ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸ್ಥಾನಕ್ಕಾಗಿ ಮುಸ್ಲಿಂ ರಾಜಕೀಯ ನಾಯಕರಿಂದ ದೆಹಲಿಯಲ್ಲಿ ಲಾಬಿ

|
Google Oneindia Kannada News

ನವದೆಹಲಿ, ಡಿಸೆಂಬರ್ 20: ಸಚಿವ ಸ್ಥಾನಕ್ಕಾಗಿ ಮುಸ್ಲಿಂ ಶಾಸಕರು ಲಾಭಿ ಮಾಡಲು ಪ್ರಾರಂಭಿಸಿದ್ದು, ದೆಹಲಿ ಮಟ್ಟದಲ್ಲಿ ಲಾಭಿಗೆ ಯತ್ನಿಸುತ್ತಿದ್ದಾರೆ.

ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್‌, ಜಮೀರ್‌ ಅಹ್ಮದ್ ಮತ್ತು ಎನ್‌.ಎ.ಹ್ಯಾರಿಸ್ ಅವರುಗಳು ನಿನ್ನೆಯೇ ದೆಹಲಿಗೆ ತೆರಳಿದ್ದು, ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಪ್ರಸ್ತುತ ಇಬ್ಬರು ಮುಸ್ಲಿಂ ಸಮುದಾಯದ ಸಚಿವರು ಸಂಪುಟದಲ್ಲಿದ್ದಾರೆ, ಇನ್ನೊಬ್ಬ ಮುಸ್ಲಿಂ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಮುಸ್ಲಿಂ ಶಾಸಕರು ಲಾಭಿ ನಡೆಸುತ್ತಿದ್ದಾರೆ.

ಇಬ್ಬರು ಮುಸ್ಲಿಂ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಒತ್ತಾಯ ಇಬ್ಬರು ಮುಸ್ಲಿಂ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಒತ್ತಾಯ

ಕಳೆದ ಸರ್ಕಾರದ ಅವಧಿಯಲ್ಲಿ ಮೂರು ಜನ ಮುಸ್ಲಿಂರಿಗೆ ಅವಕಾಶ ನೀಡಲಾಗಿತ್ತು. ಈ ಬಾರಿಯೂ ಮೂರು ಮುಸ್ಲಿಂ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಎನ್‌.ಎ.ಹ್ಯಾರಿಸ್‌ಗೆ ಸಚಿವ ಸ್ಥಾನಕ್ಕೆ ಲಾಭಿ

ಎನ್‌.ಎ.ಹ್ಯಾರಿಸ್‌ಗೆ ಸಚಿವ ಸ್ಥಾನಕ್ಕೆ ಲಾಭಿ

ಶಾಂತಿನಗರ ಕ್ಷೇತ್ರದ ಶಾಸಕ ಎನ್‌.ಎ.ಹ್ಯಾರಿಸ್‌ ಅವರಿಗೆ ಸಚಿವ ಸ್ಥಾನ ಕೊಡಿಸಲು ರಿಜ್ವಾನ್ ಅರ್ಷದ್‌ ಹಾಗೂ ಜಮೀರ್ ಅಹ್ಮದ್ ಅವರು ಲಾಭಿ ಪ್ರಾರಂಭಿಸಿದ್ದಾರೆ. ಗುಲಾಂ ನಬಿ ಆಜಾದ್ ಅವರ ಬಳಿ ಮಾತನಾಡಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ : ಒನ್ ಇಂಡಿಯಾ ಸಮೀಕ್ಷೆಯಲ್ಲಿ ಓದುಗರು ಹೇಳಿದ್ದೇನು?ಸಂಪುಟ ವಿಸ್ತರಣೆ : ಒನ್ ಇಂಡಿಯಾ ಸಮೀಕ್ಷೆಯಲ್ಲಿ ಓದುಗರು ಹೇಳಿದ್ದೇನು?

ಜಮೀರ್ ಮತ್ತು ಖಾದರ್ ಮುಸ್ಲಿಂ ಸಚಿವರು

ಜಮೀರ್ ಮತ್ತು ಖಾದರ್ ಮುಸ್ಲಿಂ ಸಚಿವರು

ಪ್ರಸ್ತುತ ಜಮೀರ್ ಅಹ್ಮದ್ ಹಾಗೂ ಯು.ಟಿ.ಖಾದರ್ ಅವರುಗಳು ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮೂರು ಮಂದಿ ಮುಸ್ಲಿಂ ಶಾಸಕರು ಮಂತ್ರಿಗಳಾಗಿದ್ದರು.

ರಮೇಶ್ ಜಾರಕಿಹೊಳಿ ಸಂಪುಟದಿಂದ ಹೊರಕ್ಕೆ?, 5 ಕಾರಣಗಳು ರಮೇಶ್ ಜಾರಕಿಹೊಳಿ ಸಂಪುಟದಿಂದ ಹೊರಕ್ಕೆ?, 5 ಕಾರಣಗಳು

ಮೊಹಮ್ಮದ್ ನಲಪಾಡ್‌ ತಂದೆ ಹ್ಯಾರಿಸ್‌

ಮೊಹಮ್ಮದ್ ನಲಪಾಡ್‌ ತಂದೆ ಹ್ಯಾರಿಸ್‌

ವಿದ್ವತ್‌ ಮೇಲೆ ಕ್ರೂರವಾಗಿ ಹಲ್ಲೆ ಮಾಡಿ ಸುದ್ದಿ ಆಗಿದ್ದ ಮೊಹಮ್ಮದ್ ನಲಪಾಡ್ ಅವರ ತಂದೆ ಎನ್‌.ಎ.ಹ್ಯಾರಿಸ್‌ ಅವರು ಕಳೆದ ಬಾರಿಯೇ ಸಚಿವ ಆಕಾಂಕ್ಷಿ ಆಗಿದ್ದರು ಆದರೆ ಅವರಿಗೆ ಸ್ಥಾನ ದೊರೆತಿರಲಿಲ್ಲ. ಹಾಗಾಗಿ ಈ ಬಾರಿ ರೋಷನ್ ಬೇಗ್ ಹಾಗೂ ಜಮೀರ್ ಸಹಾಯದೊಂದಿಗೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ಸಂಪುಟ ವಿಸ್ತರಣೆ ಎಂದು?

ಸಂಪುಟ ವಿಸ್ತರಣೆ ಎಂದು?

ಡಿಸೆಂಬರ್ 22 ರಂದು ಸಂಪುಟ ವಿಸ್ತರಣೆ ಪಕ್ಕಾ ಎನ್ನಲಾಗಿದೆ. ಅಂದೇ ನಿಗಮ ಮಂಡಳಿಗಳಿಗೂ ನೇಮಕ ಮಾಡಲಾಗುತ್ತದೆ. ಕಾಂಗ್ರೆಸ್‌ ಬಳಿ ಆರು ಸ್ಥಾನಗಳಷ್ಟೆ ಇದ್ದು, 15 ಮಂದಿ ಆಕಾಂಕ್ಷಿಗಳಿದ್ದಾರೆ, ಯಾರಿಗೆ ಸಿಗುತ್ತದೆ, ಯಾರಿಗಿಲ್ಲ ಎಂಬುದು ಡಿಸೆಂಬರ್ 22 ಕ್ಕೆ ಗೊತ್ತಾಗುತ್ತದೆ.

English summary
Zameer ahmed, Roshan Beg and NA Haris were visited Delhi and talked to congress seniour leader Gulam Nabi Azad for minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X