ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೇಕಿಂಗ್ ನ್ಯೂಸ್; ಜೂನ್ 1ರಿಂದ ಬಾಗಿಲು ತೆರೆಯಲಿವೆ ದೇವಾಲಯ

|
Google Oneindia Kannada News

ಬೆಂಗಳೂರು, ಮೇ 26 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ದೇವಾಲಯಗಳನ್ನು ಮುಚ್ಚಲಾಗಿತ್ತು. ಜೂನ್ 1ರಿಂದ ಕರ್ನಾಟಕದಲ್ಲಿ ದೇವಾಲಯಗಳು ಬಾಗಿಲು ತೆರೆಯಲಿವೆ.

ಮಂಗಳವಾರ ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಕುರಿತು ಮಾಹಿತಿ ನೀಡಿದರು. " ಕರ್ನಾಟಕ ಸರ್ಕಾರ ಜೂನ್ 1ರಿಂದ ದೇವಾಲಯದ ಬಾಗಿಲು ತೆರೆಯಲು ತೀರ್ಮಾನಿಸಿದೆ" ಎಂದು ಹೇಳಿದರು.

ಕೊರೊನಾ ಭೀತಿ; ತಿರುಪತಿ ದೇವಾಲಯ ಬಂದ್ ಕೊರೊನಾ ಭೀತಿ; ತಿರುಪತಿ ದೇವಾಲಯ ಬಂದ್

"ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತದೆ. ಅದನ್ನು ಕಡ್ಡಾಯವಾಗಿ ಪಾಲಿಸಬೇಕು. ಮೇ 31ರಂದು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ದೇವಾಲಯಗಳಿಗೆ ಸೂಚನೆ ನೀಡಲಾಗಿದೆ" ಎಂದು ಸಚಿವರು ವಿವರಿಸಿದರು.

ಶಿವನ ದೇವಸ್ಥಾನ ಒಳಗೆ ಸ್ಕೂಟರ್ ನುಗ್ಗಿಸಿದ ಯುವತಿಶಿವನ ದೇವಸ್ಥಾನ ಒಳಗೆ ಸ್ಕೂಟರ್ ನುಗ್ಗಿಸಿದ ಯುವತಿ

Muzrai Temple To Open In Karnataka From June 1

ರಾಜ್ಯದ ಆಯ್ದ ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಆನ್‌ಲೈನ್ ಸೇವೆಗಳ ಬುಕ್ಕಿಂಗ್ ಬುಧವಾರದಿಂದ ಆರಂಭವಾಗಲಿದೆ. ಆನ್‌ ಲೈನ್ ದರ್ಶನ ವ್ಯವಸ್ಥೆಯೂ ಆರಂಭವಾಗಲಿದೆಯೇ? ಎಂದು ಕಾದು ನೋಡಬೇಕು.

ಹಣಗೆರೆಕಟ್ಟೆಯ ಚೌಡೇಶ್ವರಿ ದೇವಸ್ಥಾನ ಹಾಗೂ ದರ್ಗಾ ಬಂದ್ ಹಣಗೆರೆಕಟ್ಟೆಯ ಚೌಡೇಶ್ವರಿ ದೇವಸ್ಥಾನ ಹಾಗೂ ದರ್ಗಾ ಬಂದ್

ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ರಾಜ್ಯದಲ್ಲಿ ದೇವಾಲಯ, ಚರ್ಚ್, ಮಸೀದಿಗಳನ್ನು ಮುಚ್ಚಲಾಗಿದೆ. ಯುಗಾದಿ, ರಾಮನವಮಿ ಸೇರಿದಂತೆ ಯಾವ ಹಬ್ಬಕ್ಕೂ ದೇವಾಲಯಗಳಿಗೆ ಭಕ್ತರ ಪ್ರವೇಶ ಇರಲಿಲ್ಲ.

ಗುಡ್ ಫ್ರೈಡೇ, ರಂಜಾನ್ ಸಂದರ್ಭದಲ್ಲಿಯೂ ಚರ್ಚ್, ಮಸೀದಿಗೆ ಜನರು ಭೇಟಿ ನೀಡದಂತೆ ನಿರ್ಬಂಧ ಹೇರಲಾಗಿತ್ತು. ಈಗ ದೇವಾಲಯ ಬಾಗಿಲು ತೆರೆಯುವ ಕುರಿತು ಘೋಷಣೆ ಮಾಡಲಾಗಿದೆ. ಆದರೆ, ಚರ್ಚ್ ಮತ್ತು ಮಸೀದಿ ಬಾಗಿಲು ತೆರೆಯಲು ಅವಕಾಶ ನೀಡಲಾಗುತ್ತದೆಯೇ? ಎಂಬುದನ್ನು ಸ್ಪಷ್ಟಪಡಿಸಿಲ್ಲ.

English summary
Karnataka muzrai department minister Kota Srinivas Poojari said that govt has decided to open temples from June 1, 2020. Devotes must follow standard operating protocol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X