ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ನಿಷ್ಠಾವಂತ ಟಿಎ ಶರವಣಗೆ ಕ್ಯಾಬಿನೆಟ್ ದರ್ಜೆ ಹುದ್ದೆ

|
Google Oneindia Kannada News

Recommended Video

ಶರವಣಗೆ ದೇವೇಗೌಡ್ರು, ಕುಮಾರಣ್ಣ ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತಾ..? | Oneindia Kannada

ಬೆಂಗಳೂರು, ಜೂನ್ 04: ದೇವೇಗೌಡರ ಮನೆ ಮಗನಂತಿರುವ ಉದ್ಯಮಿ, ಎಂಎಲ್ಸಿ ಟಿಎ ಶರವಣ ಅವರು ತಾವೂ ಕೂಡಾ ಸಚಿವರಾಗಲು ಸಿದ್ಧ ಎಂದು ಘೋಷಿಸಿ ಸರಿ ಸುಮಾರು ಒಂದು ವರ್ಷದ ಬಳಿಕ ಕೊನೆಗೂ ಕ್ಯಾಬಿನೆಟ್ ದರ್ಜೆ ಸ್ಥಾನಮಾನಯುಳ್ಳ ಹುದ್ದೆ ಸಿಕ್ಕಿದೆ.

ಜೆಡಿಎಸ್ ಮುಖಂಡ, ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಕರ್ನಾಟಕ ಸರ್ಕಾರದಿಂದ ಸೋಮವಾರ(ಜೂನ್ 03)ದಂದು ಆದೇಶ ಹೊರಡಿಸಲಾಗಿದೆ.

ಕುಮಾರಸ್ವಾಮಿ-ವಿಶ್ವನಾಥ್ ಭೇಟಿ: ರಾಜೀನಾಮೆ ಕುರಿತು ಚರ್ಚೆ?ಕುಮಾರಸ್ವಾಮಿ-ವಿಶ್ವನಾಥ್ ಭೇಟಿ: ರಾಜೀನಾಮೆ ಕುರಿತು ಚರ್ಚೆ?

ಶರವಣ ಅವರನ್ನು ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಆರ್ಯವೈಶ್ಯ ಸಮುದಾಯದ ಅಭಿವೃದ್ಧಿಗೆ ಬೇಕಾದ ರೂಪುರೇಷೆ ನಿರ್ಮಿಸುವುದು, ಶ್ರಮಿಸುವುದು ಈ ನಿಗಮದ ಉದ್ದೇಶ.

ಮಂಡ್ಯ ಚುನಾವಣೆ ಸೋತ ನಿಖಿಲ್‌ಗೆ ಕುಮಾರಸ್ವಾಮಿಯಿಂದ ಉಡುಗೊರೆ!ಮಂಡ್ಯ ಚುನಾವಣೆ ಸೋತ ನಿಖಿಲ್‌ಗೆ ಕುಮಾರಸ್ವಾಮಿಯಿಂದ ಉಡುಗೊರೆ!

ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಂಗಳವಾರ(ಜೂನ್05) ರಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ನಿವಾಸದಲ್ಲಿ ಜೆಡಿಎಸ್ ಶಾಸಕರುಗಳ ಸಭೆ ನಡೆಯಲಿದ್ದು, ಮಹತ್ವದ ಮಾತುಕತೆ ನಡೆಯಲಿದೆ.

'ಅಪ್ಪಾಜಿ ಕ್ಯಾಂಟೀನ್' ಖ್ಯಾತಿಯ ಶರವಣ

'ಅಪ್ಪಾಜಿ ಕ್ಯಾಂಟೀನ್' ಖ್ಯಾತಿಯ ಶರವಣ

ಜೆಡಿಎಸ್ ವರಿಷ್ಠ ದೇವೇಗೌಡರ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ 'ಅಪ್ಪಾಜಿ ಕ್ಯಾಂಟೀನ್' ಯಶಸ್ಸಿನ ಬಳಿಕ ಶರವಣ ಅವರತ್ತ ಎಲ್ಲರೂ ತಿರುಗಿ ನೋಡುವಂತಾಗಿದೆ. ಈ ಕ್ಯಾಂಟೀನ್ ಏನಿದ್ದರೂ ಚುನಾವಣೆ ತನಕ ನಂತರ ಬಂದ್ ಆಗಲಿದೆ ಎಂದು ಆಡಿಕೊಂಡು ನಕ್ಕವರು ಮೂಗಿನ ಮೇಲೆ ಬೆರಳಿಡುವಂತೆ ಶರವಣ ಅವರು ತಮ್ಮ ಜನಸೇವೆ ಮುಂದುವರೆಸಿದ್ದಾರೆ.

ಕಷ್ಟದಲ್ಲಿ ಬೆಳೆದು ಎಂಎಲ್ಸಿ, ನಿಗಮ ಮಂಡಳಿ ಅಧ್ಯಕ್ಷರಾದರು

ಕಷ್ಟದಲ್ಲಿ ಬೆಳೆದು ಎಂಎಲ್ಸಿ, ನಿಗಮ ಮಂಡಳಿ ಅಧ್ಯಕ್ಷರಾದರು

ಚಿಕ್ಕಂದಿನಲ್ಲಿ ಉತ್ತಮವಾಗಿ ಓದುತ್ತಿದ್ದ ಶರವಣ ಅವರಿಗೆ ನಂತರ ಕಾರಣಾಂತರದಿಂದ ಓದು ಮುಂದುವರೆಸಲಾಗಲಿಲ್ಲ. ಸೇಲ್ಸ್ ಮ್ಯಾನೇಜರ್ ಆಗಿ ವೃತ್ತಿ ಆರಂಭಿಸಿದ ಶರವಣ, ಈಗ ಚಿನ್ನದ ವ್ಯಾಪಾರಿ, ಎಂಎಲ್ಸಿಯಾಗಿ ಬೆಳೆದಿದ್ದಾರೆ. ಆದರೆ, ಬೆಳೆದು ಬಂದ ಹಾದಿಯನ್ನು ಮರೆತ್ತಿಲ್ಲ.

ಗಳಿಕೆಯ ಶೇ 20ರಷ್ಟು ಧಾನ ಧರ್ಮಕ್ಕೆ ಮೀಸಲಿಟ್ಟಿದ್ದಾರೆ

ಗಳಿಕೆಯ ಶೇ 20ರಷ್ಟು ಧಾನ ಧರ್ಮಕ್ಕೆ ಮೀಸಲಿಟ್ಟಿದ್ದಾರೆ

'ಬಡತನನಾ ಅವಮಾನ ಮಾಡಬೇಡಿ, ಅನುಮಾನ ಪಡಬೇಡಿ. ಅಗತ್ಯವಿರುವವರಿಗೆ ಯೋಚಿಸದೆ ನೀಡಿ' ಎಂಬ ಉದ್ದೇಶದಿಂದ ಇಂದಿಗೂ ಬಡ ಮಕ್ಕಳ ಓದಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದ್ದಾರೆ. ತಮ್ಮ ಗಳಿಕೆಯ ಶೇ 20ರಷ್ಟು ಧಾನ ಧರ್ಮಕ್ಕೆ ಮೀಸಲಿಟ್ಟಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗೆ ಮುಂದಾದ ಜೆಡಿಎಸ್

ಸಚಿವ ಸಂಪುಟ ವಿಸ್ತರಣೆಗೆ ಮುಂದಾದ ಜೆಡಿಎಸ್

ಪಕ್ಷೇತರ ಶಾಸಕರುಗಳಾದ ಆರ್. ಶಂಕರ್ ಹಾಗೂ ನಾಗೇಶ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದ್ದು, ಇವರ ಜೊತೆಗೆ ಅತೃಪ್ತರ ನೇತೃತ್ವ ವಹಿಸಿರುವ ರಮೇಶ್ ಜಾರಕಿಹೊಳಿ ಅವರಿಗೂ ಸ್ಥಾನ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.

English summary
JDS MLA TA Sharavana finally gets cabinet grade post. He is appointed as Arya Vaishya corporation chairman by JDS-Congress government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X