ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just In: ಮಂಕಿಪಾಕ್ಸ್: ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

|
Google Oneindia Kannada News

ಬೆಂಗಳೂರು ಆಗಸ್ಟ್ 01: ಜಾಗತಿಕವಾಗಿ ಹಬ್ಬುತ್ತಿರುವ ಮಂಕಿಪಾಕ್ಸ್ ರೋಗ ಹರಡುವಿಕೆ ತಡೆಗಟ್ಟಲು ಕರ್ನಾಟದಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಬಿಎಂಪಿ ಸೇರಿದಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಿದೆ.

ಆಯಾ ಜಿಲ್ಲೆಗಳಲ್ಲಿ ಮಂಕಿಪಾಕ್ಸ ಪ್ರಕರಣ ಕುರಿತು ಸರ್ವೇಕ್ಷಣ ಮಾಡುವ ಮೂಲಕ ಮಂಕಿಪಾಕ್ಸ ರೋಗ ತಗುಲಿದೆ ಎಂದು ಗೊತ್ತಾದ ಕೂಡಲೇ ಮಾದರಿ ಸಂಗ್ರಹಿಸಿ ಐಎಚ್‌ಐಪಿ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಿ ವರದಿ ಮಾಡಬೇಕು. ಪ್ರಕರಣ ವರದಿ ಮಾಡುವ ಪತ್ರವನ್ನು ಸಂಪೂರ್ಣ ಭರ್ತಿ ಮಾಡಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಸಂಪರ್ಕಿತರ ಪತ್ತೆಗೆ ತ್ವರಿತ ಕ್ರಮ

ಸೋಂಕಿತ ಇಲ್ಲವೇ ಶಂಕಿತ ಮಂಕಿಪಾಕ್ಸ ರೋಗಿಯನ್ನು ಪ್ರತ್ಯೇಕವಾಗಿಡಲು ಸೌಲಭ್ಯ ಕಲ್ಪಿಸಬೇಕು. ಸೋಂಕಿತರೊಂದಿಗೆ ಸಂಪರ್ಕ ಹೊಂದಿದ ಎಲ್ಲರನ್ನೂ ತ್ವರಿತ ಮತ್ತು ಕಡ್ಡಾಯವಾಗಿ ಪತ್ತೆ ಮಾಡಲು ಕ್ರಮ ಕೈಗೊಳ್ಳಬೇಕು. ಸೋಂಕಿತರೊಂದಿಗೆ ನಂಟು ಹೊಂದಿದ್ದ ಸಂಪರ್ಕಿತರಲ್ಲಿ ಮಂಕಿಪಾಕ್ಸ ರೋಗದ ಲಕ್ಷಣಗಳು ಕಂಡು ಬಂದರೆ ಅಂತವರನ್ನು ಕೂಡಲೇ ಪರೀಕ್ಷೆ ಮಾಡಿ, ಮಾದರಿ ಸಂಗ್ರಹಿಸಬೇಕು. ಅವರನ್ನು 21ದಿನಗಳವರೆಗೆ ಪ್ರತ್ಯೇಕವಾಗಿಟ್ಟು ಮೇಲ್ವೀಚಾರಣೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

Monkeypox: Karnataka govt has releases new guidelines to bbmp and all DC

ಮಂಕಿಪಾಕ್ಸ ಮಾದರಿ ಪರೀಕ್ಷೆಗಳನ್ನು ನಿಗದಿತ ಪ್ರಯೋಗಶಾಲೆ (ಬಿಎಂಆರ್‌ಐ, ಬೆಂಗಳೂರು) ಇಲ್ಲಿ ಸ್ವೀಕರಿಸುವ ಮೂಲಕ ನಡೆಸಲಾಗುವುದು ಎಂದು ಆರೋಗ್ಯ ಇಲಾಯು ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. ಈ ಅಂಶಗಳನ್ನು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಬಿಬಿಎಂಪಿ ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

Monkeypox: Karnataka govt has releases new guidelines to bbmp and all DC

ಈ ಕುರಿತು ಟ್ವಿಟ್ ಮಾಡಿರುವ ಅವರು, ಮಂಕಿಪಾಕ್ಸ್ ಸೋಂಕು ಹರಡುವಿಕೆ ತಡೆಗಟ್ಟಲು ಮುಂಜಾಗ್ರತೆ ದೃಷ್ಟಿಯಿಂದ ಹೆಚ್ಚಿನ ಕಣ್ಗಾವಲು, ಸಾಂಸ್ಥಿಕ ಐಸೋಲೇಶನ್ ಗಾಗಿ ಸೂಕ್ತ ಸ್ಥಳಗಳನ್ನು ಗೊತ್ತುಪಡಿಸಬೇಕು. ಕಡ್ಡಾಯ ಸಂಪರ್ಕ ಪತ್ತೆ ಮತ್ತು ಸ್ಯಾಂಪಲ್ ಗಳ ಪರೀಕ್ಷೆ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

English summary
Karnataka government release new guidelines of Monkeypox to bbmp and all District commissioner, Health minister Dr. K Sudhakar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X