ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಸೀಮಯ್ಯ ವಿವಾದಕ್ಕೆ ಮುರುಘಾ ಶ್ರೀಗಳಿಂದ ಸ್ಪಷ್ಟನೆ

By Mahesh
|
Google Oneindia Kannada News

ದಾವಣಗೆರೆ, ಏ.6: ದಾಸೀಮಯ್ಯನವರ ಇರುವಿಕೆ ಬಗ್ಗೆ ಎದ್ದಿರುವ ವಾದ -ವಿವಾದ, ಯಾರು ನಿಜವಾದ ದಾಸೀಮಯ್ಯ ಎಂಬ ಗೊಂದಲಕ್ಕೆ ಚಿತ್ರದುರ್ಗದ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಸ್ಪಷ್ಟನೆ ನೀಡಿದ್ದಾರೆ.

ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಹಾಗೂ ಶಿವ ದಾಸಿಮಯ್ಯ ಮೂರು ಲಿಂಗಧಾರಿಗಳಾಗಿದ್ದರು. ಸಮಾಜದ ಪುರುಷರು, ಎಲ್ಲರಿಗೂ ಅವರು ಬೇಕಾಗಿದ್ದವರು ಎಂದು ಮುರುಘಾ ಶ್ರೀಗಳು ಹೇಳಿದ್ದಾರೆ.

ದಾವಣಗೆರೆಯ ಶಿವಯೋಗಾಶ್ರಮ ಆವರಣದಲ್ಲಿ ನಡೆದ ಶಿವ ಸಿಂಪಿ ಸಮುದಾಯದ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿಕೊಂಡು ಶರಣರು ಮಾತನಾಡುತ್ತಿದರು. [ಜಾತಿ ಗಣತಿ : ಏಕೆ, ಏನು, ಇದೆಲ್ಲಾ ಬೇಕೆ?]

ಶಿವ ಸಿಂಪಿ ಸಮಾಜದವರು ಸಂಸ್ಕೃತಿ, ಧರ್ಮ, ಜಾತಿ, ಕುಲ ಕಸುಬು, ನೀತಿ ನೇಮಗಳನ್ನು ಉಳಿಸಿಕೊಂಡು ಹೋಗಬೇಕು, ಜನಗಣತಿ ಕಲಂ 5ರಲ್ಲಿ ಲಿಂಗಾಯತ ಕಲಂ 6 ರಲ್ಲಿ ಶಿವಸಿಂಪಿ ಹಾಗೂ ಕಲಂ ರಲ್ಲಿ ಶಿವ ಸಿಂಪಿ ಲಿಂಗಾಯತ ಎಂದು ಸಮಾಜದವರು ಬರೆಯಲು ನಿರ್ಧರಿಸಿರುವುದು ಸರಿಯಾಗಿದೆ ಎಂದು ತಮ್ಮ ಬೆಂಬಲ ವ್ಯಕ್ತಪಡಿಸಿದರು.

Murugha Mutt Seer Clarification on Dasimaiah Controversy,

ಚೇಡರ ದಾಸಿಮಯ್ಯ ಅವರ ಜಯಂತಿ ಮಾಡಬೇಕು ಎಂದು ಖ್ಯಾತ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಆಗ್ರಹಿಸಿ ಪ್ರತಿಭಟನೆ ನಡೆಸಿದ ಘಟನೆ ವಿಧಾನಸೌಧದಲ್ಲಿ ಇತ್ತೀಚೆಗೆ ನಡೆದಿತ್ತು.[ದೇವರ ದಾಸಿಮಯ್ಯ ಜಯಂತಿಗೆ ಚಿಮೂ ವಿರೋಧ]

ದೇವರ ದಾಸಿಮಯ್ಯ ವಚನಕಾರ ಅಲ್ಲ. ಅವನು ಒಬ್ಬ ಶಿವಭಕ್ತ. ಅವನು ಏನೂ ಬರೆದಿಲ್ಲ. ಜೇಡರ ದಾಸಿಮಯ್ಯ ನಿಜವಾದ ವಚನಕಾರ, ಆತನ ಹೆಸರಿನಲ್ಲಿ ಜಯಂತಿ ನಡೆಸಬೇಕು ಎಂದು ಹಿರಿಯ ಸಾಹಿತಿ ಡಾ. ಎಂ. ಚಿದಾನಂದಮೂರ್ತಿ ಅವರು ಸ್ಪಷ್ಟನೆ ನೀಡಿದ್ದರು.

ಸಿಂಪಿ (ದರ್ಜಿ ವೃತ್ತಿಯವರು), ಸಿಂಪಿಗ ಮುಂತಾದ ಹೆಸರುಗಳನ್ನು '2ಎ'ಗೆ ಸೇರಿಸಿದ್ದರೂ ಸಹ ಶಿವಸಿಂಪಿ ಸಮುದಾಯವನ್ನು ಮಾತ್ರ ಮೀಸಲಾತಿಯಿಂದ ಹೊರಗಿಡಲಾಗಿದೆ. ಶಿವಸಿಂಪಿ ಸಮುದಾಯವನ್ನೂ ಸಹ '2ಎ' ಗೆ ಸೇರಿಸಬೇಕು ಎಂದು ಆಗ್ರಹಿಸಲು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

English summary
Shivamuthy Sharana, Murugha Mutt Seer of Chitradurga has given clarification on Dasimaiah Controversy. Devara Dasimaiah, Jedara Dasimaiah and Shiva Dasimaiah all wore Shiva lingas and can be considered as Vachana Writers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X