ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರೇಶ್ ಅಂಗಡಿ ನಿಧನ: 20ವರ್ಷದ ಹಿಂದೆ ಅದೇ ಜಾಗದಲ್ಲಿ ನಡೆದ ಘಟನೆಯ ಬಗ್ಗೆ ಡಿಕೆಶಿ ವಿವರಣೆ

|
Google Oneindia Kannada News

ಬೆಂಗಳೂರು, ಸೆ 24: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ (65) ನಿಧನಕ್ಕೆ ಗಣ್ಯರು ಕಂಬನಿಯನ್ನು ಮಿಡಿದಿದ್ದಾರೆ. ಬುಧವಾರ ರಾತ್ರಿ ಅಂಗಡಿ ಕೊನೆಯುಸಿರು ಎಳೆದಿದ್ದರು.

ವಿಧಾನಮಂಡಲದ ನಾಲ್ಕನೇ ದಿನವಾದ ಇಂದು ಮತೃರಾದ ಸುರೇಶ್ ಅಂಗಡಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಅಗಲಿದ ಗಣ್ಯರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನಾಚಾರಣೆ ಮಾಡಲಾಯಿತು.

ಸಂಸದ ಸುರೇಶ್ ಅಂಗಡಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರುಸಂಸದ ಸುರೇಶ್ ಅಂಗಡಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

ಅಗಲಿದ ನಾಯಕನಿಗೆ ಶ್ರದ್ದಾಂಜಲಿ ಅರ್ಪಿಸುತ್ತಾ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಪ್ಪತ್ತು ವರ್ಷದ ಹಿಂದೆ ಹೊಟೇಲ್ ನಲ್ಲಿ ನಾವಿದ್ದಾಗ, ಇದೇ ರೀತಿಯ ಆಘಾತಕಾರಿ ಘಟನೆ ನಡೆದಿತ್ತು ಎಂದು ಅದರ ವಿವರಣೆಯನ್ನು ನೀಡಿದರು.

ಸುರೇಶ್ ಅಂಗಡಿ ನಿಧನ: ಎಚ್.ಡಿ.ಕುಮಾರಸ್ವಾಮಿ ದಿಗ್ಬ್ರಮೆಸುರೇಶ್ ಅಂಗಡಿ ನಿಧನ: ಎಚ್.ಡಿ.ಕುಮಾರಸ್ವಾಮಿ ದಿಗ್ಬ್ರಮೆ

"ಭಗವಂತ ನೀನು ಯಾಕೆ ಇಷ್ಟು ಕ್ರೂರಿ"ಎಂದಿರುವ ಡಿಕೆಶಿ, "ಕೊರೊನಾ ಬಗ್ಗೆ ನಾನು ಕೂಡಾ ನಿರ್ಲ್ಯಕ್ಷ ವಹಿಸಿದ್ದೆ. ಅದರ ಅನುಭವ ನನಗೂ ಆಗಿದೆ"ಎಂದು ಡಿಕೆಶಿ, ಭಾವೋದ್ವೇಗಕ್ಕೆ ಒಳಗಾದರು. ಡಿಕೆಶಿ, ಸದನದಲ್ಲಿ ಆಡಿದ ಮಾತು ಹೀಗಿದೆ:

ಮುತ್ತೂರ್ ಎನ್ನುವವರು ಸಹಕಾರಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು

ಮುತ್ತೂರ್ ಎನ್ನುವವರು ಸಹಕಾರಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು

"ನಿನ್ನೆ ಸಾಯಂಕಾಲ ನಾನು ನನ್ನೆಲ್ಲಾ ಶಾಸಕರಿಗೆ ಏಟ್ರಿಯಾ ಹೋಟೆಲ್ ನಲ್ಲಿ ಊಟಕ್ಕೆ ಕರೆದಿದ್ದೆ. ಇದೇ ರೀತಿ ಇಪ್ಪತ್ತು ವರ್ಷದ ಹಿಂದೆ (ನವೆಂಬರ್ 14) ಅದೇ ಹೋಟೆಲ್ ನಲ್ಲಿ ನಾವೆಲ್ಲಾ ಸೇರಿದ್ದೆವು.ಎಸ್.ಟಿ.ಸೋಮಶೇಖರ್ ಎಲ್ಲಾ ನಮ್ಮ ಜೊತೆಗಿದ್ದರು. ಆ ವೇಳೆ, ಮುತ್ತೂರ್ ಎನ್ನುವವರು ಸಹಕಾರಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು" - ಡಿ.ಕೆ.ಶಿವಕುಮಾರ್.

ಯಮಧರ್ಮ ಏನು ಮಾಡಬೇಕೆಂದು ಇರುತ್ತಾನೋ, ಅದನ್ನೇ ಮಾಡುತ್ತಾನೆ

ಯಮಧರ್ಮ ಏನು ಮಾಡಬೇಕೆಂದು ಇರುತ್ತಾನೋ, ಅದನ್ನೇ ಮಾಡುತ್ತಾನೆ

"ಮುತ್ತೂರ್ ಎನ್ನುವವರು ಹೋಟೆಲ್ ನಲ್ಲಿ ನಮ್ಮ ಜೊತೆಗಿದ್ದರು. ಊಟ ಎಲ್ಲಾ ಮುಗಿದ ಮೇಲೆ ನಾವೆಲ್ಲಾ ಮನೆಗೆ ಸೇರಿಕೊಂಡೆವು. ಅರ್ಧ ಗಂಟೆಯಲ್ಲೇ ನನಗೆ ಫೋನ್ ಬಂತು. ಮುತ್ತೂರ್ ಅವರು ತೀರಿಕೊಂಡರು ಎಂದು. ಅವರು ನನಗೆ ಒಂದು ಮಾತನ್ನು ಹೇಳಿದ್ದರು. ಯಮಧರ್ಮ ಏನು ಮಾಡಬೇಕೆಂದು ಇರುತ್ತಾನೋ, ಅದನ್ನೇ ಮಾಡುತ್ತಾನೆ ಎನ್ನುವ ಮಾತನ್ನು ಮುತ್ತೂರ್, ಹೋಟೆಲ್ ನಲ್ಲಿದ್ದಾಗ ಹೇಳಿದ್ದರು" - ಡಿ.ಕೆ.ಶಿವಕುಮಾರ್.

ಸುರೇಶ್ ಅಂಗಡಿಯವರ ಸಾವಿನ ಸುದ್ದಿ ಬಂತು

ಸುರೇಶ್ ಅಂಗಡಿಯವರ ಸಾವಿನ ಸುದ್ದಿ ಬಂತು

"ಮನಸ್ಸು ಮತ್ತು ಹಣ ಚಂಚಲ, ಒಂದು ಕಡೆ ಇದ್ದದ್ದು ಇರುವುದಿಲ್ಲ. ನಿನ್ನೆ (ಸೆ 23) ಅದೇ ರೀತಿ ನಾವೆಲ್ಲಾ ಶಾಸಕರು ಊಟಕ್ಕೆ ಸೇರಿದ್ದೆವು. ಆ ವೇಳೆ, ಸುರೇಶ್ ಅಂಗಡಿಯವರ ಸಾವಿನ ಸುದ್ದಿ ಬಂತು. ಪಕ್ಷ ಯಾವುದೇ ಇರಲಿ. ನಮಗೆ ಯಾರಿಗೂ ಪಾರ್ಟಿ ಮುಂದುವರಿಸಲು ಇಷ್ಟವಾಗಲಿಲ್ಲ. ನಾನೂ ಅವರನ್ನು ಭೇಟಿಯಾಗಿದ್ದೆ" - ಡಿ.ಕೆ.ಶಿವಕುಮಾರ್.

Recommended Video

ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡ್ಲಿ | Oneindia Kannada
ಯಾಕೆ ಈ ಭಗವಂತ ಇಷ್ಟು ಕ್ರೂರಿ

ಯಾಕೆ ಈ ಭಗವಂತ ಇಷ್ಟು ಕ್ರೂರಿ

"ಶಿವಕುಮಾರ್ ನಾನು ಮಂತ್ರಿ ಸ್ಥಾನವನ್ನು ಕೇಳಲೇ ಇಲ್ಲ, ಆದ್ರೂ ಚಾನ್ಸ್ ಕೊಟ್ಟಿದ್ದಾರೆ. ರಾಜ್ಯಕ್ಕೆ ಏನು ಬೇಕಾದರೂ ಮಾಡುತ್ತೇನೆ ಎಂದು ಒಳ್ಳೆಯ ಪ್ರಾಜೆಕ್ಟ್ ತರಲು ಮುಂದಾಗಿದ್ದರು. ಕೊರೊನಾ ಬಗ್ಗೆ ಸಿದ್ದರಾಮಯ್ಯ ಹಲವು ಬಾರಿ ನನ್ನನ್ನು ಎಚ್ಚರಿಸಿದ್ದರು. ಸುರೇಶ್ ಅಂಗಡಿ ಸಾವಿನಿಂದ ರಾಜ್ಯಕ್ಕೆ ದೊಡ್ಡ ಅನ್ಯಾವಾಗಿದೆ. ಯಾಕೆ ಈ ಭಗವಂತ ಇಷ್ಟು ಕ್ರೂರಿ ಎಂದು ದೇವರ ಮೇಲೆಯೇ ನಂಬಿಕೆ ಕಳೆದುಕೊಳ್ಳುವಂತಾಗಿದೆ" - ಡಿ.ಕೆ.ಶಿವಕುಮಾರ್.

ಅಂಗಡಿಯವರ ಸಾವು ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ

"ಸುರೇಶ್ ಅಂಗಡಿಯವರ ಸಾವು ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ. ಸರಳ, ಸೌಮ್ಯ ಸ್ವಭಾವದ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ , ಅವರ ಕ್ಷೇತ್ರದ ಜನತೆಗೆ ದುಃಖವನ್ನು ಭರಿಸುವ ಶಕ್ತಿ ನೀಡಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ"ಎಂದು ಡಿ.ಕೆ.ಶಿವಕುಮಾರ್ ಸದನದಲ್ಲಿ ಹೇಳಿದರು.

English summary
MoS Railways Suresh Angadi Death: KPCC President DK Shivakumar Condolence Speech In Assembly Session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X