ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bhavani Revanna : ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್

ಹಾಸನದಲ್ಲಿ ಭವಾನಿ ರೇವಣ್ಣ ಅಭ್ಯರ್ಥಿಯಾದ್ರೆ ಗೆಲುವು ಖಚಿತ, ಬರೆದು ಕೊಡುತ್ತೇನೆ ಎಂದು ಕುಮಾರಸ್ವಾಮಿ ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂಬ ಹೇಳಿಕೆಗೆ ತಿರುಗೇಟು ಸೂರಜ್ ರೇವಣ್ಣ ತಿರುಗೇಟು ನೀಡಿದ್ದಾರೆ.

|
Google Oneindia Kannada News

ಹಾಸನ, ಜನವರಿ28: ಹಾಸನದಿಂದ ಆರು ರಿಂದ ಏಳು ಶಾಸಕರನ್ನು ರೇವಣ್ಣ ಅವರು ಆಯ್ಕೆ ಮಾಡಿ ಕಳುಹಿಸಿದ್ದಾರೆ, ಹಾಸನವನ್ನು ರೇವಣ್ಣ ಅವರು ತಿಳಿದಿರುವಷ್ಟು ಬೇರೆ ಯಾರಿಗೂ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಈ ಕುರಿತ ಹಾಸನದಲ್ಲಿ ಮಾತನಾಡಿದ ಸೂರಜ್ ರೇವಣ್ಣ ತಾಯಿ ಭಾವನಿ ರೇವಣ್ಣ ನವರ ಪರವಾಗಿ ಬ್ಯಾಟೀಂಗ್ ಬೀಸಿದ್ದಾರೆ. ಹಾಸನದಲ್ಲಿ ಬೇರೆಯವರನ್ನ ಅಭ್ಯರ್ಥಿ ಮಾಡುವುದನ್ನ ಬಿಡಿ. ಭವಾನಿ ರೇವಣ್ಣ ಅಭ್ಯರ್ಥಿಯಾದ್ರೆ ಗೆಲುವು ಖಚಿತ . ಬರೆದು ಕೊಡುತ್ತೇನೆ ಎಂದು ಕುಮಾರಸ್ವಾಮಿ ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಭವಾನಿ ರೇವಣ್ಣ ಹಾಸನದಲ್ಲಿ ಸ್ಪರ್ಧೆಯ ಆಸೆಗೆ ಹೆಚ್.ಡಿ.ಕುಮಾರಸ್ವಾಮಿ ತಣ್ಣೀರು.! ಭವಾನಿ ರೇವಣ್ಣರವರ ಮುಂದಿನ ನಡೆ ಏನು..? ಭವಾನಿ ರೇವಣ್ಣ ಹಾಸನದಲ್ಲಿ ಸ್ಪರ್ಧೆಯ ಆಸೆಗೆ ಹೆಚ್.ಡಿ.ಕುಮಾರಸ್ವಾಮಿ ತಣ್ಣೀರು.! ಭವಾನಿ ರೇವಣ್ಣರವರ ಮುಂದಿನ ನಡೆ ಏನು..?

ಹಾಸನ ವಿಚಾರದಲ್ಲಿ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಕಳೆದ15 ವರ್ಷದಿಂದ ರೇವಣ್ಣ ಹಾಸನ ನಿಭಾಯಿಸುತ್ತಿದ್ದಾರೆ. 2018ರಲ್ಲಿ ಹಾಸನ ಕ್ಷೇತ್ರವನ್ನ ಜೆಡಿಎಸ್ ಕಳೆದುಕೊಂಡಿದೆ. 2023ರಲ್ಲಿ ಹಾಸನದಲ್ಲಿ ಜೆಡಿಎಸ್ ಮರುಜನ್ಮ ಪಡೆಯಬೇಕು. ಹಾಸನದಲ್ಲಿ 15 ವರ್ಷದಿಂದ ಸತತವಾಗಿ ಗೆಲ್ಲಿಸಿದ್ದು ರೇವಣ್ಣ. ರೇವಣ್ಣರವರ ಸ್ವಂತ ಪ್ರಯತ್ನದಿಂದ ಹಾಸನದಲ್ಲಿ 7 ಸೀಟ್ ಗೆದ್ದಿದ್ದೇವೆ. ಹೀಗಾಗಿ ಹಾಸನ ರಾಜಕಾರಣವನ್ನ ಹೆಚ್.ಡಿ ರೇವಣ್ಣ ಅವರು ನೋಡಿಕೊಳ್ಳುತ್ತಾರೆ. ಹಾಸನವನ್ನ ರೇವಣ್ಣ ಅವರು ಅರಿತಷ್ಟು ಯಾರು ಅರಿತಿಲ್ಲ. ಆರರಿಂದ ಏಳು ಶಾಸಕರನ್ನ ಆಯ್ಕೆ ಮಾಡಿ ಕಳಿಸಿದ್ದಾರೆ. ರೇವಣ್ಣ ಬಿಟ್ಟರೇ ನಿರ್ಧರಿಸುವ ಅಧಿಕಾರ ಇನ್ಯಾರಿಗೂ ಇಲ್ಲ ಎಂದಿದ್ದಾರೆ.

MLC Suraj Revanna Bats For His Mother Bhavani Over Ticket From Hassan Constituency

ಮೊದಲಿನಿಂದಲೂ ನಮ್ಮ ತಾತ (ಎಚ್​.ಡಿ.ದೇವೇಗೌಡ) ಈ ಜಿಲ್ಲೆಯ ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು. ಈಗ ನನ್ನ ಪರಿಸ್ಥಿತಿ ತಗೊಳಿ. ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೆ ಎಂಬ ಮಾತುಗಳಿದ್ದವು. ಆದರೆ ದೇವೇಗೌಡರು ಸೂರಜ್‌ ರೇವಣ್ಣ ಅಭ್ಯರ್ಥಿಯಾಗಬೇಕು ಎಂದು ತೀರ್ಮಾನಿಸಿದರು ಎಂದು ಸೂರಜ್ ರೇವಣ್ಣ ಹೇಳಿದರು.

ಭವಾನಿ ರೇವಣ್ಣ ಹಾಸನಕ್ಕೆ ಅನಿವಾರ್ಯ ಅಲ್ಲಾ ಸೂಕ್ತ ಎಂದು ಹೇಳಲು ಭಯಸುತ್ತೇನೆ. ನಾನು ರಾಜಕಾರಣದಲ್ಲಿ ಕಿರಿಯ ವಯಸ್ಸಿನವನು, ಒಂದು ವರ್ಷದಿಂದ ಎಂಎಲ್‌ಸಿ ಆಗಿದ್ದೀನಿ. ನಾನು ನೂಡೆಲ್ ಕ್ಷೇತ್ರ ತಗೊಂಡು ಪ್ರತಿಯೊಂದು ಕಾರ್ಯಕ್ರಮಗಳಿಗೂ ಅಟೆಂಡ್ ಮಾಡಿ, ಜನರ ಮಿಡಿತವನ್ನು ನೋಡ್ತಿದ್ದೀನಿ. ನಮ್ಮ ತಾಯಿ ಅಭ್ಯರ್ಥಿ ಆಗಬೇಕು ಅನ್ನುವ ಉದ್ದೇಶ ಅಲ್ಲ, ನಾವು ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ. ಪಕ್ಷವನ್ನು ಮತ್ತೆ ಸಂಘಟನೆ ಮಾಡ ಬೇಕಿದೆ. 2024 ಕ್ಕೆ ಲೋಕಸಭಾ ಚುನಾವಣೆ ಬರ್ತಿದೆ. ನಾವು ಜಿಲ್ಲೆಯಲ್ಲಿ ಪಕ್ಷವನ್ನು ಹೆಚ್ಚಿನ ರೀತಿ ಸಂಘಟನೆ ಮಾಡಬೇಕಂದ್ರೆ ಇದೊಂದು ಬುನಾದಿ ಎಂದು ಹೇಳಿದರು.

English summary
karnataka Assembly elections 2023; If Bhavani Revanna is the candidate in Hassan, victory is sure said suraj revanna
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X