ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗುತ್ತಾರೆ: ಈಶ್ವರಪ್ಪ ಭವಿಷ್ಯ

|
Google Oneindia Kannada News

ಬಾಗಲಕೋಟೆ, ನ.29: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ರಾಜ್ಯದ 'ಮುಖ್ಯಮಂತ್ರಿ' ಅಗಲಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ವಿಜಯಪುರ ಹಾಗೂ ಬಾಗಲಕೋಟೆ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

'ನಮ್ಮ ನಾಯಕರಾದ ಮುರುಗೇಶ್ ನಿರಾಣಿ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದು ನೂರಕ್ಕೆ ನೂರರಷ್ಟು ‌ಖಚಿತ. ನಾನು ಈ ರೀತಿ ಹೇಳಿದೆ ಎಂದರೆ, ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ತೆಗೆದುಬಿಡುತ್ತಾರೆ ಎಂದು ಯಾರೊಬ್ಬರೂ ಅನ್ಯಥಾ ‌ಭಾವಿಸಬಾರದು. ಅವರು ನಾಳೆಯೇ ಮುಖ್ಯಮಂತ್ರಿ ಆಗುತ್ತಾರೆ ಎಂದು ನಾನು ಹೇಳುವುದಿಲ್ಲ. ಒಂದು ದಿನ ಅವರೂ ಮುಖ್ಯಮಂತ್ರಿ ಆಗುತ್ತಾರೆ ಎಂದು ‌ಸೂಚ್ಯವಾಗಿ ಹೇಳಿದರು.

Murugesh Nirani becomes CM: Eshwarappas Predict

ರಾಜ್ಯದ ಮುಖ್ಯಮಂತ್ರಿ ಆಗುವ ' ಅರ್ಹತೆ' ನಿರಾಣಿಯವರಿಗೆ ಇದೆ. ಅವರಿಗೆ ರಾಜ್ಯವನ್ನು ಮುನ್ನಡೆಸುವ ಶಕ್ತಿ ಇದೆ. ಒಂದಲ್ಲೊಂದು ದಿನ ಆ 'ಸ್ಥಾನಕ್ಕೆ ' ಬರಲಿದ್ದಾರೆ ಎಂದು ಪುನರುಚ್ಚರಿಸಿದರು.

ರಾಜ್ಯದಲ್ಲಿ ‌ ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡುವ ನಾಯಕ ಮುಖ್ಯಮಂತ್ರಿ ‌ಆಗಬೇಕು ಎಂಬುದು ಬಹುತೇಕ ಜನತೆಯ ಆಶಯವಾಗಿದೆ. ನಿರಾಣಿ ಅವರು ಸಿ.ಎಂ ಆದರೆ ಖಂಡಿತವಾಗಿ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ಈಶ್ವರಪ್ಪ ವ್ಯಕ್ತಪಡಿಸಿದರು.

ನೀವು ( ನಿರಾಣಿ) ಸಿ.ಎಂ ಆದರೆ , ಹಿಂದುಳಿದಿರುವ ವರ್ಗಕ್ಕೆ ನ್ಯಾಯ ಕೊಡುತ್ತೀರಾ ಎಂದು ಸಚಿವರನ್ನು ಈಶ್ಬರಪ್ಪ ಪ್ರಶ್ನಿಸಿದಾಗ, ವೇದಿಕೆಯಲ್ಲಿದ್ದ ಸಚಿವ ನಿರಾಣಿ ಅವರು ಖಂಡಿತವಾಗಿಯೂ ಮಾಡೇ ಮಾಡುತ್ತೇನೆ ಎಂದು ವಿಜೇಯದ ಸಂಕೇತವನ್ನು ತೋರಿದರು.

Recommended Video

Omicron Virus ಹರಡದಂತೆ ಮುನ್ನಚ್ಚರಿಕೆ ವಹಿಸಿದ ರಾಜ್ಯ ಸರ್ಕಾರ | Oneindia Kannada

ಇದೇ ಸಂದರ್ಭದಲ್ಲಿ ನಿರಾಣಿ ಅವರು ಮುಖ್ಯಮಂತ್ರಿ ಅಗಲಿದ್ದಾರೆ ಎಂದು ಈಶ್ವರಪ್ಪ ಹೇಳುತ್ತಿದ್ದಂತೆ ಸಭೆಯಲ್ಲಿ ನೆರೆದಿದ್ದ ಸಾವಿರಾರು ಸಂಖ್ಯೆಯ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತ್ತು. ಕಾರ್ಯಕರ್ತರು ಜೈಕಾರ ಹಾಕಿ, ಚಪ್ಪಾಳೆ ಹೊಡೆದು," ಮುಂದಿನ ಮುಖ್ಯಮಂತ್ರಿ ಮುಖ್ಯಮಂತ್ರಿ ಮುರುಗೇಶ್ ನಿರಾಣಿ‌" ಅವರಿಗೆ ಶುಭವಾಗಲಿ ಎಂದು ಕೇಕೆ ಹಾಕಿದರು.

English summary
Murugesh Nirani one day becomes Karnataka chief minister. I am not saying that he will become the Chief Minister tomorrow: RDPR Minister K.S. Eshwarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X