ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪಕ್ಷಗಳನ್ನು ಕಾಗೆ, ಕೋತಿ, ನರಿ ಎಂದ ಅನಂತಕುಮಾರ್ ಹೆಗಡೆ

|
Google Oneindia Kannada News

ಶಿರಸಿ, ಜೂನ್ 29: "ಒಂದು ಕಡೆ ಕಾಗೆ, ಕೋತಿ, ನರಿಗಳು ಒಂದಾಗಿವೆ, ಇನ್ನೊಂದೆಡೆ ನಮ್ಮೊಂದಿಗೆ 'ಹುಲಿ' ಇದೆ. 2019 ರಲ್ಲಿ ಹುಲಿಯನ್ನು ಆರಿಸಬೇಕೋ, ಇತರರನ್ನೋ ಎಂದು ಯೋಚಿಸಿ" ಎಂದು ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ.

ಹೆಗಡೆ ಅವರಿಗೂ ವಿವಾದಕ್ಕೂ ಅವಿನಾಭಾವ ಸಂಬಂಧ. ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಅನಂತ ಕುಮಾರ್ ಹೆಗಡೆ ಇದೀಗ ವಿಪಕ್ಷಗಳನ್ನು ಕಾಗೆ, ಕೋತಿ, ನರಿಗಳಿಗೆ ಹೋಲಿಸಿರುವುದು ವಿಪಕ್ಷಗಳ ಕಣ್ಣನ್ನು ಕೆಂಪಾಗಿಸಿದೆ.

ಅನಂತ್‌ಕುಮಾರ್ ಹೆಗಡೆ ವಿರುದ್ಧ ಜೆಡಿಎಸ್‌ನ 'ಪುಟಗೋಸಿ' ಪ್ರತಿಭಟನೆಅನಂತ್‌ಕುಮಾರ್ ಹೆಗಡೆ ವಿರುದ್ಧ ಜೆಡಿಎಸ್‌ನ 'ಪುಟಗೋಸಿ' ಪ್ರತಿಭಟನೆ

ಅಷ್ಟೇ ಅಲ್ಲ, ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಜನರನ್ನುದ್ದೇಶಿ. 'ನೀವೆಲ್ಲ ಈಗ ಪ್ಲಾಸ್ಟಿಕ್ ಖುರ್ಚಿಯಲ್ಲಿ ಕುಳಿತಿದ್ದೀರಾ. ಅಲ್ಲವೇ? ಅದಕ್ಕೆ ಕಾರಣ 70 ವರ್ಷಗಳ ಕಾಂಗ್ರೆಸ್ ಆಡಳಿತ. 70 ವರ್ಷಗಳಿಂದ ನಾವು ಆಡಳಿತ ನಡೆಸಿದ್ದರೆ ನೀವೀಗ ಬೆಳ್ಳಿ ಖುರ್ಚಿಯ ಮೇಲೆ ಕುಳಿತಿರುತ್ತಿದ್ದಿರಿ' ಎಂದು ಅವರು ಹೇಳಿದ್ದಾರೆ.

MP Anant Kumar Hegde compares opposition parties to crows, monkey and foxes!

ಇತ್ತೀಚೆಗಷ್ಟೇ, 'ಜೆಡಿಎಸ್ ಒಂದು ಪುಟಗೋಸಿ ಪಕ್ಷ' ಎನ್ನುವ ಮೂಲಕ ಹೆಗಡೆ ವಿವಾದ ಸೃಷ್ಟಿಸಿದ್ದರು.

'ಕಾಂಗ್ರೆಸ್ ಒಂದು ನಾಟಕದ ಕಂಪನಿ', 'ರಾಹುಲ್ ಗಾಂಧಿ ಒಬ್ಬ ಕೋಟಾ ಹಿಂದುತ್ವವಾದಿ' ಎಂಬಿತ್ಯಾದಿ ವಿವಾದಾತ್ಮಕ ಹೇಳಿಕೆಗಳೂ ಹೆಗಡೆ ಅವರ ಬತ್ತಳಿಕೆಯಿಂದ ಉದುರಿದ್ದವು!

English summary
Member of Parliament from Uttara Kannada Constituency Anant Kumar Hegde gives another controversial statement in a programme. 'On one side crows, monkeys, foxes and others have come together, On the other side we have a tiger. In 2019, choose to elect the tiger' he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X