ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರ್ಗಿ ಹತ್ಯೆ: ಗೌರಿ ಕೊಲೆಯ ಇಬ್ಬರು ಆರೋಪಿಗಳು ಸಿಐಡಿ ವಶಕ್ಕೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14: ವಿಚಾರವಾದಿ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣದ ಮೂರು ವರ್ಷಗಳ ಬಳಿಕ ಕೊನೆಗೂ ತಿರುವು ಸಿಕ್ಕಿದೆ.

ಕಲಬುರ್ಗಿ ಅವರ ಹತ್ಯೆಯ ಆರೋಪಿಗಳ ಬಗ್ಗೆ ಸುಳಿವು ದೊರಕಿದ್ದು, ಅವರಲ್ಲಿ ಇಬ್ಬರು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ನೆರವಾದವರೇ ಎಂಬುದು ತಿಳಿದುಬಂದಿದೆ.

ಗೌರಿ ಹತ್ಯೆಗೆ ವರ್ಷ: ತನಿಖೆಯಲ್ಲಿ ಇಲ್ಲಿವರೆಗೆ ನಡೆದಿರುವುದೇನು?ಗೌರಿ ಹತ್ಯೆಗೆ ವರ್ಷ: ತನಿಖೆಯಲ್ಲಿ ಇಲ್ಲಿವರೆಗೆ ನಡೆದಿರುವುದೇನು?

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿರುವ ಆರೋಪಿಗಳ ಪೈಕಿ ಗಣೇಶ್ ಮಿಸ್ಕಿನ್ ಮತ್ತು ಅಮಿತ್ ಬದ್ದಿಯನ್ನು ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ವಶಕ್ಕೆ ತೆಗೆದುಕೊಂಡಿದೆ.

mm kalburgi murder case: cid enquiry gauri murder accuses ganesh miskin and amit baddi

ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ವೇಳೆ ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ ಮತ್ತು ಅಮೋಲ್ ಕಾಳೆ ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ಸುಳಿವು ನೀಡಿದ್ದರು.

ಗೌರಿ ಹತ್ಯೆಗೆ ವರ್ಷ, ಕಲ್ಬುರ್ಗಿ ಕೊಲೆಗೆ ಮೂರು ವರ್ಷ: ಮುಂದೇನು? ಗೌರಿ ಹತ್ಯೆಗೆ ವರ್ಷ, ಕಲ್ಬುರ್ಗಿ ಕೊಲೆಗೆ ಮೂರು ವರ್ಷ: ಮುಂದೇನು?

ಗೌರಿ ಮತ್ತು ಕಲಬುರ್ಗಿ ಅವರ ಹತ್ಯೆಗೆ ಬಳಸಿದ ಗನ್ ಒಂದೇ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ತಿಳಿಸಿತ್ತು.

ಗೌರಿ ಹತ್ಯೆ ಪ್ರಕರಣ ಮತ್ತೊಬ್ಬ ಪ್ರಮುಖ ಆರೋಪಿ ಎಸ್‌ಐಟಿ ವಶಕ್ಕೆಗೌರಿ ಹತ್ಯೆ ಪ್ರಕರಣ ಮತ್ತೊಬ್ಬ ಪ್ರಮುಖ ಆರೋಪಿ ಎಸ್‌ಐಟಿ ವಶಕ್ಕೆ

ಗೌರಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಮಿಸ್ಕಿನ್ ಮತ್ತು ಬದ್ದಿ ಇಬ್ಬರೂ ಕಲಬುರ್ಗಿ ಅವರ ಹತ್ಯೆಗೆ ಕೂಡ ನೆರವು ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದರಿಂದ ಸಿಐಡಿ, ಅವರನ್ನು ವಿಚಾರಣೆಗೆ ಒಳಪಡಿಸಲು ಹುಬ್ಬಳ್ಳಿ ನ್ಯಾಯಾಲಯಕ್ಕೆ ಬಾಡಿ ವಾರೆಂಟ್ ಸಲ್ಲಿಸಿತ್ತು.

ಈ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಸಿಐಡಿ ಸೆ.15ರವರೆಗೂ ಅವರನ್ನು ವಿಚಾರಣೆಗೆ ಒಳಪಡಿಸಲಿದೆ.

English summary
CID to question 2 accused of MM Kalburgi murder case, Ganesh Miskin and Amit Baddi, who were in the custudy of SIT in Gauri Lankesh murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X