ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಪಿಎಂಸಿ ತಿದ್ದುಪಡಿ ಕಾಯ್ದೆ: ಲೋಕಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿರೋಧ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19: ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಶುಕ್ರವಾರ ಲೋಕಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಲೋಕಸಭೆಯಲ್ಲಿ ಅನುಮೋದನೆಗೊಂಡ ಕೃಷಿ ಸಂಬಂಧಿಸಿದ ಮೂರು ಮಸೂದೆಗಳಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಸೂದೆಯೂ ಸೇರಿತ್ತು. ಇದಕ್ಕೆ ಕಾಂಗ್ರೆಸ್ ಹಾಗೂ ಇತರೆ ವಿರೋಧಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

'ಲೋಕಸಭೆಯಲ್ಲಿ ಎಪಿಎಂಸಿ ಕಾಯ್ದೆ ವಿಷಯ ಪ್ರಸ್ತಾಪಿಸಿ ತಿದ್ದುಪಡಿ ಜಾರಿಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿ, ಈ ಕೆಳಗಿನ ಕೆಲ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿ ಸ್ಪಷ್ಟನೆ ಕೋರಿದ್ದೇನೆ, ಸರ್ಕಾರ ಈ ರೈತ ವಿರೋಧಿ ಕಾಯ್ದೆ ಜಾರಿಗೆ ತರುವುದನ್ನು ಕೈಬಿಡಬೇಕೆಂದು ಆಗ್ರಹಿಸಿದ್ದೇನೆ' ಎಂದು ಪ್ರಜ್ವಲ್ ರೇವಣ್ಣ ಮಾಹಿತಿ ನೀಡಿದ್ದಾರೆ.

ಸಂಸದರಲ್ಲಿ ಕೊರೊನಾ ವೈರಸ್: ಸಂಸತ್ ಮುಂಗಾರು ಅಧಿವೇಶನ ಮೊಟಕು?ಸಂಸದರಲ್ಲಿ ಕೊರೊನಾ ವೈರಸ್: ಸಂಸತ್ ಮುಂಗಾರು ಅಧಿವೇಶನ ಮೊಟಕು?

'ಕಾಯ್ದೆ ತಿದ್ದುಪಡಿಯಾಗಿ ಜಾರಿಯಾದರೆ ರೈತರು ಬೆಳೆದ ಫಸಲನ್ನು ದೇಶಾದ್ಯಂತ ಮಾರಾಟ ಮಾಡಬಹುದು ಎಂದು ಹೇಳುತ್ತಿದ್ದೀರಿ. ಆದರೆ ಈಗಾಗಲೇ ರೈತ ತಾನು ಬೆಳೆದ ಬೆಲೆಯನ್ನು ಸ್ವತಂತ್ರವಾಗಿ ಬೇರೆ ಕಡೆ ಕೂಡ ಮಾರಾಟ ಮಾಡುತ್ತಿದ್ದಾರೆ. ಉದಾಹರಣೆಗೆ ಹಾಸನದಲ್ಲಿ ಬೆಳೆದ ಆಲೂಗೆಡ್ಡೆ ಬೇರೆ ರಾಜ್ಯಗಳಲ್ಲೂ ಮಾರಾಟವಾಗುತ್ತಿದೆ, ಇದರಲ್ಲಿ ಹೊಸತೇನು ಇಲ್ಲ' ಎಂದು ಪ್ರಜ್ವಲ್ ಲೋಕಸಭೆಯಲ್ಲಿ ಹೇಳಿದ್ದಾರೆ. ಮುಂದೆ ಓದಿ.

ರೈತರು ಆದಾಯ ತೆರಿಗೆ ವ್ಯಾಪ್ತಿಗೆ?

ರೈತರು ಆದಾಯ ತೆರಿಗೆ ವ್ಯಾಪ್ತಿಗೆ?

'ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೆ ತರುವ ಮೂಲಕ ಮಧ್ಯಮ ವರ್ಗದ ರೈತರನ್ನು ಆದಾಯ ತೆರಿಗೆ ಅಡಿಯಲ್ಲಿ ತರುವ ಬಗ್ಗೆ ಸರ್ಕಾರವೇನಾದರೂ ಯೋಚಿಸುತ್ತಿದೆಯಾ ಎಂಬ ಸಂಶಯ ಮೂಡುತ್ತಿದೆ' ಎಂದು ಪ್ರಜ್ವಲ್ ಕಾಯ್ದೆಯ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ರೈತರು ಪರದಾಡಬೇಕಾಗುತ್ತದೆ

ರೈತರು ಪರದಾಡಬೇಕಾಗುತ್ತದೆ

ಈ ಕಾಯ್ದೆ ತಿದ್ದುಪಡಿ ನಂತರ ಹಂತ ಹಂತವಾಗಿ ದೇಶಾದ್ಯಂತ APMC ಮಾರುಕಟ್ಟೆಗಳನ್ನು ಮುಚ್ಚಲಾಗುತ್ತದೆ ಎಂಬ ಸುದ್ದಿ ತೀವ್ರವಾಗಿ ಹರಿದಾಡುತ್ತಿದೆ. ಹಾಗಾದಲ್ಲಿ ಮಳೆ ಹವಾಮಾನ ಏರುಪೇರಿನಿಂದ ಬೆಳೆ ಹಾನಿ ಉಂಟಾಗಿ ಪೆಟ್ಟು ತಿಂದ ಸಣ್ಣ ಹಾಗೂ ಅತೀ ಸಣ್ಣ ವ್ಯವಸಾಯಗಾರರಿಗೆ ತಾವು ಬೆಳೆದ ಫಸಲನ್ನು ದೂರದ ಊರುಗಳಿಗೆ ಸಾಗಿಸಲಾಗದೆ ಪರದಾಡಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಸೂದೆಗಳು ರೈತ ವಿರೋಧಿ ಎಂದೇ ಇಲ್ಲ: ಉಲ್ಟಾ ಹೊಡೆದ ಹರ್ಸಿಮ್ರತ್ ಕೌರ್ ಮಸೂದೆಗಳು ರೈತ ವಿರೋಧಿ ಎಂದೇ ಇಲ್ಲ: ಉಲ್ಟಾ ಹೊಡೆದ ಹರ್ಸಿಮ್ರತ್ ಕೌರ್

ರೈತ ವಿರೋಧಿ ಕಾಯ್ದೆ

ರೈತ ವಿರೋಧಿ ಕಾಯ್ದೆ

ಸರ್ಕಾರ ವಿಶ್ವ ವ್ಯಾಪಾರ ಒಪ್ಪಂದ (ಡಬ್ಲ್ಯೂಟಿಒ) ಕೆಲ ಮುಂದುವರೆದ ದೇಶ, ಬಹು ರಾಷ್ಟ್ರೀಯ ಕಂಪನಿಗಳು ಹಾಗೂ ದೊಡ್ಡ ಖಾಸಗಿ ಕಂಪನಿಗಳ ಒತ್ತಡಕ್ಕೆ ಮಣಿದು ಈ ರೈತ ವಿರೋಧಿ ಕಾಯ್ದೆ ಜಾರಿಗೆ ತರಲು ಹೊರಟಿದೆಯಾ ಎಂಬ ಪ್ರಬಲ ಸಂಶಯ ಕೂಡ ಮೂಡಿದೆ ಎಂದರು.

Recommended Video

ಉಪ ಮುಖ್ಯಮಂತ್ರಿ C.S Ashwathnarayan ಅವರಿಗೂ Covid Positive | Oneindia Kannada
ಕೃಷಿ ಕ್ಷೇತ್ರಕ್ಕೆ ಮಾರಕ

ಕೃಷಿ ಕ್ಷೇತ್ರಕ್ಕೆ ಮಾರಕ

ಜೂನ್ 3 ರಂದು ಸಚಿವ ಸಂಪುಟದಲ್ಲಿ ಅಂಗೀಕರಿಸಲಾದ ಈ ಕಾಯ್ದೆ ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ ನಿರ್ಣಯವೆಂದು ಸರ್ಕಾರ ಬಣ್ಣಿಸಿದೆ. ಆದರೆ ವಾಸ್ತವವಾಗಿ ಈ ಕಾಯ್ದೆ ರೈತ ವಿರೋಧಿಯಾಗಿದ್ದು ಕೃಷಿ ಕ್ಷೇತ್ರಕ್ಕೆ ಮಾರಕವಾಗಲಿದೆ ಎಂದು ಪ್ರಜ್ವಲ್ ರೇವಣ್ಣ ಕಾಯ್ದೆಗೆ ಆಕ್ಷೇಪ ವ್ಯಕ್ತಪಡಿಸಿದರು.

English summary
MP Prajwal Revanna opposed union government's move of APMC Amendment Act in Lok Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X