ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಸಡಿಲಿಸಿದ ಆಯೋಗ

|
Google Oneindia Kannada News

ಬೆಂಗಳೂರು, ಮೇ 04: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಸಡಿಲಗೊಳಿಸಬೇಕೆಂಬ ಮನವಿಗೆ ಅನುಮೋದನೆ ನೀಡಿರುವುದಾಗಿ ರಾಜ್ಯ ಚುನಾವಣಾ ಮುಖ್ಯಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

ಬರ ಸೇರಿದಂತೆ ಮತ್ತಿತರೆ ಆಡಳಿತ ಸಂಬಂಧಿ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀತಿ ಸಂಹಿತೆ ಅಡ್ಡಿ ಬರುತ್ತಿರುವ ಕಾರಣ ನೀತಿ ಸಂಹಿತೆಯನ್ನು ಸಡಿಲಗೊಳಿಸಬೇಕೆಂಬ ಮನವಿಗೆ ರಾಜ್ಯ ಚುನಾವಣಾ ಆಯೋಗ ಅಸ್ತು ಎಂದಿದೆ.

ಅಮಿತ್ ಶಾ ಕೊಲೆ ಆರೋಪಿ ಹೇಳಿಕೆ: ರಾಹುಲ್ ಗಾಂಧಿಗೆ ಕ್ಲೀನ್ ಚಿಟ್ ಅಮಿತ್ ಶಾ ಕೊಲೆ ಆರೋಪಿ ಹೇಳಿಕೆ: ರಾಹುಲ್ ಗಾಂಧಿಗೆ ಕ್ಲೀನ್ ಚಿಟ್

ನೀತಿ ಸಂಹಿತೆ ಸಡಿಲವಾಗಿರುವ ಕಾರಣ ಮೂಲಸೌಕರ್ಯ, ಅಭಿವೃದ್ಧಿ, ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ಟೆಂಡರ್‌ಗಳನ್ನು ಅಂತಿಮಗೊಳಿಸಬಹುದಾಗಿದೆ.

Model code of conduct relaxation in Karnataka

ಇದರ ಜೊತೆಗೆ ವರ್ಗಾವಣೆ ಮತ್ತು ಸ್ಥಳ ನಿಯೋಜನೆಯನ್ನು ಮಾಡಬಹುದಾಗಿದೆ, ನಿಗಮ ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ಇಲಾಖೆಗಳಿಗೆ ನೇಮಕಾತಿಯನ್ನು ಸಹ ಮಾಡಬಹುದಾಗಿದೆ. ಆದರೆ ಕ್ಯಾಬಿನೆಟ್ ಸಭೆ ಸೇರುವುದು, ಹೊಸ ಯೋಜನೆಯ ಘೋಷಣೆ, ಕಾಮಗಾರಿ ಉದ್ಘಾಟನೆ ಸೇರಿದಂತೆ ಇನ್ನೂ ಕೆಲವಕ್ಕೆ ನೀತಿ ಸಂಹಿತೆ ಅಡ್ಡಿ ಬರಲಿದೆ.

ಮೋದಿ, ಶಾ ವಿರುದ್ಧ ದೂರು: ಮೇ 6ರ ಒಳಗೆ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ಸೂಚನೆಮೋದಿ, ಶಾ ವಿರುದ್ಧ ದೂರು: ಮೇ 6ರ ಒಳಗೆ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ಸೂಚನೆ

ಕರ್ನಾಟಕದಲ್ಲಿ ಮತದಾನವು ಏಪ್ರಿಲ್ 23ಕ್ಕೆ ಮುಗಿದಿದೆ, ಆದರೆ ನೀತಿ ಸಂಹಿತೆಯು ಹೊಸ ಲೋಕಸಭೆ ರಚನೆ ಆಗುವವರೆಗೂ ಮುಂದುವರೆಯಲಿದೆ.

'ಫನಿ' ಚಂಡಮಾರುತದ ಪರಿಣಾಮ: ಚುನಾವಣಾ ನೀತಿ ಸಂಹಿತೆ ವಾಪಸ್ 'ಫನಿ' ಚಂಡಮಾರುತದ ಪರಿಣಾಮ: ಚುನಾವಣಾ ನೀತಿ ಸಂಹಿತೆ ವಾಪಸ್

ಬರ ಪರಿಸ್ಥಿತಿ ಎದುರಿಸಲು ಸಭೆ ಸೇರಲು ಚುನಾವಣಾ ನೀತಿ ಸಂಹಿತೆ ಅಡ್ಡಿ ಆಗುತ್ತಿದೆ ಎಂದು ನಿನ್ನೆಯಷ್ಟೆ ಪರಮೇಶ್ವರ್ ಅವರು ಅವಲತ್ತುಕೊಂಡಿದ್ದರು, ನಿನ್ನೆಯೇ ಸಂಜೀವ್ ಕುಮಾರ್ ಅವರು ಚುನಾವಣಾ ನೀತಿ ಸಂಹಿತೆಯನ್ನು ಸಡಿಸಿಲಿದ್ದಾರೆ.

English summary
Karnataka election commission gave relaxation in model code of conduct. code of conduct will be till new lok sabha formation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X