• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವನಾಥ್ ಸರ್ಟಿಫಿಕೇಟ್ ನನಗೆ ಅಗತ್ಯವಿಲ್ಲ; ರೇಣುಕಾಚಾರ್ಯ

|
Google Oneindia Kannada News

ಬೆಂಗಳೂರು, ಜೂನ್ 18; " ಎಚ್. ವಿಶ್ವನಾಥ್ ಅವರೇ ನಿಮ್ಮ ನಾಲಿಗೆ ಸಂಸ್ಕೃತಿ ಇಡೀ ರಾಜ್ಯದ ಜನತೆಗೆ ಗೊತ್ತಿದೆ, ನೀವು ಯಾವ ಪಕ್ಷದಲ್ಲಿರುತ್ತಿರೋ ಆ ಪಕ್ಷದ ನಾಯಕರ ವಿರುದ್ಧವೇ ಮಾತನಾಡುವುದು ನಿಮ್ಮ ಚಾಳಿ" ಎಂದು ಹೊನ್ನಾಳಿ ಶಾಸಕ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ್ದ ಎಚ್. ವಿಶ್ವನಾಥ್, "ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ. ಇಲ್ಲಿಯೂ ಕುಟುಂಬ ರಾಜಕಾರಣ ನಿಲ್ಲಬೇಕು. ಬಹುಪರಾಕ್ ಹಾಕುವ ಮನುಷ್ಯ ನಾನಲ್ಲ. ಏನು ಹೇಳಬೇಕು ಅದು ಹೇಳಿದ್ದೇನೆ" ಎಂದು ಹೇಳಿದ್ದರು.

ಒಂದಿಬ್ಬರಿಂದ ರಾಜ್ಯ ಬಿಜೆಪಿಯಲ್ಲಿ ಗೊಂದಲ ಸೃಷ್ಟಿ; ರೇಣುಕಾಚಾರ್ಯಒಂದಿಬ್ಬರಿಂದ ರಾಜ್ಯ ಬಿಜೆಪಿಯಲ್ಲಿ ಗೊಂದಲ ಸೃಷ್ಟಿ; ರೇಣುಕಾಚಾರ್ಯ

ಕಾಂಗ್ರೆಸ್, ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಬಂದ ನಾಯಕರ ಬಗ್ಗೆ ಮಾತನಾಡಿದ ಸಚಿವ ಕೆ. ಎಸ್. ಈಶ್ವರಪ್ಪ, ಎಂ. ಪಿ. ರೇಣುಕಾಚಾರ್ಯ ವಿರುದ್ಧ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದರು. ರೇಣಕಾಚಾರ್ಯ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹೋಮ‌ ಮಾಡಿದ ರೇಣುಕಾಚಾರ್ಯ ಮೇಲೆ‌ ಕೇಸ್ ದಾಖಲಿಸಲು ಮುಂದಾದ ತಹಶೀಲ್ದಾರ್ಹೋಮ‌ ಮಾಡಿದ ರೇಣುಕಾಚಾರ್ಯ ಮೇಲೆ‌ ಕೇಸ್ ದಾಖಲಿಸಲು ಮುಂದಾದ ತಹಶೀಲ್ದಾರ್

"ಈ ಹಿಂದೆ ರಾಜ್ಯದ ಪ್ರಭಾವಿ ನಾಯಕರುಗಳಾದ ಶ್ರೀ ಎಸ್. ಎಂ. ಕೃಷ್ಣ, ಶ್ರೀ ಸಿದ್ದರಾಮಯ್ಯ, ಶ್ರೀ ದೇವೇಗೌಡ, ಶ್ರೀ ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರ ವಿರುದ್ಧ ನಿಮ್ಮ ನಾಲಿಗೆಯನ್ನು ಹರಿ ಬಿಟ್ಟಿರುವ ನೀವು ಈಗ ನನ್ನ ಬಗ್ಗೆ ವೈಯಕ್ತಿಕ ತೇಜೋವದೆ ಮಾಡಿದ್ದೀರಿ" ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಭೂ ಹಗರಣ; ಹೊಸ ಬಾಂಬ್ ಸಿಡಿಸಿದ ವಿಶ್ವನಾಥ್ ಮೈಸೂರಿನಲ್ಲಿ ಭೂ ಹಗರಣ; ಹೊಸ ಬಾಂಬ್ ಸಿಡಿಸಿದ ವಿಶ್ವನಾಥ್

ನಿಮ್ಮ ಸರ್ಟಿಫಿಕೇಟ್ ನನಗೆ ಅಗತ್ಯವಿಲ್ಲ

ನಿಮ್ಮ ಸರ್ಟಿಫಿಕೇಟ್ ನನಗೆ ಅಗತ್ಯವಿಲ್ಲ

"ನನ್ನಂತಹ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಹೊನ್ನಾಳಿ-ನ್ಯಾಮತಿ ಅವಳಿ ಕ್ಷೇತ್ರದ ಜನತೆ ಮೂರು ಬಾರಿ ಶಾಸಕನ್ನಾಗಿ ಆಯ್ಕೆ ಮಾಡಿದ್ದಾರೆ. ನನ್ನ ಬಗ್ಗೆ ನಿಮ್ಮ ಸರ್ಟಿಫಿಕೇಟ್ ನನಗೆ ಅವಶ್ಯಕತೆ ಇಲ್ಲ" ಎಂದು ಎಂ. ಪಿ. ರೇಣುಕಾಚಾರ್ಯ ತಿರುಗೇಟು ನೀಡಿದರು.

ಯಡಿಯೂರಪ್ಪ ಮಾತು ಧಿಕ್ಕರಿಸಿದಿರಿ

ಯಡಿಯೂರಪ್ಪ ಮಾತು ಧಿಕ್ಕರಿಸಿದಿರಿ

"ನೀವು ನಮ್ಮ ಪಕ್ಷಕ್ಕೆ ಬಂದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪ ನವರು ನಿಮಗೆ ಉಪಚುನಾವಣೆಗೆ ಸ್ಪರ್ಧೆ ಮಾಡುವುದು ಬೇಡ, ಪಕ್ಷಾಂತರ ದೂರಿನ ಬಗ್ಗೆ ಕೋರ್ಟ್ ನಲ್ಲಿ ತೀರ್ಮಾನವಾದ ತಕ್ಷಣ ನಿಮ್ಮನ್ನು ಮಂತ್ರಿ ಮಾಡುತ್ತೇವೆ ಎಂದು ಹೇಳಿದರೂ ಸಹ ಯಡಿಯೂರಪ್ಪ ನವರ ಮಾತನ್ನು ದಿಕ್ಕರಿಸಿ ಚುನಾವಣೆಗೆ ಸ್ಪರ್ಧೆ ಮಾಡಿ ಹೀನಾಯವಾಗಿ ಸೋತಿದ್ದು ಈಗ ಇತಿಹಾಸ" ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ನಿಮ್ಮನ್ನು ಎಂಎಲ್‌ಸಿ ಮಾಡಿದ್ದಾರೆ

ನಿಮ್ಮನ್ನು ಎಂಎಲ್‌ಸಿ ಮಾಡಿದ್ದಾರೆ

"ನೀವು ಸೋತ ನಂತರವೂ ನಿಮ್ಮನ್ನು ಕೈಬಿಡದ ಮಾನ್ಯ ಯಡಿಯೂರಪ್ಪ ನವರು ಎಂ.ಎಲ್.ಸಿ ಮಾಡಿದ್ದಾರೆ. ಆದ್ರೆ ನೀವು ಮಾಡಿದ್ದೇನು? ನಿಮಗೆ ಸಚಿವ ಸ್ಥಾನ ಕೊಡಲಿಲ್ಲ ಎನ್ನುವ ಹತಾಶೆ ಮನೋಭಾವನೆಯಿಂದ ಐದು ದಶಕಗಳ ಕಾಲ ಅನೇಕ ರೈತ ಪರ ಹೋರಾಟಗಳ ಮೂಲಕ ತಮ್ನ ರಕ್ತವನ್ನೇ ಬಸಿದು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಮಹಾನ್ ನಾಯಕರಾದ ಮಾನ್ಯ ಯಡಿಯೂರಪ್ಪ ನವರು ಹಾಗೂ ಅವರ ಕುಟುಂಬದ ವಿರುದ್ಧವೇ ಬಹಿರಂಗವಾಗಿ ಭ್ರಷಾಚಾರದ ಆರೋಪ ಮಾಡುತ್ತೀರಾ?" ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.

  51 ಶಾಸಕರಿಂದ ಅಭಿಪ್ರಾಯ ಪಡೆದ ಅರುಣ್ ಸಿಂಗ್! | Oneindia Kannada
  ಪಕ್ಷದಿಂದ ಉಚ್ಛಾಟನೆ ಮಾಡಿ

  ಪಕ್ಷದಿಂದ ಉಚ್ಛಾಟನೆ ಮಾಡಿ

  "ನಾನು ನಿಮ್ಮ ಹಿರಿತನಕ್ಕೆ ಗೌರವ ನೀಡುತ್ತೇನೆ ಆದ್ರೆ ನೀವು ಅಧಿಕಾರದ ಆಸೆಗೆ ಪಕ್ಷದಿಂದ ಪಕ್ಷಕ್ಕೆ ನೆಗೆಯುತ್ತಾ ಮಾನಸಿಕ ಸ್ಥಿಮಿತ ಕಳೆದುಕೊಂಡು ನಮ್ಮ ಪಕ್ಷ ಹಾಗೂ ನಾಯಕರ ವಿರುದ್ಧವೇ ಬಹಿರಂಗವಾಗಿ ಟೀಕಿಸುತ್ತಿರುವುದನ್ನು ನಾವು ಸಹಿಸುವುದಿಲ್ಲ, ತಕ್ಷಣವೇ ನಿಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಮಾನ್ಯ ರಾಜ್ಯಾಧ್ಯಕ್ಷರಲ್ಲಿ ಒತ್ತಾಯಿಸುತ್ತೇನೆ" ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

  English summary
  Honnali BJP MLA MP Renukacharya responded to the allegations of BJP leader and MLC H. Vishwanath.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X