ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕಾಣಿಸಿಕೊಳ್ಳುತ್ತಿದೆ ನಿಗೂಢ ಜ್ವರ, ವೈದ್ಯರು ಏನಂತಾರೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 23: ಕರ್ನಾಟಕದ ಮಕ್ಕಳಲ್ಲಿ ನಿಗೂಢ ಜ್ವರ ಕಾಣಿಸಿಕೊಳ್ಳುತ್ತಿದ್ದು, ಅದರ ಬಗ್ಗೆ ಆತಂಕ ಬೇಡ ಎಂದು ವೈದ್ಯರು ಹೇಳಿದ್ದಾರೆ.

ಮಕ್ಕಳಲ್ಲಿ ಇತ್ತೀಚೆಗೆ ಹೆಚ್ಚಾಗಿ ವೈರಲ್ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಮತ್ತು ಡೆಂಗ್ಯೂ ಜ್ವರದ ಲಕ್ಷಣಗಳೇ ಕಂಡುಬರುತ್ತಿದ್ದು ಮಕ್ಕಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬರುತ್ತಿದೆ.

ಡೆಂಗ್ಯೂ ಮಾದರಿಯ ಮತ್ತೊಂದು ಸೋಂಕು ಪತ್ತೆ, ಜನತೆಗೆ ಆತಂಕಡೆಂಗ್ಯೂ ಮಾದರಿಯ ಮತ್ತೊಂದು ಸೋಂಕು ಪತ್ತೆ, ಜನತೆಗೆ ಆತಂಕ

ಹಾಗಾದರೆ ಇದು ಕೊರೊನಾ ರೂಪಾಂತರಿಯೇ ಎಂಬ ಸಂಶಯ ಹಾಗೂ ಆತಂಕ ಜನರನ್ನು ಕಾಡುತ್ತಿದೆ. ಕೊರೊನಾ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬರುತ್ತಿದೆ. ಉಸಿರಾಟದ ಸಿನ್ಸಿಟಿಯಲ್ ವೈರಸ್, ಎಚ್ 1 ಎನ್ 1 ಅಥವಾ ಚಿಕೂನ್ ಗುನ್ಯಾದಂತಹ ಕೆಲವು ಋತುಗಳ ವೈರಸ್ ಗಳು ಕೂಡ ಕಾಡುತ್ತಿವೆ.

ಸಾಮಾನ್ಯವಾಗಿ ಮಳೆಗಾಲ, ಚಳಿಗಾಲ, ಬೇಸಿಗೆಕಾಲಗಳಲ್ಲಿ ಋತುಗಳು ಬದಲಾದಾಗ ಶೀತ, ನೆಗಡಿ- ಜ್ವರ ಬರುವುದು ಸಾಮಾನ್ಯ. ಆದರೆ ಇತ್ತೀಚೆಗೆ ಬರುತ್ತಿರುವ ಜ್ವರ ಅದರಲ್ಲೂ ಮಕ್ಕಳಲ್ಲಿ ಮಾತ್ರ ದೀರ್ಘಕಾಲ ಇದೆ. ಶಿಶುಗಳಿಂದ ಹಿಡಿದು 5 ವರ್ಷದವರೆಗೆ ಮಕ್ಕಳಲ್ಲಿ ಇತ್ತೀಚೆಗೆ ವೈರಲ್ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಅಧಿಕ ಜ್ವರ, ಸುಸ್ತು, ಕಫ, ಶೀತ ಮತ್ತು ವಾಂತಿಯ ಸಮಸ್ಯೆಗಳು ಕಾಣಿಸುತ್ತಿವೆ.

ವೈರಸ್‌ಗಳೊಂದಿಗೆ ಕಲುಷಿತ ನೀರು ಥ್ರಂಬೋಸೈಟೋಪೆನಿಯಾದೊಂದಿಗೆ ವೈರಲ್ ಜ್ವರಕ್ಕೆ ಕಾರಣವಾಗಬಹುದು, ಮಕ್ಕಳಿಂದ 70 ವರ್ಷದವರವರೆಗೂ ಈ ಜ್ವರ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಡಾ.ಖಾಜಿ

ಜನತೆ ಈ ರೀತಿಯ ಜ್ವರ ಬಂದಲ್ಲಿ ಅದನ್ನು ಕೋವಿಡ್-19 ಎಂದು ಗೊಂದಲಕ್ಕೀಡಲು ಪ್ರಾರಂಭಿಸಿದ್ದಾರೆ ಎನ್ನುತ್ತಾರೆ ಏಸ್ತರ್ ಆರ್ ವಿ ಆಸ್ಪತ್ರೆಯ ಆಂತರಿಕ ವೈದ್ಯ ವಿಭಾಗದ ಡಾ. ಎಸ್ ಎನ್ ಅರವಿಂದ ಹೇಳಿದ್ದಾರೆ.

ಋತು ಬದಲಾವಣೆಯಾಗಿರುವುದು, ವೀಕೆಂಡ್ ಗಳಲ್ಲಿ ಜನತೆ ಸಣ್ಣಪುಟ್ಟ ಪಾರ್ಟಿಗಳಿಗೆ ತೆರಳುವುದು ಈ ವೈರಾಣು ಜ್ವರ ಹರಡುವುದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಅರವಿಂದ ತಿಳಿಸಿದ್ದಾರೆ.

ಸಾಮಾನ್ಯವಾಗಿ ವೈರಲ್ ಜ್ವರಕ್ಕೆ ನೀಡುವ ಚಿಕಿತ್ಸೆಯನ್ನೇ ಈ ವೈರಾಣು ಜ್ವರ ಎದುರಿಸುತ್ತಿರುವವರಿಗೂ ನೀಡಲಾಗುತ್ತದೆ. ಈ ವೈರಾಣು ಜ್ವರದಿಂದ ಶ್ವಾಸಕೋಶ, ಕಿಡ್ನಿ, ಲಿವರ್ ಗೆ ಹಾನಿಯಾಗಿದ್ದರೆ ಮಾತ್ರ ಚಿಕಿತ್ಸೆಯ ವಿಧಾನ ಬದಲಾವಣೆಯಾಗುತ್ತದೆ.

ಹೀಗಾಗುವುದರಿಂದ ಹಲವು ರೋಗಿಗಳು ಗೊಂದಲಕ್ಕೀಡಾಗಿ ಆತಂಕಕ್ಕೊಳಗಾಗುತ್ತಾರೆ ಎನ್ನುತ್ತಾರೆ ವೈದ್ಯರು. ಏಸ್ತರ್ ಸಿಎಂಐ ಆಸ್ಪತ್ರೆಯ ಆಂತರಿಕ ವೈದ್ಯ ವಿಭಾಗದ ಸಲಹೆಗಾರರಾಗಿರುವ ಡಾ. ಬೃಂದ ಈ ಮಾದರಿಯ ಹೊಸ ವೈರಾಣು ಜ್ವರದ ಬಗ್ಗೆ ಮಾತನಾಡಿದ್ದು, "ಕಡಿಮೆ ಪ್ಲೇಟ್ ಲೆಟ್ ಸಂಖ್ಯೆ ಎಂದಾಕ್ಷಣ ಅದು ಡೆಂಗ್ಯೂ ಆಗಿರಬೇಕೆಂದೇನೂ ಇಲ್ಲ.

ಇತರ ವೈರಲ್ ಸೋಂಕಿನಿಂದಲೂ ಪ್ಲೇಟ್ ಲೆಟ್ ಗಳು ಕುಸಿತ ಕಾಣಬಹುದು, ನಿರ್ವಹಣೆಯೂ ಡೆಂಗ್ಯು ಮಾದರಿಯದ್ದೇ ಆಗಿರುತ್ತದೆ ಎಂದು ಗೆಳಿಸಿದ್ದಾರೆ.

 ಹವಾಮಾನ ಬದಲಾವಣೆಯಿಂದ ಜ್ವರ

ಹವಾಮಾನ ಬದಲಾವಣೆಯಿಂದ ಜ್ವರ

ಯಾವುದೇ ಅಸಾಮಾನ್ಯ ಲಕ್ಷಣಗಳಿದ್ದಲ್ಲಿ, ಆಣ್ವಿಕ ಪರೀಕ್ಷೆಗಳು, ಸ್ವ್ಯಾಬ್ ಸಂಗ್ರಹಗಳು, ವೈರಸ್ ಕಲ್ಚರ್ ಇತ್ಯಾದಿಗಳನ್ನು ನೋಡಲು ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಡಾ ನಿರಂಜನ್ ಪಾಟೀಲ್ ಹೇಳಿದರು.
ಕನಿಷ್ಟ 50-60 ಮಕ್ಕಳನ್ನು ವೈರಲ್ ಜ್ವರ ಮತ್ತು ಸೋಂಕು ರೋಗಲಕ್ಷಣಗಳನ್ನು ನೋಡಿದ್ದೇವೆ, ಆದರೆ ಇವುಗಳಲ್ಲಿ ಶೇಕಡಾ 40ರಷ್ಟು ಮಕ್ಕಳಲ್ಲಿ ಋತು ಸಂಬಂಧಿ ವೈರಸ್ ಜ್ವರಗಳೇ ಕಾಣಿಸುತ್ತಿವೆ ಎನ್ನುತ್ತಾರೆ.
ಉಳಿದವರಿಗೆ ನಾವು ಇಂತಹ ಸೋಂಕುಗಳ ಬಗ್ಗೆ ಯಾವುದೇ ವರ್ಗೀಕರಣವಿಲ್ಲದ ಕಾರಣ ನಾವು ಕೇವಲ ರೋಗಲಕ್ಷಣದಿಂದ ಮಾತ್ರ ಚಿಕಿತ್ಸೆ ನೀಡಿದ್ದೇವೆ ಎಂದು ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಮುಖ್ಯಸ್ಥ ಡಾ. ಚಿಕ್ಕನರಸ ರೆಡ್ಡಿ ಹೇಳುತ್ತಾರೆ.
ಇದು ಕೇವಲ ಕಾಲ ಅಥವಾ ಋತು ಸಂಬಂಧಿ ಜ್ವರ ಎಂದು ಹೇಳುವ ಡಾ ರೋಹಿಣಿ ಕೆಲ್ಕರ್, ಹಳೆ ವೈರಸ್ ಹೊಸದಾಗಿ ಕಾಣಿಸಿಕೊಂಡಿದೆಯಷ್ಟೆ ಎನ್ನುತ್ತಾರೆ.

 ಕೊರೊನಾ ಮಧ್ಯೆ ನಿಗೂಢ ಜ್ವರ

ಕೊರೊನಾ ಮಧ್ಯೆ ನಿಗೂಢ ಜ್ವರ

ಹಾಗಾದರೆ ಏನಿದು ಎಂಬ ಭಯ, ಆತಂಕ ಕೊರೊನಾ ಮಧ್ಯೆ ಜನರನ್ನು ಸಾಕಷ್ಟು ಕಾಡುತ್ತಿದೆ. ಜನರು ಆತಂಕಪಡುವ ಅಗತ್ಯವಿಲ್ಲ. ಮಕ್ಕಳಲ್ಲಿ ಅಸಾಮಾನ್ಯ ರೋಗಲಕ್ಷಣ, ಕೊರೋನಾ ಲಕ್ಷಣ ಕಂಡುಬರದ ಹೊರತು ಅನಗತ್ಯವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಬೇಡ ಎಂದು ವೈದ್ಯರು ಹೇಳುತ್ತಾರೆ.

 3 ದಿನಕ್ಕಿಂತ ಹೆಚ್ಚಿನ ಕಾಲ ಜ್ವರ ಇದ್ದರೆ ಪರೀಕ್ಷೆ ಮಾಡಿಸಬೇಕು

3 ದಿನಕ್ಕಿಂತ ಹೆಚ್ಚಿನ ಕಾಲ ಜ್ವರ ಇದ್ದರೆ ಪರೀಕ್ಷೆ ಮಾಡಿಸಬೇಕು

ಮೆಟ್ರೊಪೊಲಿಸ್ ಹೆಲ್ತ್‌ಕೇರ್ ಲಿಮಿಟೆಡ್‌ನ ಸಾಂಕ್ರಾಮಿಕ ರೋಗಗಳ ವೈಜ್ಞಾನಿಕ ವ್ಯವಹಾರದ ಮುಖ್ಯಸ್ಥ ಹಾಗೂ ಅಸೋಸಿಯೇಟ್ ಉಪಾಧ್ಯಕ್ಷ ಡಾ ನಿರಂಜನ್ ಪಾಟೀಲ್, ಜ್ವರದಂತಹ ವಿಶಿಷ್ಟ ಲಕ್ಷಣವು ಮೂರು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ಅಥವಾ ಸಮಯ ಭಿನ್ನವಾಗಿದ್ದರೆ ಅಥವಾ ನಿರ್ದಿಷ್ಟ ಪ್ರದೇಶದ ಮಕ್ಕಳು ಇದೇ ರೀತಿ ತೋರಿಸುತ್ತಿದ್ದರೆ ರೋಗಲಕ್ಷಣಗಳನ್ನು ಹೊಂದಿದ್ದರೆ ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ.

Recommended Video

ಪಾಕಿಸ್ತಾನ ಪರ ನಿಂತು ಭಾರತವನ್ನು ಟಾರ್ಗೆಟ್ ಮಾಡಿದ ಆಸೀಸ್ ಆಟಗಾರ | Oneindia Kannada
 ಡೆಂಗ್ಯೂ ರೀತಿಯ ಸೋಂಕು ಪತ್ತೆ

ಡೆಂಗ್ಯೂ ರೀತಿಯ ಸೋಂಕು ಪತ್ತೆ

ನಗರದಲ್ಲಿ ಡೆಂಗ್ಯೂ ಮಾದರಿಯ ಮತ್ತೊಂದು ಸೋಂಕು ಪತ್ತೆಯಾಗಿದೆ.

ಈ ಪೈಕಿ ಥ್ರಂಬೋಸೈಟೋಪೆನಿಯಾ- ಪ್ಲೇಟ್ ಲೆಟ್ ಸಂಖ್ಯೆ ಕುಸಿತ ಕಾಣುವ ಸ್ಥಿತಿಯೊಂದಿಗೆ ವೈರಾಣು ಜ್ವರ ಇರುವುದು ಹೆಚ್ಚು ವರದಿಯಾಗುತ್ತಿರುವ ಪ್ರಕರಣಗಳಾಗಿವೆ.

ಕಟ್ಟಡ ನಿರ್ಮಾಣಕ್ಕೆ ಹತ್ತಿರವಿರುವ ಪ್ರದೇಶಗಳು ಕೈಗಾರಿಕಾ ಪ್ರದೇಶಗಳ ಬಳಿ ಇರುವವರು ಈ ರೀತಿಯ ವೈರಲ್ ಜ್ವರಕ್ಕೆ ಹೆಚ್ಚು ದುರ್ಬಲರಾಗಿರುತ್ತಾರೆ ಹಾಗೂ ಹರಡುವ ಸಾಮರ್ಥ್ಯ ಹೊಂದಿರುತ್ತವೆ.

ಈ ರೀತಿಯ ಜ್ವರವನ್ನು ಹಲವು ಮಂದಿ ಡೆಂಗ್ಯೂ ಎಂದು ತಪ್ಪಾಗಿ ಭಾವಿಸುವುದುಂಟು ಆದರೆ ಡೆಂಗ್ಯೂಗೆ ಟೆಸ್ಟ್ ಮಾಡಿಸಿದರೆ ನೆಗೆಟಿವ್ ವರದಿ ಬರುತ್ತದೆ.

ಕೊಲಂಬಿಯಾ ಏಷ್ಯಾ, ಹೆಬ್ಬಾಳ (ಮಣಿಪಾಲ್ ಹಾಸ್ಪೆಟಲ್ಸ್) ನ ಸಲಹೆಗಾರರಾಗಿರುವ ಡಾ.ಇರ್ಫಾನ್ ಜಾವೀದ್ ಖಾಜಿ, ತಾವು ಪ್ರತಿ 5 ರೋಗಿಗಳ ಪೈಕಿ ಒಬ್ಬರಲ್ಲಿ ಈ ರೀತಿಯ ಕಡಿಮೆ ಪ್ಲೇಟ್ ಲೆಟ್ ಇರುವ ವೈರಲ್ ಫೀವರ್ ಇರುವ ಪ್ರಕರಣಗಳನ್ನು ನೋಡುತ್ತಿರುವುದಾಗಿ ಹೇಳಿದ್ದಾರೆ.

ಸಾಮಾನ್ಯವಾದ ರೋಗಲಕ್ಷಣಗಳೆಂದರೆ ಮೈಯಾಲ್ಜಿಯಾ, ಜ್ವರ, ತಲೆನೋವು, ಕೆಲವೊಮ್ಮೆ ಮೇಲ್ಭಾಗದ ಶ್ವಾಸೇಂದ್ರಿಯ ಸೋಂಕು ಮತ್ತು GI ರೋಗಲಕ್ಷಣಗಳೊಂದಿಗೆ ಸಂಬಂಧಿಸಿದೆ.

English summary
Doctors in Karnataka are seeing an increasing number of viral fever cases in children showing symptoms of Covid and Dengue but testing negative, raising doubts whether this is a result of mutations in the viruses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X