ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್ ಫೈಟ್; ಪ್ರಕಾಶ್ ಹುಕ್ಕೇರಿ ಜಯ

|
Google Oneindia Kannada News

ಬೆಳಗಾವಿ, ಜೂನ್ 15: ವಾಯುವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ವಿರುದ್ಧ 5091 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಪ್ರಕಾಶ್‌ ಹುಕ್ಕೇರಿ 11452 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್‌ಗೆ 6361 ಮತಗಳನ್ನು ಪಡೆದುಕೊಂಡಿದ್ದಾರೆ. ಹುಕ್ಕೇರಿ ಮೊದಲ ಸುತ್ತಿನಲ್ಲಿ 1692 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. 2ನೇ ಸುತ್ತಿನಲ್ಲಿ 3400 ಮತಗಳನ್ನು ಪಡೆದಿದ್ದರು. ಈ ಕ್ಷೇತ್ರದಲ್ಲಿ ಹಿಂದೆ ಎರಡು ಬಾರಿ ಗೆಲುವು ಸಾಧಿಸಿದ್ದ ಬಿಜೆಪಿಯ ಅರುಣ್‌ ಶಹಾಪುರ ಅವರನ್ನು ಶಿಕ್ಷಕರು ಈ ಬಾರಿ ಕೈಹಿಡಿದಿಲ್ಲ.

Breaking: ವಿಧಾನ ಪರಿಷತ್‌: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿಗೆ 8ನೇ ಬಾರಿ ಜಯ Breaking: ವಿಧಾನ ಪರಿಷತ್‌: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿಗೆ 8ನೇ ಬಾರಿ ಜಯ

ವಿಧಾನ ಪರಿಷತ್‌ನ 4 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 2 ಶಿಕ್ಷಕರ ಕ್ಷೇತ್ರ ಮತ್ತು 2 ಪದವೀದರರ ಕ್ಷೇತ್ರಗಳಿಗೆ ಜೂನ್‌ 13ರಂದು ಚುನಾವಣೆ ನಡೆದಿತ್ತು. ಬುಧವಾರ ಮತ ಎಣಿಕೆ ಕಾರ್ಯಕ್ರಮ ನಡೆಯುತ್ತಿದ್ದು, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌, ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

Karnataka MLC Election Results 2022: Congress Candidate Prakash Hukkeri Wins the North-West Teachers’ Seat

ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿದ್ದವು. ಪಶ್ಚಿಮ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳ ಹಾಗೂ ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳು ಸೇರಿವೆ.

ಬಸವರಾಜ ಹೊರಟ್ಟಿ ಜಯಭೇರಿ; ಪಶ್ಚಿಮ ಶಿಕ್ಷಕರ ಕ್ಷೇತ್ರದ ಫಲಿತಾಂಶ ಕೂಡ ಪ್ರಕಟಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆದ್ದು ಬೀಗಿದ್ದಾರೆ. ಇನ್ನೂ ನಾಲ್ಕು ಸಾವಿರ ಮತಗಳ ಎಣಿಕೆ ಬಾಕಿ ಉಳಿದಿದೆ. ಮೊದಲ ಪ್ರಾಶಸ್ತ್ಯದಲ್ಲೇ 7,500 ಕ್ಕೂ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಹೊರಟ್ಟಿ 8ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ದಾರೆ.

Karnataka MLC Election Results 2022: Congress Candidate Prakash Hukkeri Wins the North-West Teachers’ Seat

ಸತತ 8 ಬಾರಿ ಯಾರೂ ಗೆದ್ದಿಲ್ಲ; ದೇಶದ ರಾಜಕೀಯ ಇತಿಹಾಸದಲ್ಲಿ ಬಸವರಾಜ ಹೊರಟ್ಟ ಸತತ 8 ಬಾರಿ ಶಿಕ್ಷಕರ ಕ್ಷೇತ್ರದಲ್ಲಿ ಗೆದ್ದ ಏಕೈಕ ಅಭ್ಯರ್ಥಿಯಾಗಿದ್ದಾರೆ. 1980ರಿಂದ 2022ರವರೆಗೆ ಹೊರಟ್ಟಿ ಸತತವಾಗಿ ಮೇಲ್ಮನೆಗೆ ಶಿಕ್ಷಕರಿಂದ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಈ ಬಾರಿ ಚುನಾವಣೆಯಲ್ಲಿ 8ರಿಂದ 10 ಸಾವಿರ ಮತಗಳ ನಿರೀಕ್ಷೆಯಿಟ್ಟುಕೊಳ್ಳಲಾಗಿತ್ತು, ಆದರೆ 7 ಸಾವಿರಕ್ಕೂ ಹೆಚ್ಚಿನ ಮತಗಳು ಬಂದಿವೆ. ಇನ್ನೂ ಒಂದಷ್ಟು ಬರುವ ನಿರೀಕ್ಷೆಯಿದೆ ಎಂದರು.

ವಿಜಯೇಂದ್ರ ಸ್ಪರ್ಧೆ ಖಚಿತ, ಕ್ಷೇತ್ರ ಅಂತಿಮವಾಗಿಲ್ಲ; ಬಿಎಸ್‌ವೈ ವಿಜಯೇಂದ್ರ ಸ್ಪರ್ಧೆ ಖಚಿತ, ಕ್ಷೇತ್ರ ಅಂತಿಮವಾಗಿಲ್ಲ; ಬಿಎಸ್‌ವೈ

Recommended Video

IPL ಮ್ಯಾಚ್ ನಲ್ಲಿ ಒಂದು ಬೌಲ್ ಮತ್ತು ಒಂದು ಓವರ್ ನಿಂದ BCCIಬಾಚಿಕೊಳ್ಳೋ ದುಡ್ಡೆಷ್ಟು?|*Cricket|OneIndia Kannada

ಮಧು ಜಿ ಮಾದೇಗೌಡ ಮುನ್ನಡೆ; ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಪಡೆದುಕೊಂಡಿದ್ದಾರೆ. ಒಟ್ಟು 99,304 ಮತಗಳು ಚಲಾವಣೆಯಾಗಿದೆ. ಮಧ್ಯಾಹ್ನ ವೇಳೆಗೆ 28000 ಮತ ಏಣಿಕೆಯಾಗಿದ್ದು, ಮಧು ಮಾದೇಗೌಡ 3000 ಕ್ಕೂ ಹೆಚ್ಚಿನ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ.

English summary
Karnataka legistative council election results were announced on Wednesday. Congress Candidate Prakash Hukkeri wins in West Teachers constituency seat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X