ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುವರ್ಣ ಸಂಭ್ರಮಕ್ಕೆ ಎಂಎಸ್‌ಐಎಲ್‌ನಿಂದ ನಾಲ್ಕು ಹೊಸ ಉತ್ಪನ್ನ ಬಿಡುಗಡೆ

ಕುಡಿಯುವ ನೀರು, ಸೌಂದರ್ಯವರ್ಧಕ ಸೋಪು, ಮರಳು, ಹಾಗೂ ಸುಗಂಧ ದ್ರವ್ಯಗಳನ್ನು ಗುರುವಾರ ಲಲಿತ್ ಮಹಲ್ ಹೊಟೇಲ್ ನಲ್ಲಿ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಆರ್.ವಿ ದೇಶಪಾಂಡೆ ಬಿಡುಗಡೆಗೊಳಿಸಿದರು.

By Sachhidananda Acharya
|
Google Oneindia Kannada News

ಬೆಂಗಳೂರು: ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ತನ್ನ ಸುವರ್ಣ ಮಹೋತ್ಸದ ಹಿನ್ನಲೆಯಲ್ಲಿ ನಾಲ್ಕು ಹೊಸ ಉತ್ಪನ್ನಗಳನ್ನು ಪರಿಚಯಿಸಿದೆ.

ಕುಡಿಯುವ ನೀರು, ಸೌಂದರ್ಯವರ್ಧಕ ಸೋಪು, ಮರಳು, ಹಾಗೂ ಸುಗಂಧ ದ್ರವ್ಯಗಳನ್ನು ಗುರುವಾರ ಲಲಿತ್ ಮಹಲ್ ಹೊಟೇಲ್ ನಲ್ಲಿ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಆರ್.ವಿ ದೇಶಪಾಂಡೆ ಬಿಡುಗಡೆಗೊಳಿಸಿದರು. ಇದರ ಜತೆಗೆ ಸದ್ಯದಲ್ಲೇ ಜನೌಷಧಿ ಮಳಿಗೆಗಳನ್ನೂ ಇದು ತೆರಯಲಿದೆ.

MSIL launches new products on its Golden Jubilee celebration

ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಎಂಎಸ್ಐಲ್ ರಾಜ್ಯದಾದ್ಯಂತ 174 ಜನೌಷಧಿಯ ಕೇಂದ್ರ ತೆರೆಯುತ್ತಿದೆ. ಔಷಧದ ಹೆಸರಿನಲ್ಲಿ ಇವತ್ತು ಸುಲಿಗೆ ನಡೆಯುತ್ತಿದೆ. ಇದನ್ನು ತಪ್ಪಿಸಿ, ಕೈಗೆಟುಕುವ ದರದಲ್ಲಿ ಜನರಿಗೆ ಗುಣಮಟ್ಟದ ಔಷಧ ನೀಡಬೇಕು. ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಸರಕಾರ ನೀಡಲಿದೆ," ಎಂದರು.

"ಸರ್ಕಾರದ ಸಂಸ್ಥೆಯಾಗಿರುವ ಎಮ್ಎಸ್ಐಎಲ್ ಪ್ರಾರಂಭದಿಂದ ಇಲ್ಲಿ ತನಕ ಕಳೆದ 50 ವರ್ಷಗಳಿಂದ ಲಾಭದಾಯಕವಾಗಿ ನಡೆಯುತ್ತಿರುವ ಸಂಸ್ಥೆಯಾಗಿದೆ, ಸರ್ಕಾರಿ ಸಂಸ್ಥೆಯಾಗಿದ್ದು ನಷ್ಟ ಕಾಣದಿರುವ ಈ ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿರುವುದು ಉತ್ತಮ ಗುಣಮಟ್ಟದ ಸೇವೆ ಹಾಗೂ ಜನರಲ್ಲಿ ಉಳಿಸಿಕೊಂಡಿರುವ ನಂಬಿಕೆ. ಅದಕ್ಕಾಗಿ ಈ ಸಂಸ್ಥೆಗೆ ದುಡಿದಿರುವ ಮತ್ತು ದುಡಿಯುತ್ತಿರುವ ಎಲ್ಲರಿಗೂ ಶುಭಾಶಯಗಳು," ಎಂದು ಹೇಳಿದರು.

ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಸಹ ಖಾಸಗಿ ಕಂಪನಿಗಳಿಗೆ ಸಡ್ಡು ಹೊಡೆದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಹೆಮ್ಮೆ ಅನಿಸುತ್ತಿದೆ. ಸಂಸ್ಥೆ ಕೈಗೊಳ್ಳುವ ಎಲ್ಲಾ ಕಾರ್ಯಗಳಿಗೂ ಸರ್ಕಾರದ ಬೆಂಬಲವಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಮರಳು ಮಾರಾಟಕ್ಕೂ ಇಳಿದ ಎಂಎಸ್ಐಎಲ್!
"ರಾಜ್ಯ ಸರ್ಕಾರ ಮರಳು ಮಾಫಿಯಾ ಸಮಸ್ಯೆಗೆ ಪಾರಿಹಾರ ಕಂಡು ಹುಡುಕಿ ಸೋತಿದೆ. ಇದಕ್ಕಾಗಿ ವಿದೇಶಗಳಿಂದ ಮರಳು ಆಮದು ಮಾಡಿಕೊಂಡು, ರಾಜ್ಯದ ಜನರಿಗೆ ಕಡಿಮೆ ಬೆಲೆಯಲ್ಲಿ ಮರಳು ನೀಡುವ ಜವಾಬ್ದಾರಿಯನ್ನು ಎಂಎಸ್ಐಎಲ್ ಗೆ ನೀಡಲಾಗಿದೆ. ಹಿಂದೆ ಇದೇ ರೀತಿ ಸಂಸ್ಥೆಯು ಚಿಟ್‌ಫಂಡ್ ಆರಂಭಿಸಿ, ಅನಧಿಕೃತ ನಡೆಯುತ್ತಿದ್ದ ಚಿಟ್‌ಫಂಡ್‌ ಸಂಸ್ಥೆಗಳು ಬಾಗಿಲು ಮುಚ್ಚುವಂತಾಗಿತ್ತು. ಇದೀಗ ಮರಳು ಮಾಫಿಯಾ ಕೂಡ ಅದೇ ರೀತಿ ಆಗಲಿ," ಎಂದು ದೇಶಪಾಂಡೆ ಹೇಳಿದರು.

ಮರಳಿಗೆ ಜಾಗತಿಕ ಟೆಂಡರ್

"ಮರಳು ಆಮದ ಮಾಡಿಕೊಳ್ಳಲು ಜಾಗತಿಕ ಟೆಂಡರ್‌ ಕರೆಯಲಾಗಿದೆ. ಈಗಾಗಲೇ ಮಯನ್ಮಾರ್‌, ಕಾಂಬೋಡಿಯಾ, ಫಿಲಿಫೈನ್ಸ್‌, ಮಲೇಷಿಯಾದಿಂದ ಮರಳನ್ನು ಆಮದು ಮಾಡಿಕೊಳ್ಳಲು ನಮ್ಮ ಸಂಸ್ಥೆ ನಿರ್ಧರಿಸಿದೆ ಎಂದು," ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಸಿ. ಪ್ರಕಾಶ್ ಹೇಳಿದ್ದಾರೆ.

English summary
Mysore Sales International Limited (MSIL) launched 4 new products such as MSIL-Sand, beauty soaps, drinking water and cosmetics on its golden jubilee celebrations held at the Lalit Ashok Hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X