ಇನ್ನು ಹಾಪ್‌ಕಾಮ್ಸ್‌ನಲ್ಲಿ ಎಂಟಿಆರ್ ಉತ್ಪನ್ನಗಳು ಲಭ್ಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 07 : ಎಂಟಿಆರ್‌ನ ಘಮಘಮಿಸುವ ಸಾಂಬಾರ್ ಪುಡಿ, ರೆಡಿ ಟು ಈಟ್ ಸೇರಿದಂತೆ 25 ಉತ್ಪನ್ನಗಳು ಇನ್ನು ಮುಂದೆ ಹಾಪ್‌ಕಾಮ್ಸ್‌ನಲ್ಲಿ ಸಿಗುತ್ತವೆ. ಹಾಪ್‌ಕಾಮ್ಸ್‌ನಿಂದ ಹಣ್ಣು ಮತ್ತು ತರಕಾರಿಯನ್ನು ಎಂಟಿಆರ್ ಖರೀದಿ ಮಾಡಲಿದೆ.

ಬೆಂಗಳೂರಿನಲ್ಲಿ ಗುರುವಾರ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್ ಕಾಮ್ಸ್) ಮತ್ತು ಎಂಟಿಆರ್ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿವೆ. ಬೆಂಗಳೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಾಪ್‌ಕಾಮ್ಸ್‌ಗಳಲ್ಲಿ ಎಂಟಿಆರ್ ಉತ್ಪನ್ನಗಳು ದೊರೆಯತ್ತವೆ. [ಹಾಪ್ ಕಾಮ್ಸ್ ವ್ಯಾಪಾರ ಕುಂಠಿತಕ್ಕೆ ಕಾರಣವೇನು?]

hopcoms

ಒಪ್ಪಂದದ ಪ್ರಕಾರ ತನ್ನ ಮಳಿಗೆಗಳಲ್ಲಿ ಮಾರಾಟ ಮಾಡಲು 15 ಲಕ್ಷ ರೂ. ಮೌಲ್ಯದ ಎಂಟಿಆರ್ ಉತ್ಪನ್ನಗಳನ್ನು ಹಾಪ್‌ಕಾಮ್ಸ್ ಖರೀದಿ ಮಾಡಿದೆ. ಮಾಸಿಕ 50 ಟನ್‌ನಷ್ಟು ಹಣ್ಣು ಮತ್ತು ತರಕಾರಿಗಳನ್ನು ಎಂಟಿಆರ್‌ ಹಾಪ್‌ಕಾಮ್ಸ್‌ನಿಂದ ಖರೀದಿಸಲಿದೆ.

MTR products now avilable in HOPCOMS

ರೈತರು ಬೆಳೆದ ಶುಂಠಿ, ಗೋಡಂಬಿ, ಹಣ್ಣು, ತರಕಾರಿಗಳನ್ನು ಎಂಟಿಆರ್ ಖರೀದಿ ಮಾಡಲಿದೆ. ಎಲ್ಲಿಯ ತನಕ ಹಣ್ಣು ತರಕಾರಿಯನ್ನು ಎಂಟಿಆರ್ ಖರೀದಿ ಮಾಡುತ್ತದೆಯೋ ಅಲ್ಲಿಯ ತನಕ ಹಾಪ್‌ಕಾಮ್ಸ್‌ನಲ್ಲಿ ಎಂಟಿಆರ್ ಉತ್ಪನ್ನ ಮಾರಾಟ ಮಾಡಲಾಗುತ್ತದೆ.

MTR products now avilable in HOPCOMS

ಅಂದಹಾಗೆ ಬೆಂಗಳೂರಿನಲ್ಲಿ 290 ಹಾಪ್‌ಕಾಮ್ಸ್ ಮಳಿಗೆಗಳಿವೆ. ಬೆಂಗಳೂರಿನ ವಾಪ್ತಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳು ಬರುತ್ತವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MTR Foods and Horticultural Producers Co-operative Marketing and Processing Society Ltd (HOPCOMS) singed for agreement on July 7, 2016. Agreement will enable consumers to buy company's products from HOPCOMS stores across the Bengaluru city.
Please Wait while comments are loading...