ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡುಗೆ ಮನೆ ಪ್ರವೇಶಕ್ಕೆ ಬಿಜೆಪಿ ಮಹಿಳೆಯರು ಸನ್ನದ್ಧ

By Srinath
|
Google Oneindia Kannada News

ಹುಬ್ಬಳ್ಳಿ, ಫೆ.24- ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ 'ಚಹಾ ಮಾರಾಟಗಾರ'ರಾಗಿ ಪ್ರಚಾರದಲ್ಲಿರುವಾಗ ಪಕ್ಷವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸೀದಾ ಅಡುಗೆ ಮನೆಗೆ ಪ್ರವೇಶಿಸಲು ಸಿದ್ಧತೆ ನಡೆಸಿದೆ.

ಅಂದರೆ ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳೇ ಮತ ಹಾಕುವಂತೆ ಪಕ್ಷ ಕಾರ್ಯಕರ್ತರು ಗೃಹಿಣಿಯರ ಮತಯಾಚನೆಗೆ ಮನೆ ಮನೆಗೆ ತೆರಳುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯವು ಗೃಹಿಣಿಯರ ಮನವೊಲಿಸಲು ಹೊಸ ಯೋಜನೆ ಸಿದ್ಧಪಡಿಸಿಕೊಂಡಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ, ನಿಪ್ಪಾಣಿ ಶಾಸಕಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

modi-as-pm-candidate-karnataka-bjp-mahila-morcha-campaigns-at-kitchens
ಪ್ರಧಾನಿ ಅಭ್ಯರ್ಥಿ ಮೋದಿ ಅವರ ಪರ ಮತ ಯಾಚಿಸಿ ಹೊಸ ಕಾರ್ಯಕ್ರಮದ ಅಂಗವಾಗಿ ಎಲ್ಲ ಮನೆ/ಮನಗಳಿಗೂ ತಲುಪುತ್ತೇವೆ. ಗೃಹಿಣಿಯರ ಅನುಮತಿ ಸೀದಾ ಅವರ ಸಾಮ್ರಾಜ್ಯವಾದ ಅಡುಗೆ ಮನೆಗೆ ಪ್ರವೇಶಿಸುತ್ತೇವೆ. ಈ ನಡುವೆ ಗೃಹಿಣಿಯರ ದೈನಂದಿನ ಚಟುವಟಿಕೆಗೆ ನಾವು ಯಾವುದೇ ಅಡಚರಣೆ ಮಾಡುವುದಿಲ್ಲ. ಅವರು ಕೆಲಸ ಮಾಡುತ್ತಲೇ ಇದ್ದು, ಗುಜರಾತಿನಲ್ಲಿ ಮುಖ್ಯಮಂತ್ರಿ ಮೋದಿ ಅವರ ಸಾಧನೆಗಳನ್ನು ಪರಿಚಯಿಸುತ್ತೇವೆ.

ಮುಂದೆ, ಮೋದಿ ಅವರು ಪ್ರಧಾನಿಯಾದರೆ ದೇಶಕ್ಕೆ ಅವರು ಹೇಗೆ ಉತ್ತಮ ಆಡಳಿತ ಕೊಡಬಲ್ಲರು ಎಂಬುದರ ಮೇಲೆ ಬೆಳಕು ಚೆಲ್ಲುತ್ತೇವೆ. ಮಹಿಳಾ ಸುರಕ್ಷತೆ, ಹಣದುಬ್ಬರದ ಬಗ್ಗೆ ಅವರ ಗಮನ ಹರಿಸುತ್ತೇವೆ. ಇದೇ ವೇಳೆ ರಂಗೋಲಿ ಹಾಗೂ ಮೆಹಂದಿಯಂತಹ ಸ್ಪರ್ಧೆಗಳನ್ನು ಸಹ ಆಯೋಜಿಸುತ್ತೇವೆ ಎಂದು ಅವರು ಹೇಳಿದರು.

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಆಯಾ ಜಿಲ್ಲೆ/ ತಾಲೂಕುಗಳಲ್ಲಿ ಗುಂಪುಗಳನ್ನು ರಚಿಸುತ್ತೇವೆ. ಈ ಗುಂಪು ಪ್ರತಿ ಮನೆಗೂ ಭೇಟಿ ನೀಡಲಿದೆ ಎಂದು ಶಾಸಕಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ವಿವರಿಸಿದರು.

7 ಮಹಿಳೆಯರಿಗೆ ಬಿಜೆಪಿ ಟಿಕೆಟ್:
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 7 ಮಹಿಳೆಯರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರನ್ನು ಮನವಿ ಮಾಡಿಕೊಳ್ಳಲಾಗಿದೆ ಎಂದೂ ಶಶಿಕಲಾ ಜೊಲ್ಲೆ ಹೇಳಿದರು. ಏಳರ ಪೈಕಿ 6 ಮಹಿಳೆಯರಿಗಾದರೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಲಭಿಸುವ ನಿರೀಕ್ಷೆ ಇದೆ. ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಈಗಾಗಲೇ ಕಾರ್ಯತತ್ಪರರಾಗಿದ್ದಾರೆ ಎಂದು ಅವರು ತಿಳಿಸಿದರು.

English summary
Lok Sabha polls 2014: Narendra Modi as Prime Minister candidate. Karnataka BJP Mahila Morcha to take campaigning to kitchens. Speaking to reporters in Hubli BJP Mahila Morcha President Shashikala Anna Saheb Jolle, an MLA from Nippani, Belgaum, said the party has designed a new campaign to attract female voters in the State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X