ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಸರ್ಕಾರಕ್ಕೆ ಸೋಮವಾರ ಕಡೆ ದಿನ : ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಜುಲೈ 19 : "ಕರ್ನಾಟಕ ಸರ್ಕಾರಕ್ಕೆ ಸೋಮವಾರ ಕಡೆ ದಿನ. ಬಹುಮತ ಕಳೆದುಕೊಂಡಿರುವ ಸರ್ಕಾರ ಅಂತು ಪತನವಾಗಲಿದೆ" ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶುಕ್ರವಾರ ಸ್ಪೀಕರ್ ರಮೇಶ್ ಕುಮಾರ್ ವಿಶ್ವಾಸಮತಯಾಚನೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ ಬಳಿಕ ಮಾತನಾಡಿದ ಯಡಿಯೂರಪ್ಪ, "ಸಿಎಂ ಕುಮಾರಸ್ವಾಮಿ ಸರ್ಕಾರಕ್ಕೆ ಬಹುಮತ ಇಲ್ಲ ಅಂತ ಗೊತ್ತಾದ ಮೇಲೆ ರಾಜ್ಯಪಾಲರು ಮೂರು ಭಾರಿ ಪತ್ರ ಬರೆದು ಬಹುಮತ ಸಾಬೀತು ಮಾಡಲು ಕೇಳಿದ್ದಾರೆ‌‌" ಎಂದರು.

ಕರ್ನಾಟಕ ಸಿಎಂ ಫೆವಿಕಾಲ್ ಕಂಪನಿ ಬ್ರಾಂಡ್ ಅಂಬಾಸಿಡರ್‌ಕರ್ನಾಟಕ ಸಿಎಂ ಫೆವಿಕಾಲ್ ಕಂಪನಿ ಬ್ರಾಂಡ್ ಅಂಬಾಸಿಡರ್‌

"ವಿಧಾನಸಭೆಯ ಸ್ಪೀಕರ್ ವಿನಾಕಾರಣ ಸಮಯ ವ್ಯರ್ಥ ಮಾಡಿ ಕಾಲಹರಣ ಮಾಡಿದ್ದಾರೆ‌.
ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿದ್ದೇವೆ. ಸೋಮವಾರ ಈ ಬಗ್ಗೆ ಮಂಗಳ ಹಾಡುವುದಾಗಿ ಹೇಳಿದ್ದಾರೆ" ಎಂದು ತಿಳಿಸಿದರು.

LIVE: ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ, 2 ದಿನ ಸರ್ಕಾರ ಸೇಫ್LIVE: ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ, 2 ದಿನ ಸರ್ಕಾರ ಸೇಫ್

Yeddyurappa

"ಸರ್ಕಾರಕ್ಕೆ ಬಹುಮತ ಇಲ್ಲದೇ ಇದ್ದರೂ ಬೇರೆಯವರಿಗೆ ಬಹುಮತ ಸಾಬೀತು ಪಡಿಸಲು ಬಿಡುತ್ತಿಲ್ಲ.
ದೇಶಕ್ಕೆ ಸುದ್ದಿ ತಿಳಿಯಲಿ ಅಂತ ಅಹೋರಾತ್ರಿ ಧರಣಿ ನಡೆಸಿದೆವು. ಸೋಮವಾರ ಸರ್ಕಾರ ಪತನವಾಗುವುದು ಖಚಿತ" ಎಂದು ಹೇಳಿದರು.

ಸದನದಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ ನರಿ ಕಥೆ!ಸದನದಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ ನರಿ ಕಥೆ!

ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ ಆಗಿದ್ದರಿಂದ ಬಿಜೆಪಿ ಶಾಸಕರು ವಿಧಾನಸೌಧದಿಂದ ರಮಾಡಾ ಹೋಟೆಲ್‌ಗೆ ವಾಪಸ್ ತೆರಳಿದರು. ಸೋಮವಾರದ ತನಕ ರೆಸಾರ್ಟ್‌ನಲ್ಲಿಯೇ ಶಾಸಕರು ವಾಸ್ತವ್ಯ ಹೂಡಲಿದ್ದಾರೆ.

English summary
Trust vote debate adjourned to July 22, 2019. Monday last day for Chief Minister H.D.Kumaraswamy lead Karnataka government said Opposition leader of state B.S.Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X