ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಪ್ರಮಾಣ: ರಾಜ್ಯದಲ್ಲಿ ಸಂಭ್ರಮಾಚರಣೆ ಸಿದ್ಧತೆ ಹೀಗಿದೆ

By Srinath
|
Google Oneindia Kannada News

ಮಂಡ್ಯ, ಮೇ 26: ಇಡೀ ದೇಶ ಇಂದು ನಮೋ ಜಪದಲ್ಲಿ ಮುಳುಗಿದೆ. ಸಂಜೆ ಗೋಧೂಳಿ ವೇಳೆಗೆ ಬಿಜೆಪಿಯ ನರೇಂದ್ರ ಮೋದಿ ಅವರು ದೇಶದ 15ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭಂಕ್ಕಾಗಿ ಸಕಲ ಸಿದ್ಧತೆಗಳು ಭರಿದಿಂದ ನಡೆದಿವೆ.

ಯಜ್ಞದಂತೆ ದೇಶದ ಅಭಿವೃದ್ಧಿಗೆ ಪಣತೊಟ್ಟಿರುವ ಮೋದಿ ಅವರಿಗೆ ಈ ಸಂದರ್ಭದಲ್ಲಿ ಕರ್ನಾಟಕದ ಜನತೆ 17 ಮಂದಿ ಸಂಸದರು ಕಾಣಿಕೆಯಾಗಿ ಅರ್ಪಿಸಿದ್ದಾರೆ. ಈ ಮಧ್ಯೆ ರಾಜ್ಯ ಬಿಜೆಪಿ ಕಾರ್ಯಕರ್ತರು/ಅಭಿಮಾನಿಗಳು/ಬೆಂಬಲಿಗರ ಸಂಭ್ರಮ ಮುಗಿಲುಮುಟ್ಟಿದೆ. ಅತ್ತ ಸಂಜೆ ವೇಳೆಗೆ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಜ್ಯದೆಲ್ಲೆಡೆ ಸಿಹಿ ಹಂಚಿ ಸಂಭ್ರಮಿಸಲು ಮಂದಿ ಸಜ್ಜಾಗಿದ್ದಾರೆ.

ರಾಜ್ಯದಿಂದ 17 ಮಂದಿ ಸಂದಸರನ್ನು ಆರಿಸಿಕಳುಹಿಸಿದ್ದರೂ ಮಂಡ್ಯದ ಜನತೆ ಬಿಜೆಪಿಗೆ ಠೇವಣಿ ಸಹ ಸಿಗದಂತೆ ಸೋಲಿಸಿದ್ದಾರೆ. ಆದರೇನಂತೆ ಇಂದು ಅಲ್ಲಿಯೂ ಸಂಭ್ರಮ ನೆಲೆಸಿದೆ. ಜಿಲ್ಲೆಯಾದ್ಯಂತ ಮೋದಿ ಜಪ ನಡೆದಿದೆ. ಶ್ರೀರಂಗಪಟ್ಟಣ ತಾಲೂಕು ಬಿಜೆಪಿ ಕಾರ್ಯಕರ್ತರು ಜನರಿಗೆ ಸುಮಾರು 20 ಸಾವಿರ ಲಡ್ಡುಗಳನ್ನು ಹಂಚಿ, ಸಂಭ್ರಮಿಸಲಿದ್ದಾರೆ. ಮೊದಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಲಡ್ಡು ಹಂಚಲಾಗುವುದು ಎಂದು ಬಿಜೆಪಿ ಮುಖಂಡ ಶ್ರೀಧರ್ ಹೇಳಿದ್ದಾರೆ.

modi-to-take-oath-as-pm-karnataka-bjp-gets-ready-to-celebrate-in-a-big-way

ಉಳಿದಂತೆ ರಾಜ್ಯದಲ್ಲಿ ತಾಲೂಕು ಮಟ್ಟದ ಘಟಕಗಳಲ್ಲಿ ಸಿಹಿ ಹಂಚುವ ಮೂಲಕ ಸಂಭ್ರಮಿಸಲು ನಿರ್ಧರಿಸಲಾಗಿದೆ. ಬ್ಲಾಕ್ ಘಟಕದ ಅಧ್ಯಕ್ಷರಿಗೆ ಈ ಸಂಬಂಧ ಸೂಚನೆ ನೀಡಲಾಗಿದ್ದು, ಎಲ್ಲ ಸಂಸದರು ದೆಹಲಿಯಲ್ಲಿ ಹಾಜರಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯ ಜವಾಬ್ದಾರಿಯನ್ನು ಶಾಸಕರು ಹಾಗೂ ಪಕ್ಷದ ಸ್ಥಳೀಯ ಮುಖಂಡರು ವಹಿಸಿಕೊಂಡಿದ್ದಾರೆ. ರಾಜ್ಯದ ನಾನಾ ಕಡೆಗಳಲ್ಲಿ ಮೋದಿ ಬೆಂಬಲಿಗರು ಅನ್ನದಾನ, ಸಿಹಿ ವಿತರಣೆ ಹಾಗೂ ಪಟಾಕಿ ಸಿಡಿಸುವ ಮೂಲಕ ಆಚರಿಸಲಿದ್ದಾರೆ.

ಬೆಂಗಳೂರಿನಲ್ಲಿ ವಾರ್ಡ್ ಮಟ್ಟದಲ್ಲಿ ಲಡ್ಡು ಹಂಚಲಾಗುತ್ತಿದ್ದು, ಮಾಜಿ ಸಚಿವ ವಿ ಸೋಮಣ್ಣ ಅವರು ಗೋವಿಂದರಾಜನಗರ ಕ್ಷೇತ್ರವೊಂದರಲ್ಲಿಯೇ 25 ಸಾವಿರ ಲಡ್ಡು ಹಂಚುತ್ತಿದ್ದಾರೆ. ಇನ್ನು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಅನ್ನದಾನ ನಡೆಯುತ್ತಿದೆ. ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಣೆಗೆ ರಾಜ್ಯ ಪ್ರಧಾನ ಕಚೇರಿ ಎದುರು ಬೃಹತ್ ಸ್ಕ್ರೀನ್ ಅಳವಡಿಸಲಾಗಿದೆ.

ರಾಜ್ಯದ ಹಲವಾರು ದೇವಾಲಯಗಳಲ್ಲಿ ವಿಶೇಷ ಪೂಜೆ, ಸಿಹಿ ಹಂಚಿಕೆ, ಅಲ್ಲಲ್ಲಿ ಬೈಕ್ ರ್ಯಾಲಿ, ರಕ್ತದಾನ, ಚಹಾ ವಿತರಣೆ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ನಡೆಸಲಿದ್ದಾರೆ.

ನೆಲಮಂಗಲದಲ್ಲಿ 1 ಲಕ್ಷ ಲಡ್ಡು ವಿತರಣೆ, ಯುವ ಮೋರ್ಚಾದಿಂದ ಸಂಜೆ 4ಕ್ಕೆ ಮೋದಿ ವಿಜಯ್ ಚಾಯ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮೈಸೂರು ಜಿಲ್ಲೆ ಕೆಆರ್ ಪೇಟೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ವಿದ್ಯಾರಣ್ಯಪುರದಲ್ಲಿ 1952ರಿಂದ ಪಕ್ಷಕ್ಕಾಗಿ ದುಡಿತುತ್ತಾ ಬಂದಿರುವ ಹಿರಿಯ ಚೇತನಗಳಿಗೆ ಸನ್ಮಾನ ಕಾರ್ಯಕಮವೂ ನಡೆಯಲಿದೆ.

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು, ಹುಬ್ಬಳ್ಳಿಯಲ್ಲೂ ಬೃಹತ್ ಪರದೆಯ ಮೇಲೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನೇರವಾಗಿ ಪ್ರಸಾರವಾಗಲಿದೆ.

English summary
Narendra Modi to take oath as Prime Minister - Karnataka BJP gets ready to celebrate in a big way. Party workers in the leadership of local MLAs distribute laddus to the people immediately after the oath taking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X