದಲ ಸ್ಥಾನ ಗಳಿಸಿದೆ. ಹುಣಸೂರು ಅತ್ಯುತ್ತಮ ಘನ ತ್ಯಾಜ್ಯ ನಿರ್ವಹಣೆಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ.

English summary
Ministry of urban development has released best clean cities in the country. Mysore has com down to 8th rank from 5th while Bangalore stands at 216.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X