ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆ: ನಿಲುಗಡೆ, ಸಮಯದ ಮಾಹಿತಿ ಇಲ್ಲಿ ಪಡೆಯಿರಿ

ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆ ಆಗಿದೆ. ನಿಲುಗಡೆ, ಸಮಯದ ಮಾಹಿತಿ ಬಗ್ಗೆ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

|
Google Oneindia Kannada News

ಬೆಂಗಳೂರು, ಜನವರಿ 02: ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆ ಆಗಿದೆ. ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ 'DRM Bengaluru', 'ರೈಲು ಸಂಖ್ಯೆ 17326 (ಮೈಸೂರು-ಬೆಳಗಾವಿ) ವಿಶ್ವಮಾನವ ಎಕ್ಸ್‌ಪ್ರೆಸ್‌ನ ಪರಿಷ್ಕೃತ ಸಮಯಗಳು. 06.02.2023 ರಿಂದ ಬದಲಾವಣೆಯಾಗಲಿವೆ. ಸಮಯ/ನಿಲುಗಡೆಗಳ ವಿವರಗಳು ಕೆಳಕಂಡಂತಿವೆ' ಎಂದು ತಿಳಿಸಿದೆ. ಮೈಸೂರಿನಿಂದ ಹಾವೇರಿವರೆಗಿನ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು DRM Bengaluru ಮಾಹಿತಿ ನೀಡಿದೆ. ಕರಜಗಿ ರೈಲು ನಿಲ್ದಾಣದಿಂದ ಬೆಳಗಾವಿ ವರೆಗೆ ಸಮಯ ಬದಲಾವಣೆ ಆಗಿದೆ. ಸಮಯ/ನಿಲುಗಡೆಗಳ ವಿವರಗಳನ್ನು ನೀಡಲಾಗಿದೆ.

ನಿಲುಗಡೆ- ಈಗಿರುವ ಸಮಯ- ಬದಲಾದ ಸಮಯ

ನಿಲುಗಡೆ- ಈಗಿರುವ ಸಮಯ- ಬದಲಾದ ಸಮಯ

ಕರಜಗಿ ರೈಲು ನಿಲ್ದಾಣ- 15:50 - 16:05
ಯಲವಗಿ ರೈಲು ನಿಲ್ದಾಣ- 15:31/ 15:32- 15:41/ 15:42
ಹುಬ್ಬಳ್ಳಿ ರೈಲು ನಿಲ್ದಾಣ- 17:20/ 17: 30- 17:55/ 18.00
ಧಾರವಾಡ ರೈಲು ನಿಲ್ದಾಣ- 17:20/ 16: 00- 18.28/ 18.32
ಮುಗಡ್‌ ರೈಲು ನಿಲ್ದಾಣ- 18.20/ 18.21- 18.50/ 18.51
ಅಳ್ನಾವರ ರೈಲು ನಿಲ್ದಾಣ- 18.47/ 18.48- 19.15/ 19.16
ತಾವರಗಟ್ಟಿ ರೈಲು ನಿಲ್ದಾಣ- 19.00/ 19.01- 19.24/ 19.25
ಲೋಂಡಾ ರೈಲು ನಿಲ್ದಾಣ- 19.48/ 19.50- 20.04/ 20.06
ಖಾನಾಪುರ ರೈಲು ನಿಲ್ದಾಣ- 20.19/ 20.20- 20.35/ 20.36
ಬೆಳಗಾವಿ ರೈಲು ನಿಲ್ದಾಣ- 21.20- 21.30

 ಅತ್ಯಧಿಕ ಸರಕು ಸಾಗಣೆ

ಅತ್ಯಧಿಕ ಸರಕು ಸಾಗಣೆ

ನೈಋತ್ಯ ರೈಲ್ವೆಯು ಜನವರಿ ತಿಂಗಳಲ್ಲಿ 4.59 ಮಿಲಿಯನ್ ಟನ್‌ಗಳಷ್ಟು ಅತ್ಯಧಿಕ ಸರಕು ಸಾಗಣೆಯನ್ನು ಮಾಡಿದೆ. ಇದು ನೈಋತ್ಯ ರೈಲ್ವೆಯ ದಾಖಲೆಯಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಟ್ವೀಟ್‌ ಮಾಡಿರುವ ನೈಋತ್ಯ ರೈಲ್ವೆ ಜನವರಿ ತಿಂಗಳು ಒಂದರಲ್ಲೇ 4.59 ಮಿಲಿಯನ್ ಟನ್‌ಗಳಷ್ಟು ಸರಕು ಸಾಗಣೆಯನ್ನು ಮಾಡಿದ್ದೇವೆ. ನೈರುತ್ಯ ರೈಲ್ವೆ ರಚನೆಯಾದ ನಂತರ ಇದು ಅತ್ಯಧಿಕವಾಗಿದೆ ಎಂದು ತಿಳಿಸಿದೆ.

ನೈರುತ್ಯ ರೈಲ್ವೆ ವಲಯ

ನೈರುತ್ಯ ರೈಲ್ವೆ ವಲಯ

ನೈರುತ್ಯ ರೈಲ್ವೆ ವಲಯವು (SWR) ಭಾರತದ 19 ರೈಲ್ವೆ ವಲಯಗಳಲ್ಲಿ ಒಂದಾಗಿದೆ. ಕರ್ನಾಟಕದ ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. SWR ಅನ್ನು 2003 ರಲ್ಲಿ ದಕ್ಷಿಣ ರೈಲ್ವೆ, ದಕ್ಷಿಣ ಮಧ್ಯ ರೈಲ್ವೇ ಮತ್ತು ಮಧ್ಯ ರೈಲ್ವೆಗಳಿಂದ ಬೇರ್ಪಡಿಸುವ ಮೂಲಕ ರಚಿಸಲಾಗಿದೆ.

ಕೊಂಕಣ ರೈಲು ಮಾರ್ಗ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ, ಕೃಷ್ಣಗಿರಿ ಜಿಲ್ಲೆ, ಧರ್ಮಪುರಿ ಜಿಲ್ಲೆಯ ಕೆಲವು ಭಾಗಗಳು ಮತ್ತು ತಮಿಳುನಾಡಿನ ತಿರುಪತ್ತೂರು ಜಿಲ್ಲೆಗಳನ್ನು ಹೊರತುಪಡಿಸಿ ನೈಋತ್ಯ ರೈಲ್ವೆಯು ಕರ್ನಾಟಕ ಮತ್ತು ಗೋವಾ ರಾಜ್ಯದ ಹೆಚ್ಚಿನ ರೈಲು ಮಾರ್ಗಗಳನ್ನು ಒಳಗೊಂಡಿದೆ.

ನೈರುತ್ಯ ರೈಲ್ವೆ ವಲಯದ ವಿಭಾಗಗಳು

ನೈರುತ್ಯ ರೈಲ್ವೆ ವಲಯದ ವಿಭಾಗಗಳು

ಬೆಂಗಳೂರು ರೈಲ್ವೆ ವಿಭಾಗ, ಮೈಸೂರು ರೈಲ್ವೆ ವಿಭಾಗ, ಹುಬ್ಬಳ್ಳಿ ರೈಲ್ವೆ ವಿಭಾಗ, ಕಲಬುರಗಿ ರೈಲ್ವೆ ವಿಭಾಗಗಳನ್ನು ನೈರುತ್ಯ ರೈಲ್ವೆ ವಲಯ ಒಳಗೊಂಡಿದೆ. 10 ನವೆಂಬರ್ 2021ರಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ, ಬ್ರಾಡ್ ಗೇಜ್ ಮಾರ್ಗದ 3,566 ಕಿಲೋಮೀಟರ್‌ಗಳಲ್ಲಿ (2,216 ಮೈಲಿ) ಒಟ್ಟು 1,233 ಕಿಲೋಮೀಟರ್‌ಗಳಷ್ಟು (766 ಮೈಲಿ) ವಲಯದಲ್ಲಿ ವಿದ್ಯುದೀಕರಣಗೊಂಡಿದೆ.

ತುಮಕೂರು-ಚಿತ್ರದುರ್ಗ, ಚಿತ್ರದುರ್ಗ-ದಾವಣಗೆರೆ, ತುಮಕೂರು-ಕದಿರಿದೇವರಪಲ್ಲಿ, ಹುಬ್ಬಳ್ಳಿ-ಬೆಳಗಾವಿ ಮೂಲಕ ಕಿತ್ತೂರು, ಯಲವಿಗಿ-ಗದಗ, ಗದಗ-ವಾಡಿ, ಗಿಣಿಗೇರಾ-ರಾಯಚೂರು, ಹುಬ್ಬಳ್ಳಿ- ಅಂಕೋಲಾ, ಮಿರಜ-ಬಾಗಲಕೋಟೆ-ಚಿಕ್ಕಮೂರು-ಬಾಗಲಕೋಟೆ - ಹೊಸ ರೈಲು ಮಾರ್ಗಗಳ ನಿರ್ಮಾಣ ಹಂತದಲ್ಲಿವೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

English summary
Mysore-Belagavi Vishwamanava Express train timings have changed. 'DRM Bengaluru' informed on Twitter, 'Revised Timings of Train No. 17326 (Mysore-Belgawi) Vishwamanava Express. There will be change from 06.02.2023. Details of timings/stops are given below, ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆ ಆಗಿದೆ. ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ 'DRM Bengaluru'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X