ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ: ಹೆಲಿಕಾಪ್ಟರ್‌ನಲ್ಲಿ ಬಂದು ನಾಮಪತ್ರ ಸಲ್ಲಿಕೆ

|
Google Oneindia Kannada News

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯುತ್ತಿದ್ದು ಬಿಜೆಪಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಮಂಗಳವಾರ ನಾಲ್ವರು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಟಿಕೆಟ್‌ಗಾಗಿ ಘಟಾನುಘಟಿ ನಾಯಕರುಗಳ ಹೆಸರು ಕೇಳಿಬಂದಿತ್ತು. ಆದರೆ, ಇದೆಲ್ಲದರ ಮಧ್ಯೆ ಸದ್ದಿಲ್ಲದೆ, ಕೊಪ್ಪಳ ಜಿಲ್ಲೆಯ ಲಂಬಾಣಿ ಮಹಿಳೆ, ಬಿಜೆಪಿಯ ರಾಜ್ಯ ಕಾರ್ಯದರ್ಶಿ ಹೇಮಲತಾ ನಾಯಕ್ ಅವರಿಗೆ ಟಿಕಟ್ ಘೋಷಿಸಲಾಯಿತು.

Breaking: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ: ವಿಜಯೇಂದ್ರಗೆ ಇಲ್ಲ ಟಿಕೆಟ್Breaking: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ: ವಿಜಯೇಂದ್ರಗೆ ಇಲ್ಲ ಟಿಕೆಟ್

Karnataka MLC election: BJP Candidate Hemalatha Come in helicopter and submit nomination

ಟಿಕೆಟ್ ಘೋಷಣೆಯಾದ ಸಂದರ್ಭದಲ್ಲಿ ಹೇಮಲತಾ ನಾಯಕ್ ಕೊಪ್ಪಳದಲ್ಲಿ ಇದ್ದರು. ಪಕ್ಷದಿಂದ ಟಿಕೆಟ್ ಘೋಷಿಸಿದ್ದಲ್ಲದೆ, ನಾಮಪತ್ರ ಸಲ್ಲಿಕೆಗೆ ಇಂದು ಸಂಜೆ 4 ಗಂಟೆ ಕೊನೆಯ ಸಮವಾದ್ದರಿಂದ ಕೂಡಲೇ ಬಂದು ನಾಮಪತ್ರ ಸಲ್ಲಿಕೆ ಮಾಡಬೇಕು ಎಂಬ ಸೂಚನೆಯೂ ಬಂದಿತ್ತು.

Karnataka MLC election: BJP Candidate Hemalatha Come in helicopter and submit nomination

ಕೊಪ್ಪಳದಿಂದ ಕಾರಿನಲ್ಲಿ ಹೊರಟ ತುಮಕೂರುವರೆಗೂ ಬಂದಿದ್ದರು. ಬಳಿಕ ಅವರಿಗೆ ತುಮಕೂರಿನಿಂದ ಅವರನ್ನು ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಲಾಗಿತ್ತು. ತುಮಕೂರಿನಿಂದ ಬೆಂಗಳೂರಿನ ಜಕ್ಕೂರು ಏರೋಡ್ರಮ್ ವರೆಗೆ ಅವರನ್ನು ಹೆಲಿಕಾಪ್ಟರ್‌ನಲ್ಲಿ ಕರೆತರಲಾಯಿತು. ಮಧ್ಯಾಹ್ನ 2 ಗಂಟೆ ವೇಳೆಗೆ ವಿಧಾನಸೌಧ ತಲುಪಿ ಬಿಜೆಪಿ ಅಭ್ಯರ್ಥಿಯಾಗಿ ಹೇಮಲತಾ ನಾಮಪತ್ರ ಸಲ್ಲಿಕೆ ಮಾಡಿದರು.

Recommended Video

Virat ಮಾಡಿದ ತಪ್ಪನ್ನು ಡುಪ್ಲೆಸಿಸ್ ಮಾಡಬಾರದು ಎಂದ Virender Sehwag |Oneindia Kannada

English summary
Karnataka MLC election: BJP Candidate Koppala District based Hemalatha Nayak Come in helicopter and submit nomination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X