ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ : ಕುಮಾರಸ್ವಾಮಿ ಭಾವುಕ ನುಡಿ

|
Google Oneindia Kannada News

Recommended Video

ಮತ್ತೆ ಭಾವುಕರಾಗಿ ಮಾತನಾಡಿದ್ದ ಎಚ್ ಡಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಅಕ್ಟೋಬರ್ 26: ಚುನಾವಣಾ ಸಮಯದಲ್ಲಿ ಸಾವಿನ ಮಾತನ್ನಾಡಿದ್ದ ಕುಮಾರಸ್ವಾಮಿ ಅವರು ಈಗ ಮತ್ತೊಮ್ಮೆ ಅದೇ ಮಾತುಗಳನ್ನು ಆಡಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಆಯೋಜಿಸಿದ್ದ ಉಪ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭಾವುಕರಾದ ಕುಮಾರಸ್ವಾಮಿ, 'ನಾನು ಎಷ್ಟು ದಿನ ಬದುಕಿರುತ್ತೀನೋ ಗೊತ್ತಿಲ್ಲ' ಎಂದಿದ್ದಾರೆ.

ತೀವ್ರ ಭಾವುಕರಾಗಿ ಮಾತನಾಡಿದ ಸಿಎಂ, 'ಆರೋಗ್ಯ ಕೈಕೊಡುತ್ತಿದೆ, ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ, ಇಸ್ರೆಲ್‌ಗೆ ಹೋಗಿದ್ದಾಗಲೇ ಸಾಯಬೇಕಿತ್ತು, ಬದುಕಿ ಬಂದಿದ್ದೇನೆ' ಎಂದಿದ್ದಾರೆ.

ವಿಜಯ್ ಪ್ರಕಾಶ್ ಹಾಡಿಗೆ ಭಾವುಕರಾಗಿ ಕಣ್ಣೀರು ಹಾಕಿದ ಕುಮಾರಸ್ವಾಮಿ ವಿಜಯ್ ಪ್ರಕಾಶ್ ಹಾಡಿಗೆ ಭಾವುಕರಾಗಿ ಕಣ್ಣೀರು ಹಾಕಿದ ಕುಮಾರಸ್ವಾಮಿ

ನಾನು ಮೂಲತಃ ರಾಜಕಾರಣಿಯಲ್ಲಿ ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಿದ್ದೇನೆ. ಕಳೆದ ಐದು ತಿಂಗಳಿನಿಂದ ನನ್ನನ್ನು ಬಿಜೆಪಿ ನಾಯಕರು ಅನುಮಾನದಿಂದಲೇ ನೋಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರ ದೇವರು ಕೊಟ್ಟ ಅವಕಾಶ

ಮೈತ್ರಿ ಸರ್ಕಾರ ದೇವರು ಕೊಟ್ಟ ಅವಕಾಶ

ಕಾಂಗ್ರೆಸ್‌-ಬಿಜೆಪಿ ಪಕ್ಷಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ, ಆದರೆ ದೇಶ ಕವಲು ದಾರಿಯಲ್ಲಿರುವ ಸಂದರ್ಭದಲ್ಲಿ ಮೈತ್ರಿ ಸರ್ಕಾರ ರಚನೆ ಆಗಿದೆ. ಈ ಮೈತ್ರಿ ಸರ್ಕಾರ ದೇವರು ಕೊಟ್ಟ ಅವಕಾಶ ಎಂದು ಹೇಳಿದರು.

ಕುಮಾರಸ್ವಾಮಿ ಅನಾರೋಗ್ಯ: ಜಯದೇವ ವೈದ್ಯರ ರಿಪೋರ್ಟ್‌ಕುಮಾರಸ್ವಾಮಿ ಅನಾರೋಗ್ಯ: ಜಯದೇವ ವೈದ್ಯರ ರಿಪೋರ್ಟ್‌

12 ವರ್ಷದ ಹಿಂದೆ ರಾಜಕೀಯ ಹೀಗಿರಲಿಲ್ಲ

12 ವರ್ಷದ ಹಿಂದೆ ರಾಜಕೀಯ ಹೀಗಿರಲಿಲ್ಲ

12 ವರ್ಷದ ಹಿಂದೆ ಬಿಜೆಪಿ ಜೊತೆ ಸರ್ಕಾರ ರಚಿಸಿದ್ದಾಗ ಇಷ್ಟೊಂದು ಅಪಪ್ರಚಾರ ಮಾಡಲಾಗಿರಲಿಲ್ಲ. ಬಿಜೆಪಿ ಪಕ್ಷವು ಅಪಪ್ರಚಾರದಲ್ಲಿ ತೊಡಗಿಕೊಂಡಿದೆ. ಆ ಪಕ್ಷದ ಮುಖಂಡರು ನನ್ನ ಆರೋಗ್ಯ ಸಮಸ್ಯೆಯನ್ನು ಸಹ ಗೇಲಿ ಮಾಡುತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಆಡಳಿತದಲ್ಲಿ ಕನ್ನಡ ಬಳಸಿರೆಂದ ಎಚ್‌ಡಿಕೆ ಟ್ವಿಟ್ಟರ್‌ನಲ್ಲಿ ಇಂಗ್ಲೀಷ್‌: ನೆಟ್ಟಿಗರ ಅಸಮಾಧಾನ ಆಡಳಿತದಲ್ಲಿ ಕನ್ನಡ ಬಳಸಿರೆಂದ ಎಚ್‌ಡಿಕೆ ಟ್ವಿಟ್ಟರ್‌ನಲ್ಲಿ ಇಂಗ್ಲೀಷ್‌: ನೆಟ್ಟಿಗರ ಅಸಮಾಧಾನ

ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ

ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ

ನಾನು ರಾಜಕೀಯಕ್ಕೆ ಬರುವ ಮುಂಚಿನಿಂದಲೇ ಭಾವುಕಜೀವಿ. ಮಾನವೀಯತೆಯನ್ನು ಮೈಗೂಡಿಸಿಕೊಂಡಿದ್ದೇನೆ. ನನ್ನ ವಿರುದ್ಧ ವೈಯಕ್ತಿಕ ದಾಳಿ ನಡೆಸಿದರೂ ನಾನು ದ್ವೇಷ ಸಾಧಿಸಲು ಹೋಗುವುದಿಲ್ಲ. ನನ್ನ ಗಮನವೆಲ್ಲಾ ಬಡವರ ಮೇಲೆ, ರೈತರ ಮೇಲೆ ಇರುತ್ತದೆ ಎಂದು ಅವರು ಭಾವುಕವಾಗಿ ಹೇಳಿದರು.

ಉಪ ಚುನಾವಣೆ ಪ್ರಚಾರದಲ್ಲಿ ಹುಮ್ಮಸ್ಸು ಕಳೆದುಕೊಂಡಿತೇ ಜೆಡಿಎಸ್? ಉಪ ಚುನಾವಣೆ ಪ್ರಚಾರದಲ್ಲಿ ಹುಮ್ಮಸ್ಸು ಕಳೆದುಕೊಂಡಿತೇ ಜೆಡಿಎಸ್?

ರೈತ ಆತ್ಮಹತ್ಯೆ ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಿದೆ

ರೈತ ಆತ್ಮಹತ್ಯೆ ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಿದೆ

ರೈತರ ಸರಣಿ ಆತ್ಮಹತ್ಯೆಗಳು ನನ್ನ ಮನಸ್ಸನ್ನು ಬಹಳ ಘಾಸಿಗೊಳಿಸಿವೆ. ಅದು ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಆದರೆ ಕೆಲವರು ನನ್ನ ಆರೋಗ್ಯ ಸ್ಥಿತಿಯ ಬಗ್ಗೆ ವ್ಯಂಗ್ಯ ಮಾಡುತ್ತಾರೆ ಎಂದು ಸಿಎಂ ಹೇಳಿದರು.

ಸಿಎಂ, ಡಿಸಿಎಂ ಕಳೆದುಹೋಗಿದ್ದಾರೆ, ಹುಡುಕಿಕೊಡಿ ಎಂದು ದೂರು ಕೊಡಲು ಮುಂದಾದ ಮೈಸೂರಿನ ವಕೀಲ ಸಿಎಂ, ಡಿಸಿಎಂ ಕಳೆದುಹೋಗಿದ್ದಾರೆ, ಹುಡುಕಿಕೊಡಿ ಎಂದು ದೂರು ಕೊಡಲು ಮುಂದಾದ ಮೈಸೂರಿನ ವಕೀಲ

ರೈತರ ಸಾಲಮನ್ನಾ ಮಾಡಿದ್ದೇನೆ

ರೈತರ ಸಾಲಮನ್ನಾ ಮಾಡಿದ್ದೇನೆ

ಮೈತ್ರಿ ಸರ್ಕಾರ ಬೀಳುತ್ತೆ ಎಂಬ ಯಾವ ಅನುಮಾನವೂ ಬೇಡ. ಮೈತ್ರಿ ಸರ್ಕಾರದಲ್ಲಿ ಇದ್ದುಕೊಂಡೇ ರೈತರ ಸಾಲಮನ್ನಾದ ನಿರ್ಣಯ ಕೈಗೊಂಡಿದ್ದೇನೆ. ಸಹಕಾರಿ ಬ್ಯಾಂಕುಗಳ 10,300 ಕೋಟಿ ಸಾಲಮನ್ನಾ ಮಾಡಿದ್ದೇವೆ. ಸಹಕಾರಿ ಬ್ಯಾಂಕಿನ 600 ಕೋಟಿ ಸಾಲಮನ್ನಾ ಮಾಡಿದರೆ ಸಂಪೂರ್ಣ ಕಂತು ಮುಗಿದಂತಾಗುತ್ತದೆ ಎಂದರು.

ಆಡಳಿತದಲ್ಲಿ ಕನ್ನಡ ಬಳಸಿರೆಂದ ಎಚ್‌ಡಿಕೆ ಟ್ವಿಟ್ಟರ್‌ನಲ್ಲಿ ಇಂಗ್ಲೀಷ್‌: ನೆಟ್ಟಿಗರ ಅಸಮಾಧಾನ ಆಡಳಿತದಲ್ಲಿ ಕನ್ನಡ ಬಳಸಿರೆಂದ ಎಚ್‌ಡಿಕೆ ಟ್ವಿಟ್ಟರ್‌ನಲ್ಲಿ ಇಂಗ್ಲೀಷ್‌: ನೆಟ್ಟಿಗರ ಅಸಮಾಧಾನ

ನವೆಂಬರ್‌ನಿಂದ ಹಿರಿಯರಿಗೆ ಸಿಹಿ ಸುದ್ದಿ

ನವೆಂಬರ್‌ನಿಂದ ಹಿರಿಯರಿಗೆ ಸಿಹಿ ಸುದ್ದಿ

ಬಜೆಟ್‌ನಲ್ಲಿ ಘೋಷಿಸಿದ್ದ, ಹಿರಿಯರಿಗೆ ಪಿಂಚಣಿ ಹೆಚ್ಚಳವು ನವೆಂಬರ್ 1 ರಿಂದ ಜಾರಿಗೆ ಬರುತ್ತದೆ. 600 ರ ಬದಲಿಗೆ 1000 ಪಿಂಚಣಿಯು ನವೆಂಬರ್‌ ಒಂದರಿಂದ ಹಿರಿಯರ ಖಾತೆಗೆ ಜಮಾ ಆಗಲಿದೆ ಎಂದು ಅವರು ಹೇಳಿದರು.

English summary
My health is not good i may die at any time said CM Kumaraswamy. He was talking in Mandya he was addressing a election campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X