• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ 2ನೇ ಅಲೆ: ಬಹುತೇಕ ಮಂದಿ ಮೃತಪಡುತ್ತಿರುವುದು ಈ ಕಾರಣದಿಂದ

|

ಬೆಂಗಳೂರು, ಮೇ 08:ಕೊರೊನಾ ಮೊದಲ ಅಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ ಮೃತಪಡುವವರ ಸಂಖ್ಯೆ ಕಡಿಮೆಯೇ ಇತ್ತು. ಆದರೆ ಎರಡನೇ ಅಲೆ ಹಾಗಲ್ಲ, ವಯಸ್ಸಿನ ಭೇದಭಾವವೂ ಇಲ್ಲ, ಯಾವುದೇ ಇತರೆ ರೋಗಗಳು ಇಲ್ಲದಿದ್ದರೂ ಕೂಡ ಸಾಕಷ್ಟು ಮಂದಿ ಮೃತಪಡುತ್ತಿದ್ದಾರೆ.

ಆದರೆ ಈ ಎಲ್ಲರ ಸಾವಿಗೆ ಕಾರಣವಾಗಿದ್ದು ಉಸಿರಾಟ ತೊಂದರೆ ಎಂದರೆ ತಪ್ಪಾಗಲಾರದು, ಹೌದು ಕೊರೊನಾ ಸೋಂಕು ತಗುಲಿದ ಬಳಿಕ, ಮೈಕೈ ನೋವು, ವಿಪರೀತ ಜ್ವರ, ತಲೆ ನೋವು, ಕೆಮ್ಮು, ಒಣಕಫ ಇತರೆ ಲಕ್ಷಣಗಳಿದ್ದರೂ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದವರೇ ಹೆಚ್ಚು.

ಕೊರೊನಾ ನಿಭಾಯಿಸಲು ಸರಕಾರಕ್ಕೆ ಎಚ್ಡಿಕೆ ಕೊಟ್ಟ 10 ಸಲಹೆಗಳುಕೊರೊನಾ ನಿಭಾಯಿಸಲು ಸರಕಾರಕ್ಕೆ ಎಚ್ಡಿಕೆ ಕೊಟ್ಟ 10 ಸಲಹೆಗಳು

ರಾಜ್ಯದಲ್ಲಿ ಕೊರೊನಾ ವೈರಸ್ ಸಾವಿನ ಸುನಾಮಿಯನ್ನೇ ಎಬ್ಬಿಸಿದ್ದು, ಶುಕ್ರವಾರ ಒಂದೇ ರಾಜ್ಯದಲ್ಲಿ ದಾಖಲೆಯ 592 ಮಂದಿ ಪ್ರಾಣವನ್ನು ಕಸಿದುಕೊಂಡಿದೆ. ಇಷ್ಟೊಂದು ಜನರು ಒಂದೇ ದಿನ ಮೃತಪಟ್ಟಿರುವುದು ದಾಖಲೆಯಾಗಿದೆ.

ಕೊರೊನಾ ಎರಡನೇ ಅಲೆಯಲ್ಲಿ ಉಸಿರಾಟ ಸಮಸ್ಯೆ ಹೆಚ್ಚು

ಕೊರೊನಾ ಎರಡನೇ ಅಲೆಯಲ್ಲಿ ಉಸಿರಾಟ ಸಮಸ್ಯೆ ಹೆಚ್ಚು

ಈ ನಡುವೆ ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ತಜ್ಞರು, ಕೊರೊನಾ ಎರಡನೆ ಅಲೆಯಲ್ಲಿ ಸಾಕಷ್ಟು ಜನರು ಉಸಿರಾಟ ಸಮಸ್ಯೆಯಿಂದಲೇ ಸಾವನ್ನಪ್ಪುತ್ತಿದ್ದಾರೆ. 2ನೇ ಅಲೆಯಲ್ಲಿ ಉಸಿರಾಟ ಸಮಸ್ಯೆಯೇ ದೊಡ್ಡ ಲಕ್ಷಣವಾಗಿದೆ.
ಮೊದಲ ಅಲೆಗೆ ಹೋಲಿಕೆ ಮಾಡಿದರೆ ಎರಡನೇ ಅಲೆಯಲ್ಲಿ ಸಾಕಷ್ಟು ಜನರಲ್ಲಿ ಉಸಿರಾಟ ಸಮಸ್ಯೆ ಎದುರಾಗುತ್ತಿದೆ. ಇದರ ಜೊತೆಗೆ ಜ್ವರ, ಮೈ ಕೈ ನೋವು, ಅತೀವ್ರ ತಲೆನೋವು ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ ಎಂಡು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿರುವ ಜಯದೇವ ಆಸ್ಪತ್ರೆಯ ವೈದ್ಯ ಡಾ.ಸಿಎನ್.ಮಂಜುನಾಥ್ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಮರಣ ಪ್ರಮಾಣ ಹೆಚ್ಚಾಗಿದೆ

ರಾಜ್ಯದಲ್ಲಿ ಮರಣ ಪ್ರಮಾಣ ಹೆಚ್ಚಾಗಿದೆ

ಏ.5ರಂದು ಒಂದೇ ದಿನ 346 ಮಂದಿ ಮೃತಪಟ್ಟಿದ್ದೇ ಈ ವರೆಗಿನ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿತ್ತು. ಶುಕ್ರವಾರ ಸುಮಾರು 2 ನಿಮಿಷಕ್ಕೆ ಒಬ್ಬರಂತೆ ಕೋವಿಡ್ ನಿಂದ ಮೃತರಾಗಿದ್ದು, ಮರಣ ಪ್ರಮಾಣ ಶೇ.1.21ರಷ್ಟಾಗಿದೆ. ಕಳೆದ ಮಾರ್ಚ್ 2 ರಂದು ಶೇ.1.60 ಮರಣ ದರ ದಾಖಲಾಗಿತ್ತು.

ಬೆಂಗಳೂರಿನಲ್ಲಿ ಮೃತಪಟ್ಟವರೆಷ್ಟು?

ಬೆಂಗಳೂರಿನಲ್ಲಿ ಮೃತಪಟ್ಟವರೆಷ್ಟು?

ಬೆಂಗಳೂರು ನಗರ ವ್ಯಾಪ್ತಿಯಲ್ಲಿ 346 ಮಂದಿ ಮೃತರಾಗಿದ್ದು, ಉಳಿದಂತೆ ಬಳ್ಳಾರಿ, ಹಾಸನ ಮತ್ತು ಮೈಸೂರಿನಲ್ಲಿ 20ಕ್ಕಿಂತ ಹೆಚ್ಚು ಮಂದಿ ಮರಣವನ್ನಪ್ಪಿದ್ದಾರೆ.

440 ಮಂದಿ ಮೃತಪಟ್ಟಿದ್ದು ಉಸಿರಾಟ ಸಮಸ್ಯೆಯಿಂದ

440 ಮಂದಿ ಮೃತಪಟ್ಟಿದ್ದು ಉಸಿರಾಟ ಸಮಸ್ಯೆಯಿಂದ

ರಾಜ್ಯದಲ್ಲಿ ನಿನ್ನೆ ಮೃತಪಟ್ಟ 592 ಮಂದಿ ಪೈಕಿ 440 ಮಂದಿ ಉಸಿರಾಟ ಸಮಸ್ಯೆಯಿಂದಲೇ ಸಾವನ್ನಪ್ಪಿದ್ದು, ಇದೀಗ ಆತಂಕ ಹೆಚ್ಚಾಗುವಂತೆ ಮಾಡಿದೆ.

   Corona ನಿನ್ನೆ ಒಂದೇ ದಿನ ಎಷ್ಟು ಬಲಿ ಪಡೆದಿದೆ ? | Oneindia Kannada

   English summary
   Of the 592 Covid patients who died on Friday, 440 had symptoms of “breathlessness”. Experts said that this has been one of the major symptoms in the second wave. “We have been witnessing more cases of breathlessness, while in the previous wave, symptoms like dry cough, joint pain and headaches were more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X