ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಸೋಲಿಸುವುದು ಸುಲಭದ ಮಾತಲ್ಲ: ದೇವೇಗೌಡ

|
Google Oneindia Kannada News

Recommended Video

ಮೋದಿಯನ್ನು ರಾಷ್ಟ್ರಪತಿ ಮಾಡಬಹುದಿತ್ತಲ್ಲವೇ: ಎಚ್.ಡಿ.ದೇವೇಗೌಡ | Oneindia Kannada

ಹಾಸನ, ಏ 4: ಹಾಸನದಲ್ಲಿ ಮೊಮ್ಮಗ ಮತ್ತು ಸಮ್ಮಿಶ್ರ ಸರಕಾರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಮತಯಾಚಿಸುತ್ತಾ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ್ರು, ತಮ್ಮ ಅನುಭವದ ಮಾತನ್ನು ಹೊರಹಾಕುತ್ತಾ, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ, ಎಂತೆಂತಾ ರಾಜಕೀಯ ಅನುಭವ ನನ್ನಲ್ಲಿದೆ. ಆದರೆ, ನೀವು (ಕನ್ನಡ ಮಾಧ್ಯಮ) ನಮಗೆ ಸಹಕರಿಸುತ್ತಿರುವ ರೀತಿಗೆ ನಾನು ಯಾವತ್ತೂ ಚಿರಖುಣಿಯಾಗಿರುತ್ತೇನೆ ಎಂದು ದೇವೇಗೌಡ್ರು ವ್ಯಂಗ್ಯವಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಸಕ್ತ ರಾಜಕೀಯದಲ್ಲಿ ನರೇಂದ್ರ ಮೋದಿ ವಿರುದ್ದದ ಹೋರಾಟ ಸುಲಭದ ಮಾತಲ್ಲ ಎಂದಿರುವ ದೇವೇಗೌಡ್ರು, ಬಿಜೆಪಿಯನ್ನು ಈ ಮಟ್ಟಿಗೆ ಬೆಳೆಸಿದ ಅಡ್ವಾಣಿಯವರಿಗೆ ಇನ್ನಿಲ್ಲದ ಮಾನಸಿಕ ಹಿಂಸೆಯನ್ನು ಮೋದಿ ನೀಡಿದ್ದಾರೆ, ಅವರನ್ನು ರಾಷ್ಟ್ರಪತಿ ಮಾಡಲು ಆಗುತ್ತಿರಲಿಲ್ಲವೇ ಎಂದು ಗೌಡ್ರು ಪ್ರಶ್ನಿಸಿದ್ದಾರೆ.

ಭಾರತವನ್ನು ಮೋದಿ ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ: ದೇವೇಗೌಡ ಭಾರತವನ್ನು ಮೋದಿ ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ: ದೇವೇಗೌಡ

ನನ್ನದು ಕುಟುಂಬ ರಾಜಕಾರಣ ಎಂದು ಬಿಜೆಪಿಯವರು ಲೇವಡಿ ಮಾಡುತ್ತಿದ್ದಾರೆ. ದೇಶದಲ್ಲಿ ಎಲ್ಲೂ ಇಲ್ಲದ ರಾಜಕಾರಣ ದೇವೇಗೌಡ್ರ ಕುಟುಂಬದಲ್ಲಿ ನಡೆಯುತ್ತಿದೆಯಾ ಎಂದು ಪ್ರಶ್ನಿಸಿರುವ ದೇವೇಗೌಡ್ರು, ಮೊದಲು ಬಿಜೆಪಿಯವರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಲಿ ಎನ್ನುವ ಸಲಹೆಯನ್ನು ನೀಡಿದ್ದಾರೆ.

ಪ್ರಧಾನಿಯಾಗಿ ನಾನು ಮಾಡಿರುವ ಕೆಲಸ ಯಾವುದೂ ನಿಮಗೆ ಲೆಕ್ಕಕ್ಕಿಲ್ಲ

ಪ್ರಧಾನಿಯಾಗಿ ನಾನು ಮಾಡಿರುವ ಕೆಲಸ ಯಾವುದೂ ನಿಮಗೆ ಲೆಕ್ಕಕ್ಕಿಲ್ಲ

ನಾನು ಈ ಚುನಾವಣೆ ಮುಗಿಯುವವರೆಗೆ ಏನನ್ನೂ ಮಾತನಾಡುವುದಿಲ್ಲ, ದೇಶದ ಪ್ರಧಾನಿಯಾಗಿ ನಾನು ಮಾಡಿರುವ ಕೆಲಸ ಯಾವುದೂ ನಿಮಗೆ ಲೆಕ್ಕಕ್ಕಿಲ್ಲ, ಒಂದು ಸಣ್ಣ ಡಿಬೇಟ್ ಆಗಿದ್ದನ್ನೂ, ನನ್ನ ಅರವತ್ತು ವರ್ಷದ ರಾಜಕಾರಣದಲ್ಲಿ ನೋಡಿಲ್ಲ, ನಡೀರಿ.. ಎಂದು ಕನ್ನಡ ಮಾಧ್ಯಮದವರ ವಿರುದ್ದ ದೇವೇಗೌಡ್ರು ಆಕ್ರೋಶ ವ್ಯಕ್ತ ಪಡಿಸಿ ಕೊನೆಗೆ ತಾವೇ ಹೊರನಡೆದರು.

ಬಿಜೆಪಿಯಲ್ಲಿ ಅಪ್ಪಂಗೂ ಗೌರವವಿಲ್ಲ, ಅಡ್ವಾಣಿಗೂ ಇಲ್ಲ: ಸೋನಾಕ್ಷಿ ಸಿನ್ಹಾ ಬಿಜೆಪಿಯಲ್ಲಿ ಅಪ್ಪಂಗೂ ಗೌರವವಿಲ್ಲ, ಅಡ್ವಾಣಿಗೂ ಇಲ್ಲ: ಸೋನಾಕ್ಷಿ ಸಿನ್ಹಾ

ನರೇಂದ್ರ ಮೋದಿ ವಿರುದ್ದ ಹೋರಾಡುವುದು ಸುಲಭದ ಮಾತಲ್ಲ

ನರೇಂದ್ರ ಮೋದಿ ವಿರುದ್ದ ಹೋರಾಡುವುದು ಸುಲಭದ ಮಾತಲ್ಲ

ಪ್ರೆಸ್ ಮೀಟ್ ಮೊದಲು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ದೇವೇಗೌಡ್ರು, ನಮಗೆಲ್ಲಾ ಇದು ಪರೀಕ್ಷೆಯ ಸಮಯ. ನಾವೆಲ್ಲಾ ಒಂದಾಗಬೇಕಿದೆ. ನರೇಂದ್ರ ಮೋದಿ ವಿರುದ್ದ ಹೋರಾಡುವುದು ಸುಲಭದ ಮಾತಲ್ಲ ಎನ್ನುವುದನ್ನು ನಾನೂ ಬಲ್ಲೆ ಎಂದು ಗೌಡ್ರು ಹೇಳಿದ್ದಾರೆ.

ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಅನುಮತಿಯನ್ನು ಪಡೆದಿದ್ದೇನೆ

ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಅನುಮತಿಯನ್ನು ಪಡೆದಿದ್ದೇನೆ

ನನಗೆ ವಯಸ್ಸಾಗಿದ್ದರೂ ಹೋರಾಡುತ್ತಿದ್ದೇನೆ. ಪ್ರಜ್ವಲ್ ಅವರನ್ನು ಕಣಕ್ಕಿಳಿಸುವ ಮೊದಲು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಅನುಮತಿಯನ್ನು ಪಡೆದೇ ಕಣಕ್ಕಿಳಿಸಿದ್ದು. ಮೋದಿ ಎಷ್ಟೇ ರಾಜ್ಯದಲ್ಲಿ ಪ್ರವಾಸ ಮಾಡಲಿ, ನಾನೂ ರಾಜ್ಯಾದ್ಯಂತ ತಿರುಗಿ ಪ್ರಚಾರ ಮಾಡುತ್ತೇನೆ - ಎಚ್ ಡಿ ದೇವೇಗೌಡ.

ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

ಅಡ್ವಾಣಿಗೆ ಮೋದಿ ತುಂಬಾ ಮಾನಸಿಕ ಹಿಂಸೆ ನೀಡಿದ್ದಾರೆ

ಅಡ್ವಾಣಿಗೆ ಮೋದಿ ತುಂಬಾ ಮಾನಸಿಕ ಹಿಂಸೆ ನೀಡಿದ್ದಾರೆ

ಬಿಜೆಪಿ ಇಂದು ರಾಷ್ಟ್ರೀಯ ಪಕ್ಷವಾಗಿ, ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಇದರ ಹಿಂದಿನ ಪರಿಶ್ರಮ, ಅದರ ಹಿಂದಿನ ಶಕ್ತಿಯ ಬಗ್ಗೆ ಪ್ರಧಾನಿ ಮೋದಿಗೆ ತಿಳಿದಿದೆಯೇ ಎಂದು ಪ್ರಶ್ನಿಸಿರುವ ಗೌಡ್ರು, ಅಡ್ವಾಣಿ ಈ ಬಾರಿ ಚುನಾವಣಾ ಕಣದಲ್ಲಿ ಇಲ್ಲ, ಅವರಿಗೆ ಮೋದಿ ತುಂಬಾ ಮಾನಸಿಕ ಹಿಂಸೆಯನ್ನು ನೀಡಿದ್ದಾರೆಂದು ದೇವೇಗೌಡ್ರು ಹೇಳಿದ್ದಾರೆ.

ಅಡ್ವಾಣಿ ಮೊದಲೇ ಸ್ವಯಂ ನಿವೃತ್ತಿ ಘೋಷಿಸಬೇಕಿತ್ತು: ಶಿವಸೇನಾ ಅಡ್ವಾಣಿ ಮೊದಲೇ ಸ್ವಯಂ ನಿವೃತ್ತಿ ಘೋಷಿಸಬೇಕಿತ್ತು: ಶಿವಸೇನಾ

ಅಡ್ವಾಣಿ ಜೊತೆ ಮುರಳಿ ಮನೋಹರ್ ಜೋಷಿ ಕೂಡಾ ಈ ಬಾರಿ ಸ್ಪರ್ಧಿಸುತ್ತಿಲ್ಲ

ಅಡ್ವಾಣಿ ಜೊತೆ ಮುರಳಿ ಮನೋಹರ್ ಜೋಷಿ ಕೂಡಾ ಈ ಬಾರಿ ಸ್ಪರ್ಧಿಸುತ್ತಿಲ್ಲ

ಬಿಜೆಪಿಯಲ್ಲಿ ಹಿರಿಯರಿಗೆ ಬೆಲೆಯಿಲ್ಲ, ಅಡ್ವಾಣಿ ಜೊತೆ ಮುರಳಿ ಮನೋಹರ್ ಜೋಷಿ ಕೂಡಾ ಈ ಬಾರಿ ಸ್ಪರ್ಧಿಸುತ್ತಿಲ್ಲ. ಈ ಬಾರಿ ರಾಜ್ಯದಲ್ಲಿ ಬಿಜೆಪಿಯನ್ನು ಎರಡಂಕಿ ದಾಟದಂತೆ ಹಿಡಿದಿಡಬೇಕು ಎನ್ನುವ ಗುರಿಯನ್ನು ಹಾಕಿಕೊಂಡಿದ್ದೇವೆ. ಪ್ರಯತ್ನ ನಮ್ಮದು, ದೈವೇಚ್ಚೆ ಏನಿದೆಯೋ ಅದು ಆಗಲಿ - ದೇವೇಗೌಡ.

ಬಿಜೆಪಿ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಮುರಳಿ ಮನೋಹರ್ ಜೋಷಿ ಪತ್ರಬಿಜೆಪಿ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಮುರಳಿ ಮನೋಹರ್ ಜೋಷಿ ಪತ್ರ

English summary
Prime MInsiter Narendra Modi has given mental torture to senior BJP leader LK Advani, JDS supremo Deve Gowda statement in Tumakuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X