ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗಾ: ಸೊಸೆಗೆ ಆಹಾರದಲ್ಲಿ ವಿಷ ಹಾಕಿದ ಅತ್ತೆ

By Ashwath
|
Google Oneindia Kannada News

ಗುಲ್ಬರ್ಗಾ, ಜೂ.25: ಆಸ್ತಿ ಮೇಲಿನ ಆಸೆಗಾಗಿ ಅತ್ತೆಯೊಬ್ಬಳು ತನ್ನ ಸೊಸೆ ಮತ್ತು ನಾಲ್ವರು ಮೊಮ್ಮಕ್ಕಳಿಗೆ ವಿಷ ನೀಡಿ ಹತ್ಯೆಗೆ ಯತ್ನಿಸಿದ ಘಟನೆ ಗುಲ್ಬರ್ಗಾದ ಜೇವರ್ಗಿ ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ ನಡೆದಿದೆ.

ಬಳಬಟ್ಟಿ ಗ್ರಾಮದ 35 ವರ್ಷದ ಸುವರ್ಣ ಮತ್ತು ಮಕ್ಕಳಾದ 10 ವರ್ಷದ ಪರಸಪ್ಪ, 12 ವರ್ಷದ ಅಶ್ವಿನಿ, 16 ವರ್ಷದ ಶರಣಬಸವ ಮತ್ತು 14 ವರ್ಷದ ರೋಹಿಣಿ ವಿಷ ಸೇವಿಸಿ ಅಸ್ವಸ್ಥರಾಗಿದ್ದಾರೆ.

ಸುವರ್ಣಾಳ ಪತಿ ಮೂರು ವರ್ಷ‌ದ ಮೃತಪಟ್ಟಿದ್ದು ನಾಲ್ವರು ಪುಟ್ಟ ಪುಟ್ಟ ಮಕ್ಕಳ ಜೊತೆ ಈಕೆ ಜೀವನ ನಡೆಸುತ್ತಿದ್ದಾಳೆ. ಪತಿಯ ಹೆಸರಿನಲ್ಲಿ ಪಿತ್ರಾರ್ಜಿತ ಆಸ್ತಿ ಇದ್ದು ಸೊಸೆ ಎಷ್ಟು ಬೇಡಿಕೊಂಡರೂ ಅತ್ತೆ ಮಹಾದೇವಿ ಮಗನ ಪಾಲನ್ನು ಸೊಸೆಗೆ ನೀಡುತ್ತಿರಲಿಲ್ಲ.

gulbarga
ಈ ವಿಚಾರವಾಗಿ ಎರಡು ದಿನಗಳಿಂದ ಅತ್ತೆ ಮತ್ತು ಸೊಸೆ ನಡುವೆ ಜಗಳ ನಡೆಯುತ್ತಿತ್ತು. ಎಷ್ಟು ಹೇಳಿದರೂ ಅತ್ತೆ ಗಂಡನ ಪಾಲನ್ನು ನೀಡದ್ದಕ್ಕೆ ಸೊಸೆ ಪೊಲೀಸ್‌ ಠಾಣೆಯ ಮೆಟ್ಟಿಲು ಹತ್ತಿದ್ದಾಳೆ.[ಡೆಡ್ಲಿ ಸೋಮನ ಗ್ಯಾಂಗಿನ ಕವಳ-ಕುಟ್ಟಿ ಕಥೆ]

ಇದರಿಂದ ಸಿಟ್ಟಾದ ಅತ್ತೆ ಮಹಾದೇವಿ, ಮೈದುನ ಗುರಣ್ಣ ಮತ್ತು ನಾದನಿಯರು ಸೇರಿ ಸುವರ್ಣ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೆ ಅಲ್ಲದೇ ಸುವರ್ಣ ಮತ್ತು ಮಕ್ಕಳ ಸಾಯಿಸಲು ಆಹಾರದಲ್ಲಿ ವಿಷ ಹಾಕಿದ್ದರು ಎಂದು ಹೇಳಲಾಗುತ್ತಿದೆ.

ವಿಷಾಹಾರ ಸೇವಿಸಿರುವ ಸುವರ್ಣ ಹಾಗೂ ಮಕ್ಕಳನ್ನು ಗುಲ್ಬರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Mother-in-law attempted to kill daughter-in-law (widow) and grand children by feeding poison in the food in Jevargi taluk in Gulbarga district. The widow was pestering for share in property belonging to her late husband. Mother and children have been admitted to govt hospital in Gulbarga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X