ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka Rains : ಕರ್ನಾಟಕದಲ್ಲಿ ಮತ್ತೆ ಮಳೆ ದುರ್ಬಲ: ನಿರಾತಂಕ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 30: ಕರ್ನಾಟಕದ ನಿರಂತರ ಸುರಿದ ಮಳೆಗೆ ಕೆರೆ, ಕಟ್ಟೆಗಳು ಒಡೆದ ಪರಿಣಾಮ ತತ್ತರಿಸಿದ್ದ ವಿವಿಧ ಜಿಲ್ಲೆಗಳಲ್ಲಿ ಜನರ ಆತಂಕ ಇದೀಗ ದೂರವಾಗಿದೆ. ರಾಜ್ಯದಲ್ಲಿ ಒಂದೇ ದಿನದ ಅಂತರದಲ್ಲಿ ಮತ್ತೆ ಮುಂಗಾರು ದುರ್ಬಲವಾಗಿದೆ.

ನಿರಂತರವಾಗಿ ಸುರಿದ ಮಳೆಯಿಂದಾಗಿ ವಿವಿಧ ಜಿಲ್ಲೆಗಳಲ್ಲಿ ಕೆರೆ ಕಟ್ಟೆಗಳು ಒಡೆದು, ರಸ್ತೆಗಳು, ಊರುಗಳು ಜಲಾವೃತವಾಗಿದ್ದವು. ಇನ್ನೇನು ಸಹಜ ಸ್ಥಿತಿಗೆ ಜೀವನ ಮರಳಿತು ಎನ್ನುವಷ್ಟರಲ್ಲಿ ಗುರುವಾರದಿಂದ ರಾಜ್ಯದಲ್ಲಿ ಮತ್ತೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಆದರೆ ಹವಾಮಾನದಲ್ಲಿ ಘಟಿಸಿದ ತುರ್ತು ಬದಲಾವಣೆಗಳಿಂದ ಒಂದೇ ದಿನದ ಅಂತರದಲ್ಲಿ ಕರ್ನಾಟಕದಾದ್ಯಂತ ಮಳೆ ದುರ್ಬಲಗೊಂಡಿದೆ.

ಶನಿವಾರದಿಂದ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಹಗುರ ಇಲ್ಲವೇ ಸಾಧಾರಣ ಮಳೆ ಆಗಲಿದೆ. ಇದರ ಹೊರತು ಯಾವುದೇ ಜಿಲ್ಲೆಗಳಲ್ಲಿ ಜೋರು ಮಳೆಯ ಮುನ್ಸೂಚನೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

Monsoon rain again weak in over the Karnataka

ಅತ್ಯಂತ ಕಡಿಮೆ ಮಳೆ ದಾಖಲು

ಕರಾವಳಿ ಮತ್ತು ಒಳನಾಡು ಜಿಲ್ಲೆಗಳು ಸೇರಿದಂತೆ ಒಟ್ಟು ಹತ್ತು ಜಿಲ್ಲೆಗಳಿಗೆ ಶುಕ್ರವಾರ ಭಾರಿ ಮಳೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿತ್ತು. ಆದರೆ ಈ ಭಾಗಗಳಲ್ಲಿ ನಿರೀಕ್ಷಿತ ಮಳೆ ಆಗಿಲ್ಲ ಎನ್ನಲಾಗಿದೆ. ಇನ್ನು ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 6ಸೆಂ.ಮೀ, ಕೊಟ್ಟೂರು 5, ಬಬಲೇಶ್ವರ, ರಾಮದುರ್ಗ, ರಾಯಚೂರಿನ ಮಾನ್ವಿ, ಸಿರಗುಪ್ಪಾದಲ್ಲಿ ತಲಾ 4ಸೆಂ.ಮೀ ಮಳೆ ಆಗಿದೆ. ಇದರ ಹೊರತು ಎಲ್ಲಿಯೂ ದಾಖಲೆಯ ಮಳೆ ಬಿದ್ದಿಲ್ಲ ಎಂದು ವರದಿ ತಿಳಿಸಿದೆ.

ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಹಗುರದಿಂದ ಸಾಧಾರಣ ಇಲ್ಲವೇ ತುಂತುರು ಮಳೆ ಆಗಲಿದೆ. ಕರಾವಳಿ ಭಾಗಕ್ಕೆ ಮತ್ತೆ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

English summary
Monsoon rain again weak in over the Karnataka Says Indian Meteorological Department (IMD).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X