ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್ ಚುನಾವಣೆ 2021; ಗೆದ್ದವರು, ಸೋತವರ ಪಟ್ಟಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 14; ಕರ್ನಾಟಕದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ವಿಧಾನ ಪರಿಷತ್ತಿನಲ್ಲಿ ಬಹುಮತದ ಕೊರತೆ ಎದುರಿಸುತ್ತಿದ್ದ ಆಡಳಿತಾರೂಢ ಬಿಜೆಪಿಗೆ ಈ ಚುನಾವಣೆ ಹೊಸ ಉತ್ಸಾಹ ತುಂಬಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಬಲ ಪೈಪೋಟಿ ನಡೆದಿತ್ತು.

ಸ್ಥಳೀಯ ಸಂಸ್ಥೆಗಳಿಂದ 25 ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಡಿಸೆಂಬರ್ 10ರಂದು ಚುನಾವಣೆ ನಡೆದಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದವು. 6 ಕ್ಷೇತ್ರಗಳಲ್ಲಿ ಮಾತ್ರ ಕಣಕ್ಕಿಳಿದಿದ್ದ ಜೆಡಿಎಸ್ ಹಾಸನ, ಮೈಸೂರು-ಚಾಮರಾಜನಗರದಲ್ಲಿ ಗೆಲುವು ಸಾಧಿಸಿದೆ.

ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ; ಯಾರು, ಏನು ಹೇಳಿದರು?ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ; ಯಾರು, ಏನು ಹೇಳಿದರು?

ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಎಂ. ಕೆ. ಪ್ರಾಣೇಶ್ 6 ಮತಗಳ ಅಂತರದಲ್ಲಿ ಗೆದ್ದರು. ಹಾಸನ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಮೊಮ್ಮಗ, ಎಚ್. ಡಿ. ರೇವಣ್ಣ ಪುತ್ರ ಡಾ. ಸೂರಜ್ ರೇವಣ್ಣ ಗೆಲುವು ಸಾಧಿಸುವ ಮೂಲಕ ಸಕ್ರಿಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.

Breaking; ಚಿಕ್ಕಮಗಳೂರಲ್ಲಿ ಬಿಜೆಪಿಗೆ 6 ಮತಗಳಿಂದ ಗೆಲುವು! Breaking; ಚಿಕ್ಕಮಗಳೂರಲ್ಲಿ ಬಿಜೆಪಿಗೆ 6 ಮತಗಳಿಂದ ಗೆಲುವು!

ಕಾಂಗ್ರೆಸ್ ಪಕ್ಷ ಬೀದರ್‌, ವಿಜಯಪುರ (ದ್ವಿ-ಸದಸ್ಯ ಕ್ಷೇತ್ರ), ದಕ್ಷಿಣ ಕನ್ನಡ (ದ್ವಿ-ಸದಸ್ಯ ಕ್ಷೇತ್ರ), ಕೋಲಾರ, ಬೆಂಗಳೂರು ಗ್ರಾಮಾಂತರ, ಧಾರವಾಡ (ದ್ವಿ-ಸದಸ್ಯ ಕ್ಷೇತ್ರ), ರಾಯಚೂರು, ಬೆಳಗಾವಿ, ಮಂಡ್ಯ, ಮೈಸೂರು, ತುಮಕೂರು ಸೇರಿ 11 ಸ್ಥಾನಗಳಲ್ಲಿ ಜಯಗಳಿಸಿದೆ.

Recommended Video

ದೇವೇಗೌಡರ ಬಗ್ಗೆ ಇಲ್ಲೂ ಇಲ್ಲದ ಅಭಿಮಾನ ಪಂಜಾಬ್ ರೈತರಿಗಿದೆ...ಹೇಗೆ ಅಂತೀರಾ? | Oneindia Kannada

ಬೆಳಗಾವಿ ಪರಿಷತ್ ಫಲಿತಾಂಶ: ಬಿಜೆಪಿಗೆ ಮುಖಭಂಗ; ಗೆದ್ದವರಾರು?ಬೆಳಗಾವಿ ಪರಿಷತ್ ಫಲಿತಾಂಶ: ಬಿಜೆಪಿಗೆ ಮುಖಭಂಗ; ಗೆದ್ದವರಾರು?

ಬಿಜೆಪಿ ಕೊಡಗು, ಬೆಂಗಳೂರು, ಚಿತ್ರದುರ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ, ಕಲಬುರಗಿ, ದಕ್ಷಿಣ ಕನ್ನಡ (ದಿ-ಸದಸ್ಯ ಕ್ಷೇತ್ರ), ಧಾರವಾಡ (ದ್ವಿ-ಸದಸ್ಯ ಕ್ಷೇತ್ರ), ವಿಜಯಪುರ (ದ್ವಿ-ಸದಸ್ಯ ಕ್ಷೇತ್ರ)ದಲ್ಲಿ ಗೆಲುವು ಸಾಧಿಸಿದೆ.

ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ತಂತ್ರದಿಂದಾಗಿ ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಬಿಜೆಪಿಯ ಮಹಾಂತೇಶ ಕವಟಗಿಮಠ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ನಿಂದ ಚನ್ನರಾಜ ಹಟ್ಟಿಹೊಳಿ ಗೆಲುವು ಸಾಧಿಸಿದ್ದಾರೆ. ಇವರು ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ.

ಜಾರಕಿಹೊಳಿ ಸಹೋದರರು ಲಖನ್‌ ಜಾರಕಿಹೊಳಿಗೆ ಬಿಜೆಪಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದರು. ಬೆಳಗಾವಿ ದ್ವಿ-ಸದಸ್ಯ ಕ್ಷೇತ್ರದಲ್ಲಿ ಅವರು ಗೆಲುವು ಸಾಧಿಸಿದ್ದಾರೆ.

Karnataka MLC Election Result 2021: List Of Key Candidates Who Won And Lost; Here Is The List

25 ಕ್ಷೇತ್ರದಲ್ಲಿ ಗೆದ್ದವರು, ಸೋತವರ ಪಟ್ಟಿ ಇಲ್ಲಿದೆ....

ಕ್ಷೇತ್ರ ಗೆದ್ದವರು ಸೋತವರು
ಮೈಸೂರು-ಚಾಮರಾಜನಗರ (ದ್ವಿ-ಸದಸ್ಯ ಕ್ಷೇತ್ರ) ಡಾ. ಡಿ. ತಿಮ್ಮಯ್ಯ (ಕಾಂಗ್ರೆಸ್), ಸಿ. ಎನ್. ಮಂಜೇಗೌಡ (ಜೆಡಿಎಸ್) ರಘು ಕೌಟಿಲ್ಯ (ಬಿಜೆಪಿ)
ದಕ್ಷಿಣ ಕನ್ನಡ (ದ್ವಿ ಸದಸ್ಯ ಕ್ಷೇತ್ರ ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ), ಮಂಜುನಾಥ ಭಂಡಾರಿ (ಕಾಂಗ್ರೆಸ್) ಪಕ್ಷೇತರರು, ಇತರರು
ಚಿತ್ರದುರ್ಗ-ದಾವಣಗೆರೆ ಕೆ. ಎಸ್. ನವೀನ್ (ಬಿಜೆಪಿ) ಬಿ. ಸೋಮಶೇಖರ್‌ (ಕಾಂಗ್ರೆಸ್)
ಶಿವಮೊಗ್ಗ ಡಿ. ಎಸ್. ಅರುಣ್ (ಬಿಜೆಪಿ) ಆರ್. ಪ್ರಸನ್ನ ಕುಮಾರ್ (ಕಾಂಗ್ರೆಸ್)
ಬೆಳಗಾವಿ (ದ್ವಿ ಸದಸ್ಯ ಕ್ಷೇತ್ರ) ಚನ್ನರಾಜ್ ಹಟ್ಟಿಹೊಳಿ (ಕಾಂಗ್ರೆಸ್), ಲಖನ್ ಜಾರಕಿಹೊಳಿ (ಪಕ್ಷೇತರ) ಮಹಾಂತೇಶ್ ಕವಟಗಿಮಟ (ಬಿಜೆಪಿ)
ಬೆಂಗಳೂರು ಗೋಪಿನಾಥ ರೆಡ್ಡಿ (ಬಿಜೆಪಿ) ಯೂಸೂಫ್ ಶರೀಫ್ (ಕೆಜಿಎಫ್ ಬಾಬು) (ಕಾಂಗ್ರೆಸ್)
ಕೊಡಗು ಸುಜಾ ಕುಶಾಲಪ್ಪ (ಬಿಜೆಪಿ) ಮಂತರ ಗೌಡ (ಕಾಂಗ್ರೆಸ್)
ಉತ್ತರ ಕನ್ನಡ ಗಣಪತಿ ಉಳ್ವೇಕರ್ (ಬಿಜೆಪಿ) ಭೀಮಣ್ಣ ನಾಯ್ಕ್ (ಕಾಂಗ್ರೆಸ್
ಕಲಬುರಗಿ ಬಿ. ಜಿ. ಪಾಟೀಲ್ (ಬಿಜೆಪಿ) ಶಿವಾನಂದ ಪಾಟೀಲ್ ವರ್ತೂರ್ (ಕಾಂಗ್ರೆಸ್)
ಬಳ್ಳಾರಿ ವೈ. ಎಂ. ಸತೀಶ (ಬಿಜೆಪಿ) ಕೆ. ಸಿ. ಕೊಂಡಯ್ಯ (ಕಾಂಗ್ರೆಸ್)
ಧಾರವಾಡ (ದ್ವಿ ಸದಸ್ಯ ಕ್ಷೇತ್ರ) ಪ್ರದೀಪ್ ಶೆಟ್ಟರ್ (ಬಿಜೆಪಿ), ಸಲೀಂ ಅಹಮದ್ (ಕಾಂಗ್ರೆಸ್) ಇತರರು, ಪಕ್ಷೇತರರು
ವಿಜಯಪುರ (ದ್ವಿ ಸದಸ್ಯ ಕ್ಷೇತ್ರ) ಪಿ. ಎಚ್. ಪೂಜಾರ (ಬಿಜೆಪಿ), ಸುನೀಲ ಗೌಡ ಪಾಟೀಲ (ಕಾಂಗ್ರೆಸ್) ಇತರರು, ಪಕ್ಷೇತರರು
ಮಂಡ್ಯ ಎಂ. ಜಿ. ಗೂಳಿಗೌಡ (ಕಾಂಗ್ರೆಸ್) ಮಂಜು ಕೆ. ಆರ್. ಪೇಟೆ (ಬಿಜೆಪಿ)
ರಾಯಚೂರು ಶರಣಗೌಡ ಬಯ್ಯಾಪುರ (ಕಾಂಗ್ರೆಸ್) ವಿಶ್ವನಾಥ ಎ. ಬನಹಟ್ಟಿ (ಬಿಜೆಪಿ)
ಬೀದರ್ ಭೀಮಾರಾವ್ ಪಾಟೀಲ್ (ಕಾಂಗ್ರೆಸ್) ಪ್ರಕಾಶ್ ಖಂಡ್ರೆ (ಬಿಜೆಪಿ)
ಕೋಲಾರ ಅನಿಲ್ ಕುಮಾರ್ (ಕಾಂಗ್ರೆಸ್) ಕೆ. ಎನ್‌. ವೇಣುಗೋಪಾಲ್ (ಬಿಜೆಪಿ)
ಬೆಂಗಳೂರು ಗ್ರಾಮಾಂತರ ಎಸ್. ರವಿ (ಕಾಂಗ್ರೆಸ್) ಬಿ. ಎಂ. ನಾರಾಯಣ ಸ್ವಾಮಿ (ಬಿಜೆಪಿ), ಎಚ್. ಎಂ. ರಮೇಶ್‌ ಗೌಡ (ಜೆಡಿಎಸ್)
ತುಮಕೂರು ಆರ್. ರಾಜೇಂದ್ರ (ಗೆಲುವು) ಎನ್. ಲೋಕೇಶ್ (ಬಿಜೆಪಿ)

English summary
Karnataka legislative council election result announced on December 14, 2021. Here are the list who won elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X