ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾ ಕಾರ್ಯಕ್ರಮದ ಸಂದರ್ಭ ತೇಜಸ್ವಿಸೂರ್ಯ ವಾಟ್ಸಪ್ ಅಕೌಂಟ್ ಡಿಲೀಟ್!

|
Google Oneindia Kannada News

ಬೆಂಗಳೂರು, ಜ.19: ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ವಾಟ್ಸಪ್ ಗ್ರೂಪ್‌ನಿಂದ ಎಕ್ಸಿಟ್ ಆಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿಸೂರ್ಯ, ಇದೀಗ ತಮ್ಮ ವಾಟ್ಸಪ್ ಖಾತೆಯನ್ನೇ ಅಳಿಸಿ ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಂಸದ ತೇಜಸ್ವಿ , ಸೂಲಿಬೆಲೆ ಕೊಲೆಗೆ ಸಂಚು: ಪೊಲೀಸರಿಂದ ಬಂತು ಆಘಾತಕಾರಿ ಮಾಹಿತಿಸಂಸದ ತೇಜಸ್ವಿ , ಸೂಲಿಬೆಲೆ ಕೊಲೆಗೆ ಸಂಚು: ಪೊಲೀಸರಿಂದ ಬಂತು ಆಘಾತಕಾರಿ ಮಾಹಿತಿ

ಬೆಂಗಳೂರಿನ ಜಯನಗರದಲ್ಲಿ ತಮ್ಮ ಕಚೇರಿ ಉದ್ಘಾಟನೆಗೆ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿ, ಕೊನೆ ಕ್ಷಣದಲ್ಲಿ ಭದ್ರತಾ ನೆಪ ಹೇಳಿ ಮಾಧ್ಯಮಗಳಿಗೆ ನಿಷೇಧ ಹೇರಿದ್ದರು. ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಚೇರಿ ಉದ್ಘಾಟನೆ ಮಾಡಿದ್ದರು.

ತಮ್ಮ ವಾಟ್ಸಪ್ ಖಾತೆಯನ್ನೇ ಅಳಿಸಿ ಹಾಕಿದ ತೇಜಸ್ವಿಸೂರ್ಯ!

ತಮ್ಮ ವಾಟ್ಸಪ್ ಖಾತೆಯನ್ನೇ ಅಳಿಸಿ ಹಾಕಿದ ತೇಜಸ್ವಿಸೂರ್ಯ!

ಸಂಸದ ತೇಜಸ್ವಿಸೂರ್ಯ ತಮ್ಮ ವಾಟ್ಸಪ್ ಖಾತೆಯನ್ನು ಅಳಿಸಿ ಹಾಕಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ನಿನ್ನೆ ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ವಾಟ್ಸಪ್ ಗ್ರೂಪ್‌ನಿಂದ ಸಂಸದ ತೇಜಸ್ವಿಸೂರ್ಯ ಎಕ್ಸಿಟ್ ಆಗಿದ್ದರು. ಮಾಧ್ಯಮಗಳ ಮೇಲಿನ ಅಸಮಾಧಾನದಿಂದ ಎಕ್ಸಿಟ್ ಆಗಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಕಾರಣವಾಗಿದ್ದು ಸಂಸದ ತೇಜಸ್ವಿಸೂರ್ಯ ಆಯೋಜಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯಕ್ರಮದ ಆಹ್ವಾನಕ್ಕೆ ಸಂಬಂಧಿಸಿದ ಗೊಂದಲ.

ಬಿಜೆಪಿ ವಾಟ್ಸಪ್ ಗ್ರೂಪ್‌ನಿಂದ ಸಂಸದ ತೇಜಸ್ವಿಸೂರ್ಯ ಎಕ್ಸಿಟ್ ಆಗಿದ್ದೇಕೆ?ಬಿಜೆಪಿ ವಾಟ್ಸಪ್ ಗ್ರೂಪ್‌ನಿಂದ ಸಂಸದ ತೇಜಸ್ವಿಸೂರ್ಯ ಎಕ್ಸಿಟ್ ಆಗಿದ್ದೇಕೆ?

ಬೆಂಗಳೂರು ದಕ್ಷಿಣ ಸಂಸದರ ಕಚೇರಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟನೆ ಮಾಡಿದ್ದರು. ಇದಕ್ಕೂ ಮೊದಲು ಕಾರ್ಯಕ್ರಮದ ವರದಿಗೆ ಮಾಧ್ಯಮಗಳಿಗೆ ಮೊದಲು ಆಹ್ವಾನಿಸಿ, ನಂತರ ನಿರಾಕರಿಸಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯುವ ಸಂಸದ ತೇಜಸ್ವಿಸೂರ್ಯ ಅವರು ತಮ್ಮ ವಾಟ್ಸಪ್ ಖಾತೆಯನ್ನೇ ಅಳಿಸುವ ನಿರ್ಧಾರ ತೆಗೆದುಕೊಂಡಿರುವುದು ಆಶ್ಚರ್ಯ ಮೂಡಿಸಿದೆ. ತಮ್ಮ ರಾಜಕೀಯ ವಿರೋಧಿಗಳ ಮೇಲೆ ಸಾಕಷ್ಟು ಆರೋಪ ಆಡುವ ಯುವ ಸಂಸದ ತೇಜಸ್ವಿಸೂರ್ಯ ಅವರು ಮಾಧ್ಯಮಗಳ ಮೇಲೆ ತಾಳ್ಮೆ ಕೆಳೆದುಕೊಂಡಿರುವುದು ಇದರಿಂದ ತಿಳಿದು ಬಂದಿದೆ.

ನಂತರ ವಾಟ್ಸಪ್ ಖಾತೆ ಅಳಿಸಿದ ತೇಜಸ್ವಿಸೂರ್ಯ!

ನಂತರ ವಾಟ್ಸಪ್ ಖಾತೆ ಅಳಿಸಿದ ತೇಜಸ್ವಿಸೂರ್ಯ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭಾಗವಹಿಸುವ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ವರದಿ ಮಾಡುವುದು ವಾಡಿಕೆ. ಹಾಗಾಗಿಯೆ ಸಂಸದ ತೇಜಸ್ವಿಸೂರ್ಯ ಕಚೇರಿ ಉದ್ಘಾಟನೆ ಕಾರ್ಯಕ್ರಮದ ವರದಿ ಮಾಡಲು ಮೊದಲು ಆಹ್ವಾನಿಸಿ ಕೊನೆಗೆ ನಿರಾಕರಣೆ ಮಾಡಿದ್ದರಿಂದ ಸಹಜವಾಗಿಯೆ ಗೊಂದಲಕ್ಕೆ ಕಾರಣವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ ಕೊಡುವಂತೆ ಮಾಧ್ಯಮ ಪ್ರತಿನಿಧಿಗಳು ಬಿಜೆಪಿ ಮಾಧ್ಯಮ ವಿಭಾಗದ ವಾಟ್ಸಪ್ ಗ್ರೂಪ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಆಗ ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ಅಧಿಕೃತ ಗ್ರೂಪ್‌ನಲ್ಲಿದ್ದ ಸಂಸದ ತೇಜಸ್ವಿ ಅವರು ಎಕ್ಸಿಟ್ ಆಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು.

ವಿಡಿಯೋ: ತೆಲುಗು ಹಾಡಿಗೆ ಸಂಸದ ತೇಜಸ್ವಿ ಸೂರ್ಯ ಸಖತ್ ಡ್ಯಾನ್ಸ್‌ವಿಡಿಯೋ: ತೆಲುಗು ಹಾಡಿಗೆ ಸಂಸದ ತೇಜಸ್ವಿ ಸೂರ್ಯ ಸಖತ್ ಡ್ಯಾನ್ಸ್‌

ತಮ್ಮದೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಣ್ಣ ಸ್ಪಷ್ಟನೆ ಕೇಳಿದ್ದರಿಂದ ತೇಜಸ್ವಿಸೂರ್ಯ ಅವರು ಅಸಮಾಧಾನದಿಂದ ಗ್ರೂಪ್‌ನಿಂದ ಹೊರಗೆ ಹೋಗಿದ್ದು, ನಂತರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆ ಹಿನ್ನೆಲೆಯಲ್ಲಿ ನಡೆದ ಚರ್ಚೆಯಿಂದಲೆ ತಮ್ಮ ವಾಟ್ಸಪ್ ಖಾತೆಯನ್ನು ತೇಜಸ್ವಿಸೂರ್ಯ ಅಳಿಸಿ ಹಾಕಿದ್ದಾರೆ ಎನ್ನಲಾಗುತ್ತಿದೆ.

ಮಾಧ್ಯಮಗಳ ಮೇಲೆ ಯುವ ಸಂಸದ ತೇಜಸ್ವಿಸೂರ್ಯ ಮುನಿಸೇಕೆ?

ಮಾಧ್ಯಮಗಳ ಮೇಲೆ ಯುವ ಸಂಸದ ತೇಜಸ್ವಿಸೂರ್ಯ ಮುನಿಸೇಕೆ?

ಭದ್ರತಾ ದೃಷ್ಟಿಯಿಂದ ಹಲವು ಕಾರ್ಯಕ್ರಮಗಳಿಗೆ ಮಾಧ್ಯಮಗಳಿಗೆ ಆಹ್ವಾನ ಇರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೆ. ಆದರೆ ಮೊದಲೆ ಈ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಮಾಧ್ಯಮಗಳಿಗೆ ಕೊಡಬೇಕು. ಸ್ಪಷ್ಟನೆ ಕೇಳಿದ್ದೆ ತಪ್ಪು ಎಂಬಂತೆ ಜನಪ್ರತಿಧಿಗಳು ವರ್ತನೆ ಮಾಡಬಾರದು ಎಂಬ ಅಭಿಪ್ರಾಯ ಇದೀಗ ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ.

ವಿರೋಧ ಪಕ್ಷಗಳ ಮೇಲೆ ಸಾಕಷ್ಟು ಆರೋಪಗಳನ್ನು ಮಾಡುವ ತೇಜಸ್ವಿಸೂರ್ಯ ಅವರಂತಹ ಯುವ ರಾಜಕಾರಣಿಗಳು ಸಣ್ಣವಿಚಾರಕ್ಕೆ ತಾಳ್ಮೆ ಕಳೆದುಕೊಂಡು ತಮ್ಮ ಖಾತೆಯನ್ನೇ ಅಳಿಸಿ ಹಾಕಿರುವುದು ಸರಿಯಲ್ಲ ಎಂದೂ ಜನರು ಅಭಿಪ್ರಾಯಪಟ್ಟಿದ್ದಾರೆ. ಹಲವು ವಿಚಾರಗಳನ್ನು ವಾಟ್ಸಪ್ ಮೂಲಕವೇ ಅವರಿಗೆ ಕಳಿಸುತ್ತಿದ್ದೆವು. ಈಗ ತಮ್ಮ ಖಾತೆಯನ್ನೇ ಅವರು ಅಳಿಸಿಹಾಕಿರುವುದು ಸರಿಯಲ್ಲ ಎನ್ನುತ್ತಾರೆ ಜಯನಗರದ ನಿವಾಸಿ ವೃಷಭೇಂದ್ರಸ್ವಾಮಿ ಅವರು.

ಸಂಸದರು ತಮ್ಮ ವಾಟ್ಸಪ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ!

ಸಂಸದರು ತಮ್ಮ ವಾಟ್ಸಪ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ!

ಆಶ್ಚರ್ಯ ಎಂದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಕುರಿತು ಬಹುದೊಡ್ಡ ಕನಸು, ಗುರಿ ಹೊಂದಿದ್ದಾರೆ. ಆದರೆ ಅವರದ್ದೆ ಪಕ್ಷದ ಯುವ ಸಂಸದರು ಸಾರ್ವಜನಿಕರ ಸಂಪರ್ಕಕ್ಕೆ ಇರುವ ತಮ್ಮ ಖಾತೆಯನ್ನೇ ಅಳಿಸಿ ಹಾಕಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ. ಆದರೆ ಜನಪ್ರತಿನಿಧಿಗಳ ವರ್ತನೆಯನ್ನು ಜನಸಾಮಾನ್ಯರು ಯಾವಾಗಲೂ ಗಮನಿಸುತ್ತ ಇರುತ್ತಾರೆ.

ಅದೇನೆ ಇರಲಿ, ಯುವ ಸಂಸದ ತೇಜಸ್ವಿಸೂರ್ಯ ಅವರು ದಿಢೀರ್ ಅಂತಾ ತಮ್ಮ ವಾಟ್ಸಪ್ ಖಾತೆಯನ್ನು ಅಳಿಸಿಹಾಕಿರುವುದು ಅವರ ಅಭಿಮಾನಿಗಳಲ್ಲಿಯೂ ನಿರಾಸೆಯನ್ನುಂಟು ಮಾಡಿದೆ.

English summary
BJP national president Amit Shah inaugurating bengaluru south mp Tejasvi Surya's office, but media banned regarding security issues. After that issue, Tejasvi Surya deleted his Whatsapp account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X