ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೂ ಉಂಟೆ! 12 ಜೈನ ವಿಗ್ರಹ ಅಂಚೆಯಲ್ಲಿ ವಾಪಸ್

By Srinath
|
Google Oneindia Kannada News

moodabidri-idols-theft-case-idols-sent-by-speed-post-mangalore-police
ಮೂಡುಬಿದಿರೆ, ನ.6: ರಾಜ್ಯದಲ್ಲಿ ಭಾರಿ ಸಂಚಲವನ್ನುಂಟುಮಾಡಿದ್ದ ಮೂಡಬಿದಿರೆಯ ಜೈನ ದೇಗುಲ ಕಳವು ಪ್ರಕರಣ ಕುತೂಹಲ/ವಿಚಿತ್ರ ತಿರುವು ಪಡೆದಿದೆ. ಇಲ್ಲಿನ ಜೈನ ಬಸದಿಯ 15 ರತ್ನಖಚಿತ ವಿಗ್ರಹಗಳನ್ನು ಜುಲೈ 6ರ ರಾತ್ರಿ ಕರಾರುವಕ್ಕಾಗಿ ಕಳ್ಳತನ ಮಾಡಿದ್ದ ಕಳ್ಳರು ಅದಕ್ಕಿಂತ ಕರಾರುವಕ್ಕಾಗಿ ಆ ವಿಗ್ರಹಗಳನ್ನೆಲ್ಲಾ speed postನಲ್ಲಿ ವಾಪಸ್ ಕಳುಹಿಸಿದ್ದಾರೆ!

ಪ್ರಮುಖ ಚೋರ ಸಂತೋಷ್ ದಾಸ್ ಪೊಲೀಸರ ಬಂಧನದಲ್ಲಿರುವಾಗ ಕಳುವಾದ ವಿಗ್ರಹಗಳು ಕೊರಿಯರಿನಲ್ಲಿ ವಾಪಸಾಗಿರುವುದು ವಿಚಿತ್ರವಾಗಿ ಕಿಂಡಿದೆ. ಗಮನಾರ್ಹವೆಂದರೆ ಸಂತೋಷ್ ದಾಸನ ಹೆಂಡತಿ-ಮಾವ (ದಿಗಂಬರ ದಾಸ್ -ದೀಪ್ತಿಮಯಿ) ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರೂ ಮತ್ತೊಂದು ಪ್ರಕರಣದಲ್ಲಿ ಛತ್ತೀಸ್‌ ಗಢ ಪೊಲೀಸರ ಬಂಧನದಲ್ಲಿದ್ದಾರೆ.

ಹೀಗಿರುವಾಗ ಒಟ್ಟು 12 ವಿಗ್ರಹಗಳು ಛತ್ತೀಸ್‌ ಗಢದ ರಾಯಪುರದಿಂದ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ speed post ಮೂಲಕ ಮಂಗಳವಾರ ಸಂಜೆ ಒರಿಸ್ಸಾದಿಂದ ಬಂದಿದೆ. ಭುವನೇಶ್ವರ ಪೋಸ್ಟ್ ಆಫೀಸಿನಿಂದ ನವೆಂಬರ್ 2ರಂದು ಇದನ್ನು ಪೋಸ್ಟ್ ಮಾಡಲಾಗಿದೆ. ಆದರೆ ಮೂಡುಬಿದಿರೆಯ ಪ್ರಾಚೀನ ಗುರು ಬಸದಿಯ ಸಿದ್ಧಾಂತ ಮಂದಿರಕ್ಕೆ ಸೇರಿದ 12 ಮೂರ್ತಿಗಳನ್ನು ಪಾರ್ಸೆಲ್ ಮಾಡಿದ್ದು ಯಾರು ಎನ್ನುವುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.

ಚಿನ್ನ, ಸ್ಫಟಿಕ, ರತ್ನ ಖಚಿತ ಇಷ್ಟೊಂದು ವಿಗ್ರಹಗಳು speed post ಮೂಲಕ ಬರಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಪಾರ್ಸೆಲ್ ಬಂದಿರುವುದನ್ನು ಒಪ್ಪಿಕೊಳ್ಳುವ ಪೊಲೀಸರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ.

ಮೂಡುಬಿದಿರೆಯ ಭಟ್ಟಾರಕ ಶ್ರೀ ಇವುಗಳನ್ನು ತಕ್ಷಣವೇ ಪರಿಶೀಲಿಸಿ ಇವೆಲ್ಲವೂ ಸಿದ್ಧಾಂತ ಮಂದಿರಕ್ಕೆ ಸಂಬಂಧಿಸಿದ್ದು ಎಂದು ಖಚಿತಪಡಿಸಿದ್ದೂ ಆಗಿದೆ. ಕಮಿಷನರ್ ಮನೀಶ್ ಕರ್ಬೇಕರ್, ತನಿಖಾಧಿಕಾರಿ ಎಸಿಪಿ ರವಿಕುಮಾರ್, ಮೂಡುಬಿದಿರೆ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ, ಪಿಎಸ್ಸೈ ರಮೇಶ ಕುಮಾರ್‌ ಸಮಕ್ಷಮ ಪರಿಶೀಲಿಸಿರುವುದಾಗಿ ಭಟ್ಟಾರಕ ಶ್ರೀ ತಿಳಿಸಿದ್ದಾರೆ.

ವಜ್ರದ ಚಂದ್ರಪ್ರಭಾ ಸ್ವಾಮಿ, ಸ್ಫಟಿಕದ ಸಿದ್ಧ ಪರಮೇಷ್ಠಿ, ಸ್ಫಟಿಕದ ಮುನಿಸುವ್ರತ ಸ್ವಾಮಿ, ಕಚ್ಚಾಪನ್ನಾ ಅರಹಂತ ಪರಮೇಷ್ಠಿ, ನೀಲರತ್ನ ಮುನಿಸುವ್ರತ, ನೀಲರತ್ನ ಅರಹಂತ, ಸ್ಫಟಿಕರತ್ನ ಅರ್ಹನಾಥ, ಗಜಮುತ್ತಿನ ಚಂದ್ರಪ್ರಭ ಸ್ವಾಮಿ, ಪಚ್ಚೆ ಪಾರ್ಶ್ವನಾಥ, ನೀಲರತ್ನ ಮಲ್ಲಿನಾಥ ಸಿದ್ಧಪರಮೇಷ್ಠಿ, ತುಂಡಾದ ಸ್ಫಟಿಕದ ಸಿದ್ಧರು, ಸ್ಫಟಿಕ ಮತ್ತು ನೀಲದ ಚೂರುಗಳು, ಬೆಳ್ಳಿಯ ಚಿಕ್ಕ ಪೀಠ ಈಗ ಪೊಲೀಸರ ವಶದಲ್ಲಿರುವ ಸೊತ್ತುಗಳಾಗಿವೆ. 3 ವಿಗ್ರಹ ಈ ಹಿಂದೆಯೇ ಲಭಿಸಿದ್ದವು. 5 ಚಿನ್ನದ ವಿಗ್ರಹಗಳನ್ನು ಕರಗಿಸಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು.

English summary
Moodabidri Jain mutt idols theft case idols sent by speed post. The 12 of the 20 idols that were stolen from the Jain temple in Moodbidri in Dakshina Kannada district on July 5 have been recovered in an strange manner. The idols sent by speed post from Odisha were received at the Mangalore city police commissioner’s office here on Tuesday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X