ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಬ್ಲೂ ಫಿಲ್ಮ್ ನೋಡಿಲ್ಲ, ಅವುಗಳನ್ನು ಡಿಲೀಟ್ ಮಾಡುತ್ತಿದ್ದೆ!

|
Google Oneindia Kannada News

ಬೆಂಗಳೂರು, ಜ. 29: ರಾಜ್ಯ ವಿಧಾನ ಪರಿಷತ್ ಕಲಾಪದಲ್ಲಿ ಮತ್ತೊಂದು ಮುಜುಗುರವನ್ನುಂಟು ಮಾಡುವ ಘಟನೆ ನಡೆದಿದೆ. ಕೆಲ ದಿನಗಳ ಹಿಂದಷ್ಟೆ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನದಲ್ಲಿ ಪರಿಷತ್ ಕಲಾಪದಲ್ಲಿ ಹೈಡ್ರಾಮಾ ನಡೆದಿತ್ತು. ಅದಾದ ಬಳಿಕ ಮನನೊಂದು ಉಪ ಸಭಾಪತಿಯಾಗಿದ್ದ ಎಸ್.ಎಲ್. ಧರ್ಮೇಗೌಡ ಅವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಅಹಿತಕರ ಘಟನೆ ಜನರ ಮನದಿಂದ ಮಾಸುವ ಮುನ್ನ ಮತ್ತೊಂದು ಮುಜುಗುರದ ಸನ್ನಿವೇಶ ಎದುರಾಗಿದೆ.

ನಿನ್ನೆ (ಜ.28) ರಾಜ್ಯಪಾಲ ವಜೂಬಾಯಿ ವಾಲಾ ಅವರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಇಂದು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸೂಚಿಸುವುದರ ಮೇಲೆ ಗಂಭೀರ ಚರ್ಚೆ ನಡೆದಾಗ ಈ ಮುಜುಗುರದ ಪ್ರಕಣ ನಡೆದಿದೆ. ವಿಧಾನ ಪರಿಷತ್ ಹಿರಿಯ ಸದಸ್ಯರೊಬ್ಬರು ನೀಲಿ ಚಿತ್ರ ವೀಕ್ಷಣೆ ಮಾಡುವ ಮೂಲಕ ಇಡೀ ರಾಜ್ಯಕ್ಕೆ ಮುಜುಗುರವನ್ನುಂಟು ಮಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಅವರು ಪರಿಷತ್ ಕಲಾಪದಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದಾಗಿ ನೀಲಿ ಚಿತ್ರ ನೋಡಿದ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಕನ್ನಡ ಸುದ್ದಿವಾಹಿನಿ ವಿಡಿಯೋ ತಣುಕುಗಳನ್ನು ಪ್ರಸಾರ ಮಾಡಿದ್ದು, ಅದಕ್ಕೆ ಶಾಸಕ ಪ್ರಕಾಶ್ ರಾಠೋಡ್ ಅವರು ಸ್ಪಷ್ಟನೆ ನೀಡಿದ್ದಾರೆ.

ನೀಲಿ ಚಿತ್ರ ವೀಕ್ಷಣೆ

ನೀಲಿ ಚಿತ್ರ ವೀಕ್ಷಣೆ

ವಿಧಾನಸಭೆಯ ಬಳಿಕ ಇದೀಗ ವಿಧಾನ ಪರಿಷತ್‌ ಕಲಾಪದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ ಮುಜುಗುರದ ಪ್ರಸಂಗ ನಡೆದಿದೆ. ನೀಲಿ ಚಿತ್ರ ವೀಕ್ಷಣೆ ಮಾಡಿರುವ ಆರೋಪ ಎದುರಿಸುತ್ತಿರುವ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಠೊಡ್ ಅವರು, ವಿಧಾನಸೌಧದಲ್ಲಿ ಆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಸದನದಲ್ಲಿ ನಾನು ಯಾವುದೇ ಬ್ಲೂಫಿಲ್ಮ್‌ ನೋಡಲಿಲ್ಲ. ಮೊಬೈಲ್‌ನಲ್ಲಿ ಕೆಲವು ಮೆಸೇಜ್‌ಗಳು ಹೆಚ್ಚಾಗಿದ್ದವು. ಅವುಗಳನ್ನು ಡಿಲೀಟ್ ಮಾಡುತ್ತಿದ್ದೆ. ಬ್ಲೂಫಿಲ್ಮ್‌ ನೋಡುವಂತಹ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ಪ್ರಕಾಶ್ ರಾಠೋಡ್ ಅವರು ಹೇಳಿಕೆ ನೀಡಿದ್ದಾರೆ.

ಡಿಲೀಟ್ ಮಾಡಿದೆ, ನೋಡಲಿಲ್ಲ

ಡಿಲೀಟ್ ಮಾಡಿದೆ, ನೋಡಲಿಲ್ಲ

ನಾನು ಡಿಲೀಟ್ ಮಾಡುತ್ತಿದ್ದಾಗ ಕೆಲವೊಂದು ಅಂತಹ ಫೋಟೋ, ದೃಶ್ಯ ಬಂದಿರಬಹುದು. ಆದರೆ, ನಾನು ಅಂತಹ ವಿಡಿಯೋವನ್ನು ನೋಡಿಲ್ಲ. ಮೊಬೈಲ್‌ನಲ್ಲಿ ಅವೆಲ್ಲವನ್ನೂ ಡಿಲೀಟ್ ಮಾಡುತ್ತಿದ್ದೆ. ದಯಮಾಡಿ ಯಾರೂ ತಪ್ಪು ಮಾಹಿತಿ ಪ್ರಸಾರ ಮಾಡಬಾರದು, ತಪ್ಪು ಮಾಹಿತಿ ಕೊಡಬಾರದು. ನಾನು ಯಾವುದೇ ಚಿತ್ರವನ್ನು ನೋಡಿಲ್ಲ. ದಿನ ನಿತ್ಯ ಸಾವಿರಾರು ಮೆಸೇಜ್‌ಗಳು ಬರುತ್ತವೆ. ನನ್ನ ಮೊಬೈಲ್‌ನಲ್ಲಿ 15 ಸಾವಿರ ಮೆಸೇಜ್‌ಳಿದ್ದವು. ಅವುಗಳನ್ನು ಡಿಲೀಟ್ ಮಾಡುತ್ತಿದ್ದೆ ಎಂದು ಪ್ರಕಾಶ್ ರಾಠೋಡ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.


ಸ್ಟೋರೇಜ್ ಹೆಚ್ಚಿಯಾಗಿದೆ. ಹೀಗಾಗಿ ಸಾಮಾನ್ಯವಾಗಿ ವಿಡಿಯೋಗಳು ಬಂದಿವೆ. ನಾನು ಅವುಗಳನ್ನಷ್ಟೇ ಡಿಲೀಟ್ ಮಾಡುತ್ತಿದ್ದೆ. ನಾನು ಡಿಲೀಟ್ ಮಾಡುವಾಗ ನೋಡುವಾಗ ಅಶ್ಲೀಲ ವಿಡಿಯೋ ನೋಡಲೇ ಇಲ್ಲ ಎಂದು ಪ್ರಕಾಶ್ ರಾಥೋಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ನೀಲಿ ಚಿತ್ರ ವೀಕ್ಷಣೆ

ವಿಧಾನಸಭೆಯಲ್ಲಿ ನೀಲಿ ಚಿತ್ರ ವೀಕ್ಷಣೆ

2012ರಲ್ಲಿ ಬಿಜೆಪಿ ಸರ್ಕಾರದ ಆಡಳಿತವಿದ್ದಾಗ ವಿಧಾನಸಭೆಯಲ್ಲಿ ಮೂವರು ಸಚಿವರು ಬ್ಲ್ಯೂಫಿಲ್ಮ್ ನೋಡಿದ ಆರೋಪ ಎದುರಾಗಿತ್ತು. 2012ರ ಫೆಬ್ರುವರಿ 7 ರಂದು ವಿಧಾನಸಭೆಯಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿ ಮೇಲೆ ಗಂಭೀರ ಚರ್ಚೆ ನಡೆದಿತ್ತು. ಆಗ ಸಚಿವರಾಗಿದ್ದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಹಾಗೂ ಜೆ. ಕೃಷ್ಣ ಪಾಲೇಮಾರ್ ಅವರು ನೀಲಿ ಚಿತ್ರವೀಕ್ಷಣೆ ಮಾಡಿದ ಆರೋಪ ಎದುರಾಗಿತ್ತು. ಬಳಿಕ ಮೂವರು ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ದರು.

ಮತ್ತೊಂದು ಅಹಿತಕರ ಘಟನೆ

ಮತ್ತೊಂದು ಅಹಿತಕರ ಘಟನೆ

ಕೆಲ ದಿನಗಳ ಹಿಂದೆ ಜನವರಿ 15 ರಂದು ವಿಶೇಷ ಅಧಿವೇಶನ ಕರೆಯಲಾಗಿತ್ತು. ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ತೀರ್ಮಾನ ಮಾಡಿ ಅವಿಶ್ವಾಸ ಗೊತ್ತುವಳಿ ಕೊಟ್ಟಿತ್ತು. ಆದರೆ ಅದು ಕ್ರಮಬದ್ಧವಾಗಿಲ್ಲ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ತಿರಸ್ಕರಿಸಿದ್ದರು. ಅಂದು ವಿಧಾನ ಪರಿಷತ್‌ನಲ್ಲಿ ನಡೆದಿದ್ದ ಅಹಿತಕರ ಘಟನೆಯಿಂದ ಮನನೊಂದು ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ದುರ್ಘಟನೆ ಜನಮನದಿಂದ ಮಾಸುವ ಮುನ್ನವೇ ಮತ್ತೊಂದು ಅಹಿತಕರ ಘಟನೆ ಪರಿಷತ್‌ನಲ್ಲಿ ನಡೆದಿದೆ.

ಹಿಂದೆಲ್ಲ ವಿಧಾನ ಪರಿಷತ್ ಎಂದರೆ ಅದಕ್ಕೊಂದು ದೊಡ್ಡ ಘನತೆಯಿತ್ತು. ಆದರೆ ಇದೀಗ ಜಾಣರ ಮನೆಯೀಗ ಕೋಣರ ಮನೆಯಾಗಿದೆ ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ್ ಅವರು ಒನ್‌ಇಂಡಿಯಾ ಜೊತೆಗೆ ಮಾತನಾಡಿ ಆಗ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

English summary
Congress MLC Prakash Rathod reaction to reports of him watching obscene video at karnataka legislative council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X