ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುವ್ಯ ಪದವೀಧರ ಕ್ಷೇತ್ರ: ಸತತ 2ನೇ ಬಾರಿ ಜಯ ಸಾಧಿಸಿದ ಹಣಮಂತ ನಿರಾಣಿ

|
Google Oneindia Kannada News

ಬೆಳಗಾವಿ, ಜೂನ್ 16: ಬುಧವಾರ ಅರ್ಧಕ್ಕೆ ನಿಂತಿದ್ದ ವಿಧಾನ ಪರಿಷತ್ ಚುನಾವಣೆಯೆ ಎಣಿಕೆ ಕಾರ್ಯ ಇಂದು ಪೂರ್ಣಗೊಂಡಿದ್ದು, ವಾಯುವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ 34, 693 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.

ವಾಯುವ್ಯ ಪದವೀಧರ ಮತ ಕ್ಷೇತ್ರದ ಹಣಮಂತ ನಿರಾಣಿ 44, 815 ಮತಗಳನ್ನು ಪಡೆದರೆ, ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್ ಸಂಕ 10,122 ಮತ ಪಡೆದರು. 9,006 ಮತಗಳು ತಿರಸ್ಕೃತಗೊಂಡಿವೆ. ಚುನಾವಣೆಯಲ್ಲಿ 65, 922 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಹಣಮಂತ ಒಬ್ಬರೆ, 34.693 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿ ವಾಯುವ್ಯ ಪದವೀಧರ ಕ್ಷೇತ್ರದಿಂದ ಅವರು ಸತತ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.

ದಕ್ಷಿಣ ಪದವೀಧರರ ಕ್ಷೇತ್ರ: ಕಾಂಗ್ರೆಸ್‌ನ ಮಧು ಮಾದೇಗೌಡಗೆ 12,205 ಮತಗಳ ಭಾರಿ ಜಯದಕ್ಷಿಣ ಪದವೀಧರರ ಕ್ಷೇತ್ರ: ಕಾಂಗ್ರೆಸ್‌ನ ಮಧು ಮಾದೇಗೌಡಗೆ 12,205 ಮತಗಳ ಭಾರಿ ಜಯ

ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ಆಸೆಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಅರುಣ್ ಶಾಹಾಪುರ ಹೀನಾಯ ಸೋಲು ಕಂಡಿದ್ದಾರೆ. ಕಾಂಗ್ರೆಸ್ ನಾಯಕ ಪ್ರಕಾಶ್‌ ಹುಕ್ಕೇರಿ 5045 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 21,402 ಮತಗಳು ಚಲಾವಣೆಗೊಂಡಿದ್ದವು. ಹುಕ್ಕೇರಿ 11, 460 ಮತಗಳನ್ನು ಪಡೆದರೆ, ಅರುಣ್ 6,405 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಚಂದ್ರಶೇಖರ್ ಲೋಣಿ 544 ಮತಗಳನ್ನು ಪಡೆದರು.

MLC Election Results 2022: BJP Candidate Hanamant Nirani Wins North-West Graduate Seat

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಹೊರಟ್ಟಿ ಜಯಭೇರಿ; ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದ ಬಸವರಾಜ ಹೊರಟ್ಟಿಗೆ ಪಶ್ಷಿಮ ಶಿಕ್ಷಕರ ಕ್ಷೇತ್ರದಲ್ಲಿ ಜಯಬೇರಿ ಬಾರಿಸಿದ್ದಾರೆ. 15, 583 ಮತಗಳ ಪೈಕಿ ಬಸವರಾಜ ಹೊರಟ್ಟಿ 9266 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಬಸವರಾಜ ಗುರಿಕಾರ 4597 ಮತಗಳನ್ನು ಪಡೆದು 2ನೇ ಸ್ಥಾನ ಪಡೆದರು.

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಮಧು ಮಾದೇಗೌಡಗೆ ಗೆಲುವು; ಜೆಡಿಎಸ್ ಭದ್ರಕೋಟೆಯಾಗಿದ್ದ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಈ ಬಾರಿ ಮಧು ಜಿ ಮಾದೇಗೌಡ ಗೆಲುವಿನ ನಗೆ ಬೀರಿದ್ದಾರೆ. ಗುರುವಾರ ಫಲಿತಾಂಶ ಪ್ರಕಟವಾಗಿದ್ದು, ಮಧು 45, 275 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದರು. ಕಳೆದ ಬಾರಿ ಕೇವಲ 183 ಮತಗಳಿಂದ ಸೋಲು ಕಂಡಿದ್ದ ಮೈ.ವಿ ರವಿಶಂಕರ್ ಈ ಬಾರಿ 12 ಸಾವರಕ್ಕೂ ಹೆಚ್ಚು ಮತಗಳ ಹೀನಾಯ ಸೋಲು ಕಂಡರು.

ವಿಧಾನ ಪರಿಷತ್ ಚುನಾವಣೆ; ಠೇವಣಿ ಕಳೆದುಕೊಂಡ ವಾಟಾಳ್!ವಿಧಾನ ಪರಿಷತ್ ಚುನಾವಣೆ; ಠೇವಣಿ ಕಳೆದುಕೊಂಡ ವಾಟಾಳ್!

ಮೇಲ್ಮನೆಯ 4 ಸ್ಥಾನಗಳಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಎರಡರಲ್ಲಿ ಜಯ ಸಾಧಿಸಿದವು. ಚುನಾವಣೆಗೂ ಈ 4 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ತಲಾ 2ರಲ್ಲಿ ಗೆಲುವು ಸಾಧಿಸಿದ್ದವು. ಇದೀಗ ಕಾಂಗ್ರೆಸ್‌ಗೆ 2 ಸ್ಥಾನ ಲಾಭವಾದರೆ, ಜೆಡಿಎಸ್‌ 2 ಸ್ಥಾನವನ್ನು ಕಳೆದುಕೊಂಡಿದೆ. ಬಿಜೆಪಿ 2 ಸ್ಥಾನಗಳನ್ನು ಉಳಿಸಿಕೊಂಡಿದೆ.

English summary
Karnataka legistative council election results were announced on Thursday. BJP Candidate Hanamant Nirani wins north-west graduate by 34, 693 votes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X