• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಲಾನ್ ಫಾರ್ಮಾ ಕಂಪನಿಯಿಂದ ರಾಜ್ಯಕ್ಕೆ ಹೆಚ್ಚುವರಿ ರೆಮ್ಡೆಸಿವಿರ್

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಮೈಲಾನ್ ಫಾರ್ಮಾ ಕಂಪನಿಯು ಕರ್ನಾಟಕ ರಾಜ್ಯಕ್ಕೆ ಹೆಚ್ಚುವರಿ ರೆಮ್ಡೆಸಿವಿರ್ ಚುಚ್ಚುಮದ್ದು ಒದಗಿಸಲು ಒಪ್ಪಿಗೆ ಸೂಚಿಸಿದೆ.

ಕೊರೊನಾ ಚಿಕಿತ್ಸೆಯಲ್ಲಿ ಬಳಸುವ ರೆಮ್ಡೆಸಿವಿರ್ ಉತ್ಪಾದನೆ ಮತ್ತು ಪೂರೈಕೆ ಏರುಪೇರಾದ ಕಾರಣ ಕಳೆದ ವಾರದಿಂದ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಫಾರ್ಮಾ ಕಂಪನಿಗಳು ತಮ್ಮ ರೆಮ್ಡೆಸಿವಿರ್ ಉತ್ಪಾದನೆಯಲ್ಲಿ ಶೇಕಡಾ 70ರಷ್ಟು ಕೇಂದ್ರ ಸರ್ಕಾರವು ಸೂಚಿಸುವ ರಾಜ್ಯಗಳಿಗೆ ನಿಗದಿತ ಪ್ರಮಾಣದಲ್ಲಿ ಪೂರೈಕೆ ಮಾಡಬೇಕಾಗುತ್ತದೆ. ಇನ್ನುಳಿದ ಶೇಕಡಾ 30ರಷ್ಟು ಉತ್ಪಾದನೆಯ ವಿತರಣೆಯನ್ನು ಕಂಪನಿಗಳ ವಿವೇಚನೆಗೆ ಬಿಡಲಾಗಿದೆ ಎಂದು ತಿಳಿಸಿತ್ತು.

ಬೆಂಗಳೂರಿನಲ್ಲಿ 2000 ಐಸಿಯು ಹಾಸಿಗೆಯ ಮೇಕ್‌ಶಿಫ್ಟ್ ಆಸ್ಪತ್ರೆ ನಿರ್ಮಾಣಬೆಂಗಳೂರಿನಲ್ಲಿ 2000 ಐಸಿಯು ಹಾಸಿಗೆಯ ಮೇಕ್‌ಶಿಫ್ಟ್ ಆಸ್ಪತ್ರೆ ನಿರ್ಮಾಣ

ಕರ್ನಾಟಕಕ್ಕೆ ಏಪ್ರಿಲ್ 30ರವರೆಗಿನ ಬಳಕೆಗೆ 25352 ರೆಮ್ಡೆಸಿವಿರ್ ವೈಯಲ್ಸ್ ಹಂಚಿಕೆ ಮಾಡಿತ್ತು. ಆದರೆ ರಾಜ್ಯ ಹೆಚ್ಚುವರಿ ರೆಮ್ಡೆಸಿವಿರ್ ವೈಯಲ್ಸ್‌ಗೆ ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಔಷಧ ಇಲಾಖೆ ನಿರ್ವಹಿಸುವ ಸದಾನಂದ ಗೌಡರು ಮಧ್ಯಪ್ರವೇಶಿಸಿ ರಾಜ್ಯಕ್ಕೆ ಹೆಚ್ಚುವರಿ 25,000 ರೆಮ್ಡೆಸಿವಿರ್ ವೈಯಲ್ಸ್ ಹಂಚಿಕೆಯಾಯಿತು. ಈ ವಾರದ ಬಳಕೆಗೆ ರಾಜ್ಯಕ್ಕೆ ಹಂಚಿಕೆಯಾದ ಒಟ್ಟು 50352 ವೈಯಲ್ಸ್ ರೆಮ್ಡೆಸಿವಿರಿನಲ್ಲಿ ಮುಕ್ಕಾಲು ಭಾಗವನ್ನು ಮೈಲಾನ್ ಕಂಪನಿಯೇ ಪೂರೈಸಬೇಕಿದೆ.

ಬೆಂಗಳೂರಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಮೈಲಾನ್ ಕಂಪನಿ ಔಷಧ ಉತ್ಪಾದನಾ ಘಟಕಕ್ಕೆ ಇಂದು ಭೇಟಿ ನೀಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಬೊಮ್ಜೈ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

"ರಾಜ್ಯಕ್ಕೆ ಇಂದು 15000 ವೈಯಲ್ಸ್ ರೆಮ್ಡೆಸಿವಿರ್ ಬಿಡುಗಡೆ ಆಗಿದೆ. ಮೈಲಾನ್ ಕಂಪನಿ ಉತ್ಪಾದನೆಯನ್ನು ಹೆಚ್ಚಿಸಿದೆ. ಅಮೆರಿಕದ ಗಿಲೀಡ್ ಸೈಯನ್ಸಸ್ ಕಂಪನಿಯಿಂದ ರೆಮ್ಡೆಸಿವಿರ್ ಉತ್ಪಾದನೆಯ ಲೈಸನ್ಸ್ ಪಡೆದಿರುವ ಭಾರತದ ಇತರ ಫಾರ್ಮಾ ಕಂಪನಿಗಳ ಜೊತೆಗೂ ಹೆಚ್ಚುವರಿ ಚುಚ್ಚುಮದ್ದು ಪೂರೈಸುವ ಬಗ್ಗೆ ಮಾತುಕತೆ ನಡೆದಿದೆ. ಹಾಗಾಗಿ ಇನ್ನೊಂದು ವಾರದಲ್ಲಿ ಈ ಚುಚ್ಚುಮದ್ದು ವಿಫುಲವಾಗಿ ಲಭ್ಯವಾಗಲಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ" ಎಂದು ಭರವಸೆ ನೀಡಿದರು.

ಬೆಂಗಳೂರು ಕೇಂದ್ರ ಸಂಸದ ಪಿ ಸಿ ಮೋಹನ್, ಬೆಂಗಳೂರು ದಕ್ಷಿಣ ಶಾಸಕ ಕೃಷ್ಣಪ್ಪ, ಎಂಎಲ್ಸಿ ಡಾ ವೈ ಎನ್ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

English summary
Mylan Pharma has agreed to provide additional remdisivir injections to Karnataka,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X