ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈನ ವಿಗ್ರಹ ಕದ್ದಿದ್ದ ಸಂತೋಷ್ ದಾಸನಿಗೆ ಜಾಮೀನು!

By Srinath
|
Google Oneindia Kannada News

Moodabidri jain idols theft accused Santosh Ghanashyam gets bail
ಮೂಡಬಿದಿರೆ, ಮಾರ್ಚ್ 1- ಇಲ್ಲಿನ ಜೈನ ಬಸದಿ ಸಿದ್ಧಾರ್ಥ ದರ್ಶನ್ ಮಂದಿರದಲ್ಲಿ 15 ರತ್ನಖಚಿತ ವಿಗ್ರಹಗಳನ್ನು ಜುಲೈ 6ರ ರಾತ್ರಿ ಕಳ್ಳತನ ಮಾಡಿದ್ದ ಪ್ರಮುಖ ಚೋರ ಸಂತೋಷ್ ದಾಸ್ ಅಲಿಯಾಸ್ ಘನಶ್ಯಾಮನಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ದಯಪಾಲಿಸಿದೆ.

ಪ್ರಕರಣ ಬೇಧಿಸಲು ಪರಿತಪಿಸುತ್ತಿದ್ದ ಪೊಲೀಸರಿಗೆ ಕರೆ ಮಾಡಿದ್ದ ಘನಶ್ಯಾಮ 'ನಿಮಗೆ ದಮ್ಮಿದ್ರೆ ನನ್ನ ಹಿಡೀರಿ' ಎಂದು ಸವಾಲು ಹಾಕಿದ್ದ. ಇದೀಗ ನ್ಯಾಯಾಲಯದ ಮೂಲಕ ಹೊರಬಂದಿರುವ ಚೋರ ಘನಶ್ಯಾಮ ಅದೇ ಪೊಲೀಸರಿಗೆ ಯಾವ ಬೆದರಿಕೆ ಹಾಕುತ್ತಾನೋ ನ್ಯಾಯದೇವತೆಯೇ ಹೇಳಬೇಕು.

ಅದೇನೇ ಇರಲಿ ಇಲ್ಲಿನ ಘನ ನ್ಯಾಯಾಲಯವಂತೂ ಒಡಿಶಾದ ನಯಾಗಢ ಜಿಲ್ಲೆಯ ಈ ವಿಗ್ರಹ ಚೋರ ಸಂತೋಷ್ ದಾಸನಿಗೆ ಮಂಗಳೂರಿನ ಮೂರನೆಯ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಜಾಮೀನು ನೀಡಿದೆ. ಕುಖ್ಯಾತ ವಿಗ್ರಹ ಚೋರ ಘನಶ್ಯಾಮ ಇದೊಂದೇ ಅಲ್ಲ, ದೇಶಾದ್ಯಂತ ಅನೇಕ ಕಡೆಗಳಲ್ಲಿ ವಿಗ್ರಹಗಳನ್ನು ಕದ್ದಿದ್ದಾನೆ.

ಕಳ್ಳತವಾಗಿದ್ದ ಅಷ್ಟೂ ವಿಗ್ರಹಗಳು ಸೇರಿದಂತೆ ಒಟ್ಟು 20 ಪೊಲೀಸರಿಗೆ ದೊರೆತಿವೆ. ಆದರೆ ಕಳುವಾಗಿದ್ದು 12 ಅಷ್ಟೇ. ಹಾಗಾಗಿ ಪ್ರಕರಣದ ಆರೋಪಿ, ತನ್ನ ಕಕ್ಷಿದಾರ ಸಂತೋಷ್ ದಾಸನಿಗೆ ಜಾಮೀನು ನೀಡಬೇಕು ಎಂದು ಕೋರಿ ವಕೀಲ ನಾಗೇಶ್ ಶೆಟ್ಟಿ ಅರ್ಜಿ ಸಲ್ಲಿಸಿದ್ದರು.

ಪೊಲೀಸರು ಸಂತೋಷ್ ದಾಸ್ ಹೆಸರಿಸಿದ್ದ ಇತರೆ ಆರೋಪಿಗಳನ್ನು ವಿಚಾರಣೆಗೊಳಪಡಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ವಕೀಲ ನಾಗೇಶ್ ವಾದ ಮಂಡಿಸಿದ್ದರು. ಪ್ರಕರಣದ ಸಂಬಂಧ ಸ್ಥಳೀಯ ಪೊಲೀಸರು ಆರೋಪಿ ಘನಶ್ಯಾಮನ ಪತ್ನಿ ದೀಪ್ತಿಮಯಿ ಪಟ್ನಾಯಿಕ್ ಮತ್ತು ಆಕೆಯ ತಂದೆ ದಿಗಂಬರ ಮೊಹಂತಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ನ್ಯಾಯಾಲಯ ವರಿಗೂ ಜಾಮೀನು ನೀಡಿ, ಬಿಟ್ಟುಕಳುಹಿಸಿತ್ತು.

English summary
Moodabidri police who had cracked Jain mutt idols theft (on Saturday July 6) case and nabbed main thief Santosh Das from Bhuvaneshwar were today disappointed as the accuussed given bail by the Third Additional Civil Court in Mangalore. Santosh Das alias Ghanashyam, the prime accused in the case of burglary of valuable idols worth several thousands of crores from the Siddantha Darshana Mandir of Moodbidri last year, has now been granted bail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X