ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಟ್ ಬ್ಲಾಕಿಂಗ್ ಅವ್ಯಾಹತ: ಬಯಲಾಯ್ತು 1100 ಕೋಟಿ ರೂ. ಭ್ರಷ್ಟಾಚಾರ

|
Google Oneindia Kannada News

ಬೆಂಗಳೂರು, ಫೆ. 03: ವೈದ್ಯಕೀಯ ಶಿಕ್ಷಣದ ಲಾಬಿ ಯಾವ ಮಟ್ಟಿಗೆ ಬೆಳೆದು ನಿಂತಿದೆ ಎಂದರೆ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಹೌದು ಯಾವುದೇ ಸರ್ಕಾರ ಬರಲಿ, ಯಾರೇ ವೈದ್ಯಕೀಯ ಶಿಕ್ಷಣ ಇಲಾಖೆ ಮಂತ್ರಿಯಾಗಲಿ, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿನ ಭ್ರಷ್ಟಾಚಾರಕ್ಕೆ ತಡೆ ಹಾಕುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಹಾಗೂ ಸಂಬಂಧಿಸಿದ ಮಂತ್ರಿಗಳನ್ನು ವೈದ್ಯಕೀಯ ಮಾಫಿಯಾದ 'ಪ್ರಭಾವಿಗಳು' ನಿಭಾಯಿಸುತ್ತಾರೆ. ಆ ಪ್ರಭಾವಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಯ ಹಸ್ತ ಯಾವಾಗಲೂ ಇರುತ್ತದೆ. ಅದರಿಂದಾಗಿಯೆ ಕಳೆದ 2018-19ನೇ ಸಾಲಿನ ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಸಾವಿರಾರು ಕೋಟಿ ರೂ.ಗಳ ಬ್ರಷ್ಟಾಚಾರ ನಡೆದಿರುವ ಆರೋಪದ ತನಿಖೆಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶಕ್ಕೂ ಬೆಲೆ ಇಲ್ಲವಾಗಿದೆ.

'ಕಸದ ಮಾಫಿಯಾ'ಗೆ ವೈಜ್ಞಾನಿಕತೆ ಟಚ್; ನೆದರ್‌ಲ್ಯಾಂಡ್‌ನಲ್ಲಿ ಅವ್ಯವಹಾರದ ಲಿಂಕ್?'ಕಸದ ಮಾಫಿಯಾ'ಗೆ ವೈಜ್ಞಾನಿಕತೆ ಟಚ್; ನೆದರ್‌ಲ್ಯಾಂಡ್‌ನಲ್ಲಿ ಅವ್ಯವಹಾರದ ಲಿಂಕ್?

2018-19ನೇ ಸಾಲಿನಲ್ಲಿ ಸುಮಾರು 1100 ಕೋಟಿ ರೂ.ಗಳ ಸೀಟು ಹಂಚಿಕೆ ಬ್ರಷ್ಟಚಾರ ನಡೆದಿರುವ ಆರೋಪ ಕೇಳಿ ಬಂದಿದೆ. ಜೊತೆಗೆ ಮಾಹಿತಿ ಹಕ್ಕಿನಡಿ ದೊರೆತಿರುವ ದಾಖಲೆಗಳು ದಂಗು ಬಡಿಸುವಂತಿವೆ. ನಾಡಿದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿಯೇ ಸೀಟು ಹಂಚಿಕೆ ಬ್ರಷ್ಟಾಚಾರ ನಡೆದಿರುವುದು ಕಂಡುಬಂದಿದ್ದು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ. ಪ್ರಕರಣದ ಸಮಗ್ರ ತನಿಖೆಗೆ ಜನ್ಮಭೂಮಿ ಫೌಂಡೇಶನ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದಾಖಲೆಗಳ ಸಹಿತ ದೂರು ಸಲ್ಲಿಸಿದೆ.

ಹೇಗೆ ಆರಂಭವಾಗುತ್ತದೆ ಸೀಟು ಹಂಚಿಕೆ ಅಕ್ರಮ?

ಹೇಗೆ ಆರಂಭವಾಗುತ್ತದೆ ಸೀಟು ಹಂಚಿಕೆ ಅಕ್ರಮ?

ಕರ್ನಾಟಕ ಪರೀಕ್ಷಾ ಮಂಡಳಿ ಅಧಿಕಾರಿಗಳು, ಶಿಕ್ಷಣ ಸಚಿವಾಲಯ ಸಿಬ್ಬಂದಿ ವರ್ಗ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಇವು ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳೊಂದಿಗೆ ಶಾಮೀಲಾಗಿ 2018-19ನೇ ಸಾಲಿನ ಎಂಬಿಬಿಎಸ್ ಮತ್ತು ಎಂ.ಡಿ.ಎಂ.ಎಸ್, ಸ್ನಾತಕೋತ್ತರ ವೈದ್ಯಕೀಯ ವಿಭಾಗದ ಸೀಟು ಹಂಚಿಕೆಯಲ್ಲಿ 1100ಕೋಟಿ ರೂ. ಗಳಿಗೂ ಅಧಿಕ ಭ್ರಷ್ಟಾಚಾರ ನಡೆಸಿರುವುದು ಬಯಲಾಗಿದೆ.

ರಾಜ್ಯದಲ್ಲಿ 44 ವೈದ್ಯಕೀಯ ಕಾಲೇಜುಗಳು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಿಗೆ ಕಳೆದ 28.09.2019 ರಂದು ಪತ್ರವೊಂದನ್ನು ಬರೆದಿದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶಿಕ್ಷಣ ಸಂಸ್ಥೆಗಳಿಗೆ ಕೊಟ್ಟಿದ್ದ ಪಟ್ಟಿಗೆ ವಿರುದ್ಧವಾಗಿ 212 ಸೀಟುಗಳನ್ನು ಮನಬಂದಂತೆ ವಿದ್ಯಾರ್ಥಿಗಳಿಗೆ ಪ್ರವೇಶ ಕೊಟ್ಟಿದ್ದಾರೆ. ಅಂತಹ ಪ್ರವೇಶಾತಿಯನ್ನು ಅನುಮೋದಿಸಬೇಕೆ ಅಥವಾ ಅನುಮೋದನೆ ಕೊಡಬಾರದೆ ಎಂಬುದನ್ನು ತಿಳಿಸುವಂತೆ ಪತ್ರ ಬರೆದಿತ್ತು. ಆದರೆ ಪತ್ರಕ್ಕೆ ಯಾವುದೆ ಪ್ರತಿಕ್ರಿಯೆಯನ್ನು ಸರ್ಕಾರ ಕೊಟ್ಟಿಲ್ಲ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸರ್ಕಾರಕ್ಕೆ ಬರೆದಿದ್ದ ಪತ್ರ 'ಒನ್ ಇಂಡಿಯಾ'ಕ್ಕೆ ಲಭ್ಯವಾಗಿದೆ.

ಪ್ರತಿಷ್ಠಿಯ ಶಿಕ್ಷಣ ಸಂಸ್ಥೆಗಳಲ್ಲಿ ಭ್ರಷ್ಟಾಚಾರದ ಆರೋಪ

ಪ್ರತಿಷ್ಠಿಯ ಶಿಕ್ಷಣ ಸಂಸ್ಥೆಗಳಲ್ಲಿ ಭ್ರಷ್ಟಾಚಾರದ ಆರೋಪ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯಿಂದ ಮಾಹಿತಿ ಹಕ್ಕಿನಡಿ ಲಭ್ಯವಾಗಿರುವ ಮಾಹಿತಿ ಪ್ರಕಾರ ಯಾವ್ಯಾವ ಕಾಲೇಜುಗಳು ಎಷ್ಟು ಸೀಟುಗಳನ್ನು ದುರುಪಯೋಗ ಪಡಿಸಿಕೊಂಡಿವೆ ಎಂಬ ಮಾಹಿತಿಯನ್ನು ಜನ್ಮಭೂಮಿ ಫೌಂಡೇಶನ್‌ ಎಸಿಬಿಗೆ ಕೊಟ್ಟಿರುವ ದೂರಿನಲ್ಲಿ ದಾಖಲು ಮಾಡಿದೆ.

ಈ ವರ್ಷ ಹೊಸದಾಗಿ 10 ಸಾವಿರ ಪಿಜಿ ವೈದ್ಯಕೀಯ ಸೀಟುಗಳುಈ ವರ್ಷ ಹೊಸದಾಗಿ 10 ಸಾವಿರ ಪಿಜಿ ವೈದ್ಯಕೀಯ ಸೀಟುಗಳು

1. ಈಸ್ಟ್ ಪಾಯಿಂಟ್ ಕಾಲೇಜ್ ಆಪ್ ಮೆಡಿಕಲ್ ಸೈನ್ಸಸ್: 26 ಸೀಟ್‌ಗಳು.

2. ಬಿಜಿಎಸ್ ಇನ್ಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸಸ್: 23 ಸೀಟ್‌ಗಳು

3. ಬ.ವಿ.ವ. ಸಂಘ, ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜ್, ಬಾಗಲಕೋಟೆ: 22 ಸೀಟ್‌ಗಳು

4. ಸಪ್ತಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್: 20 ಸೀಟ್‌ಗಳು

5. ಜೆ.ಜೆ.ಎಂ. ಮೆಡಿಕಲ್ ಕಾಲೇಜ್, ದಾವಣಗೆರೆ: 16 ಸೀಟ್‌ಗಳು

6. ಎಸ್.ಎಸ್. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್: 16 ಸೀಟ್‌ಗಳು

7. ಸುಬ್ಬಯ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಸ್: 15 ಸೀಟ್‌ಗಳು

8. ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಸ್: 14 ಸೀಟ್‌ಗಳು

9. ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್: 14 ಸೀಟ್‌ಗಳು

10. ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್: 11 ಸೀಟ್‌ಗಳು

11. ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್: 10 ಸೀಟ್‌ಗಳು

12. ಎಂ.ಆರ್. ಮೆಡಿಕಲ್ ಕಾಲೇಜ್ ಗುಲಬುರ್ಗ: 9 ಸೀಟ್‌ಗಳು

13. ಅಲ್-ಅಮೀನ್ ಮೆಡಿಕಲ್ ಕಾಲೇಜ್ ಬಿಜಾಪೂರ: 6 ಸೀಟ್‌ಗಳು

14. ಕೆ.ವಿ.ಜಿ. ಮೆಡಿಕಲ್ ಕಾಲೇಜ್, ಸುಳ್ಯ: 4 ಸೀಟ್‌ಗಳು

15. ಫಾದರ್ ಮುಲ್ಲರ್ಸ್ ಮೆಡಿಕಲ್ ಸೈನ್ಸಸ್: 2 ಸೀಟ್‌ಗಳು

16. A.J. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್: 2 ಸೀಟ್‌ಗಳು

ಹೀಗೆ ಒಟ್ಟು 16 ವೈದ್ಯಕೀಯ ಕಾಲೇಜ್‌ಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ಪಟ್ಟಿಗೆ ವಿರುದ್ಧವಾಗಿ ಮನ ಬಂದಂತೆ ಡೊನೇಶನ್ ತೆಗೆದುಕೊಂಡು ಪ್ರವೇಶ ಕೊಟ್ಟಿರುತ್ತಾರೆಂದು ಆರೋಪಿಸಲಾಗಿದೆ.

ಕೋಟಿ ಕೋಟಿಗೆ ಮಾರಾಟವಾಗುತ್ತದೆ ವೈದ್ಯಕೀಯ ಸೀಟ್

ಕೋಟಿ ಕೋಟಿಗೆ ಮಾರಾಟವಾಗುತ್ತದೆ ವೈದ್ಯಕೀಯ ಸೀಟ್

ಖಾಸಗಿ ಶಿಕ್ಷಣ ಸಂಸ್ಥೆಗಳು ಸೀಟ್ ಹಂಚಿಕೆಯಲ್ಲಿ ವಂಚನೆ ಮಾಡಿ 212 ಸೀಟ್‌ಗಳನ್ನು ಅರ್ಹರಲ್ಲದ ವಿದ್ಯಾರ್ಥಿಗಳಿಗೆ ಸುಮಾರು 80 ಲಕ್ಷ ರೂ.ಗಳಿಂದ 1.2 ಕೋಟಿ ರೂ.ಗಳ ವರೆಗೆ ಮಾರಾಟ ಮಾಡಿಕೊಂಡಿದ್ದಾರೆಂದು ದೂರಿನಲ್ಲಿ ದಾಖಲಿಸಲಾಗಿದೆ. ಜೊತೆಗೆ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನೂ ಕೂಡ ಮಾರಾಟ ಮಾಡಲಾಗಿದೆ. ಇದೆಲ್ಲದರ ಮೊತ್ತ ಒಂದೇ ಶೈಕ್ಷಣಿಕ ವರ್ಷಕ್ಕೆ 1100 ಕೋಟಿ ರೂ.ಗಳಾಗಿವೆ. ಹಿಂದಿನ ವರ್ಷಗಳ ಹಗರಣಗಳ ತನಿಖೆಗ ನಡೆದರೆ ಸಾವಿರಾರು ಕೋಟಿ ರೂ.ಗಳ ಹಗರಣ ಬೆಳಕಿಗೆ ಬರಲಿದೆ ಎನ್ನುತ್ತಾರೆ ದೂರುದಾರ ಶರ್ಮಾ.

ತನಿಖೆಗೆ ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದ MLC ರವಿಕುಮಾರ್

ತನಿಖೆಗೆ ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದ MLC ರವಿಕುಮಾರ್

ಎಂ.ಡಿ. ಮತ್ತು ಎಂ.ಎಸ್. ಸ್ನಾತಕೋತ್ತರ ವೈದ್ಯಕೀಯ ಸೀಟು ಹಂಚಿಕೆ ಮಾಡುವಾಗ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಕೆಇಎ ನಡೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಪತ್ರ ಬರೆದಿದ್ದರು. ರವಿಕುಮಾರ್ ಅವರು ಬರೆದಿದ್ದ ಪತ್ರ ಆಧರಿಸಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಯಾವುದೇ ಕ್ರಮ ಈವರೆಗೆ ಆಗಿಲ್ಲವೆಂಬ ಮಾಹಿತಿಯಿದೆ.

75 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾದ ಮೋದಿ ಸರ್ಕಾರ75 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾದ ಮೋದಿ ಸರ್ಕಾರ

ಜೊತೆಗೆ ಹಲವು ವಿದ್ಯಾರ್ಥಿಗಳು ಕೂಡ ಮುಖ್ಯಮಂತ್ರಿಗಳು, ರಾಜೀವ್ ಗಾಂಧಿ ಆರೋಗ್ಯ ವಿವಿ, ಕೆಇಎ ನಿರ್ದೇಶಕರುಗಳಿಗೆ ಬರೆದು ದೂರು ಸಲ್ಲಿಸಿದ್ದಾರೆ. ತುಮಕೂರು ಜಿಲ್ಲೆಯ ವಿದ್ಯಾರ್ಥಿಯೊಬ್ಬರು ತನಗಿಂತ ಕಡಿಮೆ ಅಂಕ ಬಂದವರಿಗೆ ಸೀಟು ಕೊಟ್ಟಿದ್ದು, ಕೌನ್ಸೆಲಿಂಗ್ ನಲ್ಲಿ ತನ್ನ ಸರದಿ ಬಂದಾಗ ಶಿಕ್ಷಣ ಸಂಸ್ಥೆಯವರು ಸೀಟ್ ಕ್ಲೋಸ್ ಆಗಿದೆ ಎಂಬ ಮಾಹಿತಿ ಕೊಟ್ಟು ವಾಪಾಸ್ ಕಳಿಸಿದ್ದಾರೆಂದು ಪರೀಕ್ಷಾ ಮಂಡಳಿಗೆ ದೂರು ಸಲ್ಲಿಸಿದ್ದಾರೆ. ಇದೇ ರೀತಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದಾರೆಂದ ಮಾಹಿತಿಯಿದೆ. ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಸಿಎಂ ಅಧೀನ ಕಾರ್ಯದರ್ಶಿಗಳು ಪರೀಕ್ಷಾ ಮಂಡಳಿಗೆ ಸೂಚಿಸಿದ್ದಾರೆ, ಆದರೆ ವಿಪರ್ಯಾಸ ಎಂದರೆ ಈ ವರೆಗೆ ಯಾವುದೇ ಕ್ರಮವನ್ನು ಕೆಇಎ ಕೈಗೊಂಡಿಲ್ಲ.

2017ರಿಂದಲೂ ಪರೀಕ್ಷಾ ಮಂಡಳಿಯಿಂದ ಆಕ್ರಮದ ಆರೋಪ

2017ರಿಂದಲೂ ಪರೀಕ್ಷಾ ಮಂಡಳಿಯಿಂದ ಆಕ್ರಮದ ಆರೋಪ

ಕರ್ನಟಕ ಪರೀಕ್ಷಾ ಪ್ರಾಧಿಕಾರವು ಕಳೆದ 2017 ರಿಂದಲೂ ಸೀಟು ಹಂಚಿಕೆಯಲ್ಲಿ ವಂಚನೆ ಮಾಡಿಕೊಂಡು ಬಂದಿದೆ ಎಂದು ಎಸಿಬಿಗೆ ದೂರು ಕೊಟ್ಟಿರುವ ಜನ್ಮಭೂಮಿ ಫೌಂಡೇಶನ್‌ನ ನಟರಾಜ್ ಶರ್ಮಾ ಆರೋಪಿಸಿದ್ದಾರೆ. ಈಗ ತಿಳಿದಿರುವ ಪ್ರಕಾರ 2018-19ನೇ ಸಾಲಿನ ಸೀಟು ಹಂಚಿಕೆ ಹಗರಣ ಮಾತ್ರ ಬೆಳಕಿಗೆ ಬಂದಿದೆ. ಉಳಿದಂತೆ 2017-18ರಲ್ಲಿಯೂ ಸೀಟು ಹಂಚಿಕೆ, ಸೀಟ್ ಬ್ಲಾಕಿಂಗ್ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಕೈಗೊಂಬೆ ಗಿರೀಶ್!

ಖಾಸಗಿ ಶಿಕ್ಷಣ ಸಂಸ್ಥೆಗಳ ಕೈಗೊಂಬೆ ಗಿರೀಶ್!

ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಗಿರೀಶ್ ಅವರು ಹಗರಣದ ರೂವಾರಿ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಹಣಬಲದಿಂದ ಗಿರೀಶ್ ಅವರನ್ನು ಇಲಾಖೆ ನಿರ್ದೇಶ ಹುದ್ದೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಭಾವ ಬೀರಿ ನೇಮಕ ಮಾಡಿಸಿವೆ. ಹೀಗಾಗಿಯೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೈಗೊಂಬೆಯಾಗಿ ಗಿರೀಶ್ ಕೆಲಸ ಮಾಡುತ್ತಿದ್ದಾರೆ. 2005ರಲ್ಲಿ ಅವರು ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದು, ಕಾನೂನಿನ ಪ್ರಕಾರ ಸರ್ಕಾರದ ಯಾವುದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಅರ್ಹತೆ ಇರುವುದಿಲ್ಲ. ಆದರೂ ಅವರ ನೇಮಕಕ್ಕೆ ಪ್ರಭಾವ ಬೀರಿದವರ ಮೇಲೆಯೂ ಕ್ರಮ ಆಗಬೇಕೆಂದು ಒತ್ತಾಯಿಸಿದ್ದಾರೆ.

ಇನ್ನು ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ಕೇಳಿದರೂ ದಾಖಲೆ ಕೊಡದಂತೆ ಗಿರೀಶ್ ಕೊಡದಂತೆ ಗಿರೀಶ್ ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ. ಈ ಬಗ್ಗೆಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ತನಿಖೆ ನಡೆಸುವಂತೆ ಸಿಐಡಿಗೆ ವಿದ್ಯಾರ್ಥಿಗಳ ದೂರು

ತನಿಖೆ ನಡೆಸುವಂತೆ ಸಿಐಡಿಗೆ ವಿದ್ಯಾರ್ಥಿಗಳ ದೂರು

ವಿದ್ಯಾರ್ಥಿಗಳು ತಮಗೆ ಆಗಿರುವ ಅನ್ಯಾಯವನ್ನು ವಿವರಿಸಿ ಸಿಐಡಿ ಪೊಲೀಸ್ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ಸಿಐಡಿ ದೂರಿನ ಬಗ್ಗೆ ತನಿಖೆ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ವರ್ಗಾವಣೆ ಮಾಡಿದ್ದಾರೆ.

ಇಷ್ಟೆಲ್ಲ ದೂರುಗಳು, ಅರ್ಜಿಗಳು ಬಂದಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಬಂದಿದ್ದರೂ ಯಾವುದೆ ಕ್ರಮಕ್ಕೆ ಸರ್ಕಾರ ಮುಂದಾಗಿಲ್ಲ. ವೈದ್ಯಕೀಯ ಶಿಕ್ಷಣ ಕ್ಷೇತ್ರವನ್ನು ಮಾಫಿಯಾಗಳಿಂದ ರಕ್ಷಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಕಾನೂನುಗಳನ್ನೇ ತಂದಿದೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ವೈದ್ಯಕೀಯ ಶಿಕ್ಷಣ ಪ್ರಭಾವಿ ಬಲಾಢ್ಯರ ಕೈಯಲ್ಲಿ ಇರುವುದು ಇದಕ್ಕೆ ಕಾರಣ, ಇದೆಲ್ಲವನ್ನು ಹೊರತು ಪಡಿಸಿ ಸೂಕ್ತ ತನಿಖೆ ನಡೆಸುವಂತೆ ಎಸಿಬಿಗೆ ದೂರು ದಾಖಲಾಗಿದೆ.

ಸೂಕ್ತ ತನಿಖೆ ನಡೆಸುವ ಭರವಸೆ ಕೊಟ್ಟಿರುವ ಎಸಿಬಿ

ಸೂಕ್ತ ತನಿಖೆ ನಡೆಸುವ ಭರವಸೆ ಕೊಟ್ಟಿರುವ ಎಸಿಬಿ

ಕಳೆದ ಒಂದು ಶೈಕ್ಷಣಿಕ ಸಾಲಿನಲ್ಲಿ ನಡೆದಿರುವ ಹಗರಣವೇ ಸುಮಾರು 1100 ಕೋಟಿ ರೂ.ಗಳಿಗೂ ಮೀರಿದೆ. ಹಾಗಾಗಿ ಸಂಪೂರ್ಣ ತನಿಖೆ ನಡೆಸುವ ಭರವಸೆಯನ್ನು ಭ್ರಷ್ಟಾಚಾರ ನಿಗ್ರಹ ದಳ ದೂರುದಾರರಿಗೆ ಕೊಟ್ಟಿದೆ. ಸುಮಾರು 2 ಸಾವಿರ ಪುಟಗಳ ದಾಖಲೆಗಳನ್ನು ಎಸಿಬಿಗೆ ದೂರುದಾರರು ಕೊಟ್ಟಿದ್ದಾರೆ. ಈಗಲಾದರೂ ವೈದ್ಯಕೀಯ ಶಿಕ್ಷಣ ಮಾಫಿಯಾಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದೆ. ಇಲ್ಲದಿದ್ದರೆ ವೈದ್ಯಕೀಯ ಶಿಕ್ಷಣ ಎಂಬುದು ಬರಿ ಉಳ್ಳವರ ಪಾಲಾಗುವುದರಲ್ಲಿ ಸಂಶಯವಿಲ್ಲ.

ಕೇವಲ ಕಾನೂನು ರಚನೆಯಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿನ ಭ್ರಷ್ಟಾಚಾರ ನಿಗ್ರಹ ಮಾಡುವುದು ಅಸಾಧ್ಯ. ತಂದಿರುವ ಕಾನೂನುಗಳನ್ನು ಸೂಕ್ತವಾಗಿ ಜಾರಿ ಮಾಡುವ ಮೂಲಕ ಅರ್ಹ ವಿದ್ಯಾರ್ಥಿಗಳ ಹಿತ ಕಾಪಾಡುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ.

English summary
The multi-crore scam in the medical seat allocation has come to light and a complaint has been lodged with the ACB to conduct a proper investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X