ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ವೈಗೆ ತಲೆ ನೋವು ತಂದ ಎಂಟಿಬಿ ನಾಗರಾಜ್ ಹೊಸ ಲೆಕ್ಕಾಚಾರ!

|
Google Oneindia Kannada News

ಬೆಂಗಳೂರು, ಫೆಬ್ರವರಿ 10 : ಸಚಿವ ಸಂಪುಟ ವಿಸ್ತರಣೆ ಮಾಡಿ ಖಾತೆ ಹಂಚಿಕೆ ಲೆಕ್ಕಾಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಹೊಸ ತಲೆನೋವು ಕಾರಣವಾಗಿದೆ. ಉಪ ಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್ ಹೊಸ ಲೆಕ್ಕಾಚಾರ ಇದಕ್ಕೆ ಕಾರಣವಾಗಿದೆ.

ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದು ಯಡಿಯೂರಪ್ಪ ಘೋಷಣೆ ಮಾಡಿದ್ದರು. ಇದರಿಂದಾಗಿ ಎಂಟಿಬಿ ನಾಗರಾಜ್ ಮತ್ತು ಎಚ್. ವಿಶ್ವನಾಥ್ ಪರಿಸ್ಥಿತಿ ಅತಂತ್ರವಾಗಿದೆ. ಈಗ ಎಂಟಿಬಿ ನಾಗರಾಜ್ ಸಿಎಂ ಮೇಲೆ ಒತ್ತಡ ಹಾಕಲು ಹೊಸ ದಾರಿ ಹುಡುಕಿದ್ದಾರೆ.

ಸಿಗದ ಸಚಿವ ಸ್ಥಾನ, ಒಳಗೊಳಗೆ ಅತೃಪ್ತಿ: ಮುಂದೆ ಮಂತ್ರಿ ಆಗ್ತೀನಿ ಎಂದ ಎಂಟಿಬಿಸಿಗದ ಸಚಿವ ಸ್ಥಾನ, ಒಳಗೊಳಗೆ ಅತೃಪ್ತಿ: ಮುಂದೆ ಮಂತ್ರಿ ಆಗ್ತೀನಿ ಎಂದ ಎಂಟಿಬಿ

ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಎಂಟಿಬಿ ನಾಗರಾಜ್ ಸೋಲು ಕಂಡಿದ್ದಾರೆ. ಇದರಿಂದಾಗಿ ಯಡಿಯೂರಪ್ಪ ಸಂಪುಟ ಸೇರಬೇಕು ಎಂಬ ಅವರ ನಿರೀಕ್ಷೆ ಫಲಿಸಿಲ್ಲ.

ಯಡಿಯೂರಪ್ಪ ಮನಸ್ಸಿನಲ್ಲಿ ನಾವಿದ್ದೇವೆ: ಎಂಟಿಬಿ ನಾಗರಾಜ್ ಯಡಿಯೂರಪ್ಪ ಮನಸ್ಸಿನಲ್ಲಿ ನಾವಿದ್ದೇವೆ: ಎಂಟಿಬಿ ನಾಗರಾಜ್

ಅನರ್ಹ ಶಾಸಕರ ಪರವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಎಂಟಿಬಿ ನಾಗರಾಜ್‌ಗೆ ಹಿನ್ನಡೆ ಉಂಟು ಮಾಡಲಿದೆಯೇ? ಎಂಬ ಪ್ರಶ್ನೆಯೂ ಎದ್ದಿದೆ. ಎಂಟಿಬಿ ನಾಗರಾಜ್ ಮನವೊಲಿಸಲು ಯಡಿಯೂರಪ್ಪ ಯಾವ ದಾರಿ ಹುಡುಕಲಿದ್ದಾರೆ? ಕಾದು ನೋಡಬೇಕು.

ಬೆಂಗಳೂರು, ಬೆಳಗಾವಿ; ಇದು ಯಡಿಯೂರಪ್ಪ ಸಂಪುಟ!ಬೆಂಗಳೂರು, ಬೆಳಗಾವಿ; ಇದು ಯಡಿಯೂರಪ್ಪ ಸಂಪುಟ!

ಎಂಟಿಬಿ ನಾಗರಾಜ್ ಹೊಸ ಹೆಜ್ಜೆ

ಎಂಟಿಬಿ ನಾಗರಾಜ್ ಹೊಸ ಹೆಜ್ಜೆ

ಉಪ ಚುನಾವಣೆಯಲ್ಲಿ ಸೋತಿದ್ದರಿಂದ ಎಂಟಿಬಿ ನಾಗರಾಜ್ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಆದ್ದರಿಂದ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಪಡೆಯಲು ಎಂಟಿಬಿ ನಾಗರಾಜ್ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದರಿಂದಾಗಿ ಯಡಿಯೂರಪ್ಪಗೆ ಹೊಸ ಸಂಕಷ್ಟ ಎದುರಾಗಿದೆ.

ಕಾನೂನು ಅಡ್ಡಿಯಾಗಲಿದೆಯೇ?

ಕಾನೂನು ಅಡ್ಡಿಯಾಗಲಿದೆಯೇ?

ಅನರ್ಹ ಶಾಸಕರ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಶಾಸಕರು ಉಪ ಚುನಾವಣೆಯಲ್ಲಿ ಕಣಕ್ಕಿಳಿಯಬಹುದು ಎಂದು ಹೇಳಿತ್ತು. ಆದರೆ, ಮರಳಿ ಗೆಲುವು ಸಾಧಿಸುವ ತನಕ ಸಾಂವಿಧಾನಿಕ ಹುದ್ದೆ ಅಲಂಕರಿಸಬಾರದು ಎಂದು ಸೂಚನೆ ನೀಡಿತ್ತು. ಇದರಿಂದಾಗಿ ಎಂಟಿಬಿ ನಾಗರಾಜ್‌ಗೆ ಕಾನೂನು ತೊಡಕು ಉಂಟಾಗಲಿದೆಯೇ? ಎಂಬ ಪ್ರಶ್ನೆ ಎದ್ದಿದೆ.

ಯಡಿಯೂರಪ್ಪಗೆ ಮನವರಿಕೆ

ಯಡಿಯೂರಪ್ಪಗೆ ಮನವರಿಕೆ

ಎಂಟಿಬಿ ನಾಗರಾಜ್ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ತೀರ್ಪಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಿಡಿಎ ಅಧ್ಯಕ್ಷ ಸ್ಥಾನ ಪಡೆಯಲು ತೀರ್ಪು ಅಡ್ಡಿಯಾಗಲಿದೆಯೇ? ಎಂದು ಸಮಗ್ರ ಮಾಹಿತಿ ಪಡೆದಿದ್ದಾರೆ. ಇದೇ ವಾದವನ್ನು ಯಡಿಯೂರಪ್ಪ ಮುಂದೆ ಮಂಡಿಸಲು ಅಣಿಯಾಗಿದ್ದಾರೆ.

ಯಡಿಯೂರಪ್ಪ ಭೇಟಿ ಮಾಡಿದ್ದರು

ಯಡಿಯೂರಪ್ಪ ಭೇಟಿ ಮಾಡಿದ್ದರು

ಹೊಸಕೋಟೆ ಉಪ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಸೋತಾಗ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿದ್ದರು. ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದ್ದರು. ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿರುವ ಯಡಿಯೂರಪ್ಪ ಬಿಡಿಎ ಅಧ್ಯಕ್ಷ ಸ್ಥಾನವನ್ನು ಎಂಟಿಬಿ ನಾಗರಾಜ್‌ಗೆ ನೀಡಲಿದ್ದಾರೆಯೇ? ಕಾದು ನೋಡಬೇಕು.

English summary
BJP leader MTB Nagaraj trying to get chairman post of The Bangalore Development Authority (BDA). He lost Hoskote by elections against Sharat Bache Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X