ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್ ನಿಂದ ಅಜರುದ್ದೀನ್ ಇನ್ನಿಂಗ್ಸ್ ಆರಂಭ?

|
Google Oneindia Kannada News

ಬೆಂಗಳೂರು, ಫೆ.7 : ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ? ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಹೌದು. ಅಜರುದ್ದೀನ್‌ ಬೀದರ್‌ ನಿಂದ ಕಣಕ್ಕಿಳಿಯಲು ನಿರ್ಧರಿಸಿದ್ದು, ಹಾಲಿ ಸಂಸದ ಧರ್ಮಸಿಂಗ್ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.

ಗುರುವಾರ ಅಜರುದ್ದೀನ್ ದೆಹಲಿ ಕರ್ನಾಟಕ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಅವರು ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಉತ್ತರ ಪ್ರದೇಶದ ಮೊರದಾಬಾದ್‌ನ ಹಾಲಿ ಸಂಸದ ಅಜರುದ್ದೀನ್‌ ಅವರು ಕ್ಷೇತ್ರ ಬದಲಾವಣೆ ಮಾಡಲು ಇಚ್ಛಿಸಿದ್ದಾರೆ ಎಂದು ತಿಳಿದುಬಂದಿದೆ.

Dharam Singh, Azharuddin

ಬೀದರ್ ಕಾಂಗ್ರೆಸ್ ನಲ್ಲಿಯೂ ಕ್ಷೇತ್ರದಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಿಗೆ ನೀಡಬೇಕು ಎಂದು ಹೈಕಮಾಂಡ್‌ ಗೆ ಒತ್ತಡ ಹಾಕುತ್ತಿದ್ದಾರೆ. ಆದ್ದರಿಂದ ಧರ್ಮಸಿಂಗ್ ಅವರಿಗೆ ಕ್ಷೇತ್ರದ ಟಿಕೆಟ್ ಕೈತಪ್ಪಲಿದ್ದು, ಅಜರುದ್ದೀನ್ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. [ಫೆ.17ಕ್ಕೆ ಕಾಂಗ್ರೆಸ್ ಪಟ್ಟಿ ಅಂತಿಮ]

ಬೀದರ್‌ ಕಾಂಗ್ರೆಸ್‌ನ ಹಾಲಿ ಸಂಸದರಿರುವ ಕ್ಷೇತ್ರ, ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ಟಿಕೆಟ್ ಖಚಿತವಾದ ಹಾಲಿ ಸಂಸದರ ಪೈಕಿ ಧರ್ಮಸಿಂಗ್ ಹೆಸರು ಸಹ ಇದೆ. ಆದರೆ, ಹೈದರಾಬಾದ್‌ ಕರ್ನಾಟಕದ ಒಂದು ಕ್ಷೇತ್ರವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಎಂಬ ಒತ್ತಡದಿಂದಾಗಿ ಅಜರುದ್ದೀನ್ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಹಬ್ಬಿವೆ. [ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ]

ಬೆಂಗಳೂರು ಸೆಂಟ್ರಲ್, ಹಾವೇರಿ ಹಾಗೂ ಬೀದರ್‌ ಕ್ಷೇತ್ರದದಲ್ಲಿ ಈ ಬಾರಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಮುಸ್ಲಿಂ ಮುಖಂಡರು ಹೈ ಕಮಾಂಡ್ ಕದ ತಟ್ಟಿದ್ದಾರೆ. ಜಾತಿ ಸಮೀಕರಣದ ಆಧಾರದ ಮೇಲೆಯೂ ಹೈದರಾಬಾದ್‌ ಕರ್ನಾಟಕದ ಭಾಗದಲ್ಲಿ ಒಂದು ಕ್ಷೇತ್ರವನ್ನು ಮುಸ್ಲಿಂ ಹಾಗೂ ಹಿಂದುಳಿದವರಿಗೆ ನೀಡಬೇಕು ಎಂದು ಕಾಂಗ್ರೆಸ್ ಸಹ ಚಿಂತನೆ ನಡೆಸಿದೆ.

ಆದರೆ, ಹಾಲಿ ಸಂಸದ ಧರ್ಮಸಿಂಗ್‌ ಅವರಿಗೆ ಟಿಕೆಟ್‌ ನೀಡದಿರಲು ಯಾವ ಕಾರಣ ನೀಡಬೇಕು ಎಂಬುದು ನಾಯಕರ ಚಿಂತೆಗೆ ಕಾರಣವಾಗಿದೆ. ಅಜರುದ್ದೀನ್ ಬೀದರ್ ಕ್ಷೇತ್ರದಿಂದ ಸ್ಪರ್ಧಿಸುತ್ತಾರೋ ಇಲ್ಲವೋ ತಿಳಿಯದು ಆದರೆ, ಈ ಸುದ್ದಿಯಿಂದ ಧರ್ಮಸಿಂಗ್ ಅವರಿಗೆ ಧರ್ಮ ಸಂಕಟ ಎದುರಾಗಿರುವುದು ಖಂಡಿತ.

English summary
Former cricketer Mohammad Azharuddin may contest for lok sabha election 2014 from Karnataka form Bidar constituency. Now Dharam Singh is MP form constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X