ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣಾ ಅಖಾಡಕ್ಕೆ ಡಿಕೆಶಿ ಆಹ್ವಾನಿಸಿದ ಎಂಟಿಬಿ ನಾಗರಾಜ್

|
Google Oneindia Kannada News

Recommended Video

MTB Nagaraj welcomed Congress leader D.K.Shivakumar for the by election fight | Oneindia Kannada

ಬೆಂಗಳೂರು, ಅಕ್ಟೋಬರ್ 28 : "ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಡಿ. ಕೆ. ಶಿವಕುಮಾರ್ರನ್ನು ಹೊಸಕೋಟೆ ಉಪ ಚುನಾವಣಾ ಅಖಾಡಕ್ಕೆ ಸ್ವಾಗತಿಸುತ್ತೇನೆ" ಎಂದು ಅನರ್ಹ ಶಾಸಕ ಎಂಬಿಟಿ ನಾಗರಾಜ್ ಹೇಳಿದರು.

ಸೋಮವಾರ ಎಂಟಿಬಿ ನಾಗರಾಜ್ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು, "ನಮ್ಮ-ನಿಮ್ಮ ಭೇಟಿ ಚುನಾವಣೆ ರಂಗದಲ್ಲಿ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದರು. ಆಗಲೂ ಸ್ವಾಗತಿಸಿದ್ದೆ, ಈಗಲೂ ಹೊಸಕೋಟೆಯ ಚುನಾವಣಾ ರಂಗಕ್ಕೆ ಅವರನ್ನು ಸ್ವಾಗತಿಸುತ್ತೇನೆ" ಎಂದರು.

ಸಿದ್ದರಾಮಯ್ಯ ಭೇಟಿ ಮಾಡಿದ ಶಾಸಕ ಎಂ.ಟಿ.ಬಿ.ನಾಗರಾಜ್ ಸಿದ್ದರಾಮಯ್ಯ ಭೇಟಿ ಮಾಡಿದ ಶಾಸಕ ಎಂ.ಟಿ.ಬಿ.ನಾಗರಾಜ್

ಯಡಿಯೂರಪ್ಪ ಬಳಿ ಉಪ ಚುನಾವಣೆ ಬಗ್ಗೆ ಮಾತನಾಡಿದ ಎಂಟಿಬಿ ನಾಗರಾಜ್, "ಶರತ್ ಬಚ್ಚೇಗೌಡ ಅವರನ್ನು ನಿಯಂತ್ರಿಸಬೇಕು. ಕಾಂಗ್ರೆಸ್‌ಗಿಂತ ಶರತ್ ಅವರ ಭಯವೇ ನನಗೆ ಹೆಚ್ಚಾಗಿದೆ" ಎಂದು ಹೇಳಿದರು ಎಂದು ತಿಳಿದುಬಂದಿದೆ.

ಸಭೆಗಳಿಗೆ ಜನ ಸೇರಿಸಲು ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿಭಿನ್ನ ತಂತ್ರಸಭೆಗಳಿಗೆ ಜನ ಸೇರಿಸಲು ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿಭಿನ್ನ ತಂತ್ರ

ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ ಟಿಕೆಟ್‌ಗಾಗಿ ಶರತ್ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಎಂಟಿಬಿ ನಾಗರಾಜ್, "ಬಿಜೆಪಿಯಿಂದ ನಾನೇ ಕಣಕ್ಕಿಳಿಯುವೆ" ಎಂದು ಹೇಳಿದರು.

ಕೃಷ್ಣಬೈರೇಗೌಡರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದ ಎಂಟಿಬಿ ನಾಗರಾಜ್ ಕೃಷ್ಣಬೈರೇಗೌಡರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದ ಎಂಟಿಬಿ ನಾಗರಾಜ್

ಒಂದು ತಿಂಗಳಿನಿಂದ ಪ್ರಚಾರ

ಒಂದು ತಿಂಗಳಿನಿಂದ ಪ್ರಚಾರ

"ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂದು ಒಂದು ತಿಂಗಳಿನಿಂದ ಪ್ರಚಾರ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ಎಲ್ಲಾ ವಿಚಾರಗಳು ಸ್ಪಷ್ಟವಾಗಲಿವೆ" ಎಂದು ಎಂಟಿಬಿ ನಾಗರಾಜ್ ಹೇಳಿದರು.

ಶರತ್ ಬಚ್ಚೇಗೌಡ ನಿಯಂತ್ರಿಸಿ

ಶರತ್ ಬಚ್ಚೇಗೌಡ ನಿಯಂತ್ರಿಸಿ

ಯಡಿಯೂರಪ್ಪ ಜೊತೆ ಮಾತನಾಡಿದ ಎಂಟಿಬಿ ನಾಗರಾಜ್, "ನೀವು ಕೇಳಿದ ತಕ್ಷಣ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಹೊರ ಬಂದಿದ್ದೇವೆ. ಹಾಗಾಗಿ ಉಪ ಚುನಾವಣೆಯಲ್ಲಿ ಅಡ್ಡಿ ಆಗುತ್ತಿರುವ ಶರತ್ ಬಚ್ಚೇಗೌಡರನ್ನು ನಿಯಂತ್ರಿಸಿ" ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಡಿಕೆಶಿ ಅವರಿಗೆ ಸ್ವಾಗತ ಕೋರುವೆ

ಡಿಕೆಶಿ ಅವರಿಗೆ ಸ್ವಾಗತ ಕೋರುವೆ

"ಈ ಹಿಂದೆ ನನ್ನ-ನಿಮ್ಮ ಭೇಟಿ ಚುನಾವಣೆ ರಂಗದಲ್ಲಿ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದರು. ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ಅವರನ್ನು ಹೊಸಕೋಟೆ ಉಪ ಚುನಾವಣೆ ಅಖಾಡಕ್ಕೆ ಸ್ವಾಗತಿಸುತ್ತೇನೆ" ಎಂದು ಎಂಟಿಬಿ ನಾಗರಾಜ್ ಹೇಳಿದರು.

ಡಿಸೆಂಬರ್ 5ರಂದು ಚುನಾವಣೆ

ಡಿಸೆಂಬರ್ 5ರಂದು ಚುನಾವಣೆ

ಡಿಸೆಂಬರ್ 5ರಂದು ಹೊಸಕೋಟೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದೆ. ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಪೂರ್ಣಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿದೆ.

English summary
Former minister MTB Nagaraj welcomed Congress leader D.K.Shivakumar for the by election fight. 15 seats by election will be held on December 5, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X