ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂಡಲ ಸಂಗಮನ ಆಣೆ ತಪ್ಪೇ ಮಾಡಿಲ್ಲ:ಕಾಶಪ್ಪನವರ್‌

By Ashwath
|
Google Oneindia Kannada News

ಬೆಂಗಳೂರು, ಜು.6: ರೌಡಿ ಶೀಟರ್‌ ಸೋಮೇಗೌಡ ಜತೆ ಸೇರಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಸಂಬಂಧ ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿದ್ದ ಹುನಗುಂದ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶಪ್ಪನವರ್‌ ಅವರು ಶನಿವಾರ ರಾತ್ರಿ ನಗರಕ್ಕೆ ಹಿಂದಿರುಗಿದ್ದಾರೆ.

ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಸಂದರ್ಶನ ನೀಡಿದ ಅವರು ಕುಡಿಯುವ ಅಭ್ಯಾಸವೇ ನನಗಿಲ್ಲ. ಅಂದೂ ನಾನು ಕುಡಿದಿರಲಿಲ್ಲ. ಸೋಮಶೇಖರ ಗೌಡ ರೌಡಿ ಎನ್ನುವುದು ಗೊತ್ತೆ ಇರಲಿಲ್ಲ.
ಸ್ಕೈ ಬಾರ್‌ನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿಲ್ಲ. ಪೊಲೀಸರೇ ಸುಳ್ಳು ಹೇಳುತ್ತಿದ್ದಾರೆ. ಕೂಡಲ ಸಂಗಮನ ಆಣೆ ನಾನು ತಪ್ಪೇ ಮಾಡಿಲ್ಲ ಎಂದು ಅಲವತ್ತುಕೊಂಡಿದ್ದಾರೆ.[ಪೊಲೀಸರಿಂದ ಪತ್ನಿ ಮೇಲೆ ಹಲ್ಲೆ, ಕಾಶಪ್ಪ ಆರೋಪ]

ನಾನು ಎಲ್ಲಿಯೂ ತಲೆಮರೆಸಿಕೊಂಡಿರಲಿಲ್ಲ. ತಿರುಪತಿಗೆ ಹೋಗಿದ್ದೆ ಅಷ್ಟೇ. ವಿರೋಧ ಪಕ್ಷಗಳ ವಿನಾಕಾರಣ ಈ ಪ್ರಕರಣವನ್ನು ದೊಡ್ಡದು ಮಾಡುತ್ತಿವೆ. ಸದನದ ವೇಳೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. [ರೌಡಿಶೀಟರ್‌ ಸೋಮೇಗೌಡ ಯಾರು?]

 MLA Vijayanand kashappanava
ನಮ್ಮೊಂದಿಗೆ ಪೊಲೀಸರೇ ಕೆಟ್ಟದಾಗಿ ವರ್ತಿಸಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಕೂಡಲೇ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿ ತಿಳಿಸಿದ್ದೇನೆ. ಮರುದಿನ ಟಿವಿಗಳಲ್ಲಿ ಸುದ್ದಿ ಬಂದಾಗಲೇ ಅಷ್ಟು ದೊಡ್ಡದಾಗಿ ಎನ್ನುವುದು ತಿಳಿಯಿತು. ನನ್ನ ವಿರುದ್ಧ ಮಾಜಿ ಶಾಸಕ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಅವರನ್ನು ನ್ಯಾಯಾಲಯಕ್ಕೆ ಎಳೆಯುತ್ತೇನೆ ಎಂದು ಎಚ್ಚರಿಕೆಯನ್ನೂ ನೀಡಿದರು.[ವಿಜಯಾನಂದ ಕಾಶಪ್ಪನವರ್‌ ಅವಿವೇಕಿ: ರಮೇಶ್‌ಕುಮಾರ್]

ಸೋಮವಾರ ಮಂದೂಡಿಕೆ: ವಿಜಯಾನಂದ ಕಾಶಪ್ಪನವರ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ.

English summary
Ending days of speculation, Hungund MLA Vijayanand Kashappanavar on Saturday night appeared before the media and claimed that he was not absconding, but was in Tirupati for a visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X