ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ AY 4.2 ಪ್ರಕರಣ: ಮಾರ್ಗಸೂಚಿಗಳ ಕುರಿತು ಚರ್ಚೆ

|
Google Oneindia Kannada News

ರಾಜ್ಯದಲ್ಲಿ ಡೆಲ್ಟಾ ರೂಪಾಂತರ ತಳಿ AY 4.2 ಪತ್ತೆಯಾಗಿರುವುದರಿಂದ ಮಾರ್ಗಸೂಚಿಗಳ ಕುರಿತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮಂಗಳವಾರ ಚರ್ಚೆ ನಡೆಸಲಿದೆ.

ಹಾನಗಲ್ ಉಪಚುನಾವಣೆ ಪ್ರಚಾರಕ್ಕೂ ತೆರಳುವ ಮುನ್ನ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, "ಕೋವಿಡ್19 ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಮಧ್ಯಾಹ್ನ ವಿಡಿಯೋ ಸಂವಾದ ನಡೆಸಲಾಗುವುದು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ಏಳು ಪ್ರಯೋಗಾಲಯಗಳನ್ನು ಸ್ಥಾಪನೆ ಮಾಡಲಾಗಿದೆ. ಕೋವಿಡ್‌ಗೆ ಸಂಬಂಧಿಸಿದಂತೆ ಯಾವುದೇ ಹೊಸ ತಳಿಗಳು ಬಂದರೂ ಅಲ್ಲಿ ಸಂಶೋಧನೆ ನಡೆಯುತ್ತದೆ. ಈಗ ರಷ್ಯಾ ಮೂಲದ್ದು ಎಂದು ಹೇಳಲಾಗುತ್ತಿರುವ AY 4.2 ಎರಡು ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

Mulls fresh Covid guidelines after outbreak of AY.4.2 variants in state

ಕರ್ನಾಟಕದಲ್ಲಿ ಎರಡು AY 4.2 ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ತಜ್ಞರು ಪರಿಶೀಲಿಸುತ್ತಿದ್ದಾರೆ. ಅದೇ ರೀತಿ ವಿವಿಧ ರಾಜ್ಯಗಳಲ್ಲಿಯೂ ಈ ಮಾದರಿಯ ಪ್ರಕರಣಗಳು ವರದಿಯಾಗಿವೆ. ಅಂತಿಮವಾಗಿ ಐಸಿಎಂಆರ್ ಜೊತೆ ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದರು.

ರಷ್ಯಾ ಪ್ರಕರಣಗಳ ಬಗ್ಗೆ ಅಧ್ಯಯನ
ರಷ್ಯಾದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರ ಕುರಿತು ಅಧ್ಯಯನ ಮಾಡಲಾಗುತ್ತಿದೆ. ಆದರೆ, ಅಲ್ಲಿ ಯಾರು ಎರಡೂ ಡೋಸ್ ಲಸಿಕೆ ಪಡೆದಿಲ್ಲವೋ ಅಂತವರಲ್ಲಿ ರೂಪಾಂತರ ತಳಿ ಹೆಚ್ಚಿನ ಪರಿಣಾಮ ಉಂಟುಮಾಡುತ್ತಿರುವುದು ಕಂಡುಬರುತ್ತದೆ. ಅಮೆರಿಕಾವೂ ಸಹ ಇದಕ್ಕೆ ಹೊರತಲ್ಲ. ಎರಡೂ ಡೋಸ್ ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಈಗ ಪತ್ತೆಯಾಗಿರುವ ರೂಪಾಂತರ ತಳಿ AY 4.2 ಬಗ್ಗೆಯೂ ಅಧ್ಯಯನ ಮಾಡಲಾಗುತ್ತಿದೆ. ಇದರ ಲಕ್ಷಣ, ಪರಿಣಾಮಗಳ ಕುರಿತು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಲಸಿಕೆ ಪಡೆಯದವರ ಮೇಲೆ, ಒಂದು ಡೋಸ್ ಲಸಿಕೆ ಪಡೆದವರ ಮೇಲೆ ಮತ್ತು ಎರಡು ಡೋಸ್ ಲಸಿಕೆ ಪಡೆದವರ ಮೇಲೆ ಈ ಹೊಸ ತಳಿ ಏನು ಪರಿಣಾಮ ಉಂಟುಮಾಡುತ್ತಿದೆ ಎಂಬುದನ್ನು ಗಮನಿಸಲಾಗುತ್ತಿದೆ ಎಂದು ಹೇಳಿದರು.

ಮೂರನೇ ಅಲೆ ಬರಬಹುದು

ವಿಶ್ವದ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಕೋವಿಡ್ ಮೂರನೇ ಅಲೆ ಪ್ರಾರಂಭವಾಗಿದೆ. ನಮ್ಮಲ್ಲೂ ಸಹ ಬರಬಹುದು. ಆದರೆ, ಯಾವುದೇ ಕೋವಿಡ್ ರೂಪಾಂತರ ತಳಿಗಳು ಎರಡೂ ಡೋಸ್ ಲಸಿಕೆ ಪಡೆವರ ಮೇಲೆ ಅಷ್ಟಾಗಿ ಪರಿಣಾಮ ಉಂಟುಮಾಡುತ್ತಿರುವುದು ಯಾವ ರಾಷ್ಟ್ರದಲ್ಲಿಯೂ ಕಂಡುಬರುತ್ತಿಲ್ಲ. ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಕಳೆದ ನಾಲ್ಕು ತಿಂಗಳಿನಿಂದ ಕೋವಿಡ್ ಪ್ರಕರಣಗಳು ಕಡಿಮೆಯಾಗಿರುವುದು ನಿಜ. ಕೋವಿಡ್‌ನ ಎಷ್ಟೇ ಅಲೆಗಳು ಬಂದರೂ ಅದನ್ನು ಎದುರಿಸಲು ಸರ್ಕಾರ ಈಗ ಸಿದ್ಧವಾಗಿದೆ. ಹಾಗೆಂದು ಆದರೆ, ಜನರು ಮೈಮರೆಯಬಾರದು. ಲಸಿಕೆಯ ಬಗ್ಗೆ ಉದಾಸೀನವನ್ನೂ ಮಾಡಬಾರದು ಎಂದು ಸಚಿವರು ಮನವಿ ಮಾಡಿದರು.

Recommended Video

ABD ಗೆ ಅನ್ಯಾಯ ಮಾಡ್ತಿರೋ RCB | Oneindia Kannada

English summary
Karnataka mulls fresh Covid guidelines after outbreak of third wave in the West & detection of AY.4.2 variants in state says health Minister Dr K Sudhakar. Minister to hold meeting with TAC experts today & thereafter consult CM Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X