ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ಸಂಕಟ: ಬಿಜೆಪಿ ತೊರೆಯಲು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ನಿರ್ಧಾರ!

|
Google Oneindia Kannada News

ಬೆಂಗಳೂರು, ಆ. 06: ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿನ ಅಸಮಾಧಾನ ಸ್ಪೋಟವಾಗುತ್ತಿದೆ. ಮಂತ್ರಿಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ವಿಧಾನಸಭಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸವದತ್ತಿ ಎಲ್ಲಮ್ಮ ಕ್ಷೇತ್ರದ ಶಾಸಕ ಆನಂದ್ ಮಾಮನಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಎರಡನೇ ಹಂತದ ಸಂಪುಟ ವಿಸ್ತರಣೆ ಮಾಡುವಾದ ಮಂತ್ರಿ ಸ್ಥಾನ ಕೊಡುವ ಭರವಸೆಯನ್ನು ಬಿಜೆಪಿ ನಾಯಕರು ಕೊಟ್ಟಿದ್ದಾರೆ. ಹೀಗಾಗಿ ರಾಜೀನಾಮೆ ನಿರ್ಧಾರದಿಂದ ಶಾಸಕ ಆನಂದ್ ಮಾಮನಿ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿಯಿದೆ. ಇದೀಗ ಮತ್ತೆ ಬೆಳಗಾವಿ ಜಿಲ್ಲೆಯಿಂದಲೇ ಅಸಮಾಧಾನ ಸ್ಫೋಟವಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಮಂತ್ರಿಯಾಗಿದ್ದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್‌ಗೆ ಬಸವರಾಜ ಬೊಮ್ಮಾಯಿನ ಸಂಪುಟದಲ್ಲಿ ಮಂತ್ರಿಸ್ಥಾನ ನಿರಾಕರಿಸಲಾಗಿದೆ.

ಇದು ಮರಾಠ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಬೆಳಗಾವಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮರಾಠ ಮತಗಳು ನಿರ್ಣಾಯಕವಾಗಿವೆ. ಹೀಗಾಗಿ ಮರಾಠ ಸಮುದಾಯವನ್ನು ರಾಜಕೀಯ ಪಕ್ಷಗಳು ನಿರ್ಲಕ್ಷ ಮಾಡುವುದಿಲ್ಲ. ಇದೇ ಕಾರಣದಿಂದ ಬಸವ ಕಲ್ಯಾಣ ಚುನಾವಣೆ ಸಂದರ್ಭದಲ್ಲಿ ಮರಾಠ ಅಭಿವೃದ್ಧಿ ನಿಗಮ ಮಾಡುವ ಭರವಸೆಯನ್ನು ಆಗಿನ ಸಿಎಂ ಯಡಿಯೂರಪ್ಪ ಕೊಟ್ಟಿದ್ದರು.

ಆದರೂ ಕೂಡ ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಮರಾಠ ಮತದಾರರು ಬಿಜೆಪಿಯಿಂದ ದೂರ ಸರಿಯುತ್ತಿರುವುದು ಕಂಡು ಬಂದಿತ್ತು. ಹೀಗಾಗಿ ಮರಾಠ ಸಮುದಾಯದ ಬೆಂಬಲವಿರುವ ದಿ. ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರನ್ನು ಬಜೆಪಿ ಕಣಕ್ಕಿಳಿಸಿ ಪ್ರಯಾಸ ಗೆಲವು ಕಂಡಿತ್ತು. ಇದೀಗ ಮರಾಠ ಸಮುದಾಯ ಬಹಿರಂಗವಾಗಿ ಬಿಜೆಪಿ ನಾಯಕರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಬಿಜೆಪಿಗೆ ಎಚ್ಚರಿಕೆ ಗಂಟೆ ಎಂದು ಹೇಳಲಾಗುತ್ತಿದೆ.

ಮರಾಠ ಸಮುದಾಯದ ಅಸಮಾಧಾನ ಸ್ಫೋಟ!

ಮರಾಠ ಸಮುದಾಯದ ಅಸಮಾಧಾನ ಸ್ಫೋಟ!

ಮಾಜಿ ಸಚಿವ, ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಕ್ಷತ್ರಿಯ ಮರಾಠಾ ಸಂಘಟನೆಗಳ ಒಕ್ಕೂಟ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿದೆ.


"ಮಾಜಿ ಸಚಿವ ಶ್ರೀಮಂತ ಪಾಟೀಲ್‌ಗೆ ಮತ್ತೆ ಸಚಿವ ಸ್ಥಾನ ಕೊಡಬೇಕು. ಬಿಜೆಪಿ ಸರ್ಕಾರ ಬಂದಾಗಲೇ ನಮ್ಮ ಸಮಾಜದ ಕಡೆಗಣನೆ ಆಗಿದೆ. ಯಡಿಯೂರಪ್ಪ ಬಂದಾಗ ಶ್ರೀಮಂತ ಪಾಟೀಲ್ ಸಚಿವರಾಗಿದ್ದರು. ಈ ಸರ್ಕಾರ ಬರೋದಕ್ಕೆ ಯಾರು ಕಾರಣರೋ ಅವರನ್ನೇ ಕೈ ಬಿಡಲಾಗಿದೆ. ಪಾರ್ಟಿಯನ್ನೇ ಬಿಟ್ಟು ಬಿಡೋಣ ಅನ್ನುವ ಮಟ್ಟಕ್ಕೆ ಶ್ರೀಮಂತ ಪಾಟೀಲ್ ಬೇಸರಗೊಂಡಿದ್ದಾರೆ. ಈಗಾಗಲೇ ನಮ್ಮ ಮರಾಠಾ ನಿಗಮ ಮಾಡಲಾಗಿದೆ. ಎಂಟು ತಿಂಗಳಾದರೂ ಮರಾಠ ನಿಗಮಕ್ಕೆ ಅಧ್ಯಕ್ಷರ ಆಯ್ಕೆ ಆಗಿಲ್ಲ, ಅನುದಾನ ಬಿಡುಗಡೆ ಮಾಡಿಲ್ಲ. ಇದನ್ನು ಸರ್ಕಾರ ಮಾಡದೇ ಹೋದರೆ ಸರ್ಕಾರದ ವಿರುದ್ಧ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿಯವರೆಗೆ ಮರಾಠಾ ಸಮಾಜ ಬೀದಿಗೆ ಬಂದಿಲ್ಲ. ಹೀಗೆ ಮುಂದುವರಿದರೆ ನಮ್ಮನ್ನು ಬಿಟ್ಟರೆ ಏನಾಗುತ್ತಾರೆ ಎಂಬುದನ್ನು ತೋರಿಸುತ್ತೇವೆ" ಎಂದು ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ಅಧ್ಯಕ್ಷ ರಾಣೋಜಿರಾವ್ ಸಾಠೆ ಬೆಂಗಳೂರಿನಲ್ಲಿ ಮಾತನಾಡಿ ಎಚ್ಚರಿಕೆ ನೀಡಿದ್ದಾರೆ.

ಆಮಿಷ ಒಡ್ಡಿ ಬಿಜೆಪಿಗೆ ಕರೆ ತಂದಿದ್ದರು

ಆಮಿಷ ಒಡ್ಡಿ ಬಿಜೆಪಿಗೆ ಕರೆ ತಂದಿದ್ದರು

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಸಿನಿಮಾ ಕಲಾವಿದ, ಮರಾಠ ಮುಖಂಡ ಗಣೇಶ್ ರಾವ್ ಅವರು, "2019 ರಲ್ಲಿ ಬಿಜೆಪಿ ರಚನೆ ಆಗುವಾಗ ಇಲ್ಲದ ಆಮಿಷ ಒಡ್ಡಿ ಶ್ರೀಮಂತ ಪಾಟೀಲ್‌ಗೆ ಒಲ್ಲದ ಖಾತೆ ಕೊಟ್ಟಿದ್ದರು. ಅವರಿಗೆ ಮನಸ್ಸಿಲ್ಲದಿದ್ದರೂ ಕೂಡ ಪಕ್ಷದ ಸಿದ್ದಾಂತ ಒಪ್ಪಿಕೊಂಡು ಖಾತೆಯನ್ನು ಕಪ್ಪು ಚುಕ್ಕೆ ಇಲ್ಲದಂತೆ ನಿರ್ವಹಣೆ ಮಾಡಿದ್ದಾರೆ. ಎರಡು ವರ್ಷದ ಅವಧಿಯಲ್ಲಿ ಒಂದು ಭ್ರಷ್ಟಾಚಾರ ಇಲ್ಲದೆ ಪಕ್ಷಕ್ಕೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಿಲ್ಲ. ಈ ಬಾರಿ ಕೂಡ ಮಂತ್ರಿ ಮಾಡುತ್ತೇವೆ ಅಂತ ಹಿಂದಿನ ದಿನದ ತನಕವೂ ಕೂಡ ಭರವಸೆ ಕೊಟ್ಟಿದ್ದರು. ಪಕ್ಷದ ಕಾರ್ಯಕರ್ತರಾಗಿ ಕ್ಷತ್ರಿಯ ಮರಾಠಾ ಸಮಾಜಕ್ಕೆ ಇದರಿಂದ ನೋವಾಗಿದೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.

"ಬಿಜೆಪಿ ನಮ್ಮ ಸಮಾಜಕ್ಕೆ ಸರಿಯಾದ ಪ್ರಾತಿನಿಧ್ಯ ಕೊಟ್ಟಿಲ್ಲ. ಮರಾಠಾ ಜನಾಂಗ ತೀವ್ರ ಬೇಸರದಲ್ಲಿದೆ. ಬಸವ ಕಲ್ಯಾಣ ಚುನಾವಣೆಯಲ್ಲಿ ಎನ್‌ಸಿಪಿಯಿಂದ ಮರಾಠ ಸಮುದಾಯ ಪ್ರಭಾವಿ ಮುಖಂಡ ಮಾರುತಿರಾವ್ ಮೂಳೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆದರೂ ಬಸವ ಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಆಗುವುದಕ್ಕೆ ಮರಾಠ ಸಮಾಜವೇ ಕಾರಣ. ಬಿಜೆಪಿ ಸರ್ಕಾರಕ್ಕೆ ನಾವು ನಿಷ್ಟಾವಂತರಾದರೂ ಯಾಕೆ ಅನ್ಯಾಯ ಮಾಡಿ ಕಡೆಗಣಿಸಲಾಗುತ್ತದೆ? ಎಂದು ಗಣೇಶ್ ರಾವ್ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಬಿಡಲು ಮುಂದಾದ ಶ್ರೀಮಂತ ಪಾಟೀಲ್!

ಬಿಜೆಪಿ ಬಿಡಲು ಮುಂದಾದ ಶ್ರೀಮಂತ ಪಾಟೀಲ್!

"ಬಿಜೆಪಿ ಸರ್ಕಾರ ಬರಲು ಕಾರಣರಾಗಿದ್ದ ಶಾಸಕ ಶ್ರೀಮಂತ ಪಾಟೀಲ್ ಈಗ ಬಿಜೆಪಿಯನ್ನೇ ಬಿಡೋಕೆ ಹೊರಟಿದ್ದಾರೆ. ಆದರೆ ನಾವು ಶ್ರೀಮಂತ ಪಾಟೀಲಗೆ ಭರವಸೆ ಕೊಟ್ಟಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡುತ್ತೇವೆಂದು ಹೇಳಿದ್ದೇವೆ. ಹೀಗಾಗಿ ಮಾಧ್ಯಮಗಳ ಮುಂದೆ ಬಂದಿದ್ದೇವೆ. ಮರಾಠ ಅಭಿವೃದ್ಧಿ ನಿಗಮಕ್ಕೆ ನೇಮಕ ಮಾಡಬೇಕು. ಜೊತೆಗೆ ನಮ್ಮ ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ಕೊಡಲೇಬೇಕು. ನಿಗಮಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಸಮಿತಿ ರಚನೆ ಮಾಡಬೇಕು"ಎಂದು ರಾಣೋಜಿರಾವ್ ಸಾಟೆ ಆಗ್ರಹಿಸಿದ್ದಾರೆ.

ಇದೇ ಮಾತನ್ನು ಹೇಳಿರುವ ಮರಾಠ ಸಮುದಾಯದ ಪ್ರಭಾವಿ ನಾಯಕ ಗಣೇಶ್ ರಾವ್, ಬಿಜೆಪಿ ಪಕ್ಷಕ್ಕೆ ಕರೆದುಕೊಂಡು ಬಂದು ಈಗ ಶ್ರೀಮಂತ ಪಾಟೀಲ್‌ಗೆ ಅವಮಾನ ಮಾಡಿದೆ. ಶ್ರೀಮಂತ ಪಾಟಿಲ್ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಯೋಚನೆ ಮಾಡುತ್ತಿದ್ದಾರೆ. ನಮ್ಮ ಸಮಾಜ ಅವರ ಬೆನ್ನಿಗೆ ನಿಂತರೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಮಾಜದ ಅಭಿಪ್ರಾಯ ಪಡೆದು ರಾಜೀನಾಮೆ ಬೇಕಾದರೂ ಕೊಡುತ್ತೇನೆ ಅಂತಾ ಶ್ರೀಮಂತ ಪಾಟೀಲ್ ಹೇಳಿದ್ದಾರೆ" ಎಂದು ಎಚ್ಚರಿಕೆ ನೀಡಿದ್ದಾರೆ.

Recommended Video

ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣವರ್ ರಾಜಕೀಯ ಪ್ರವೇಶ | Oneindia Kannada
ಬಿಜೆಪಿ ಮನ್ನಿದಸಲೇ ಬೇಕಿದೆ ಶ್ರೀಮಂತ ಪಾಟೀಲ್ ಬೇಡಿಕೆ

ಬಿಜೆಪಿ ಮನ್ನಿದಸಲೇ ಬೇಕಿದೆ ಶ್ರೀಮಂತ ಪಾಟೀಲ್ ಬೇಡಿಕೆ

"ಮರಾಠರು ಬಿಜೆಪಿಗೆ ಮತ ಹಾಕುತ್ತಾರೆ ಅಂದುಕೊಂಡಿದ್ದಾರೆ. ನಾವು ಬಿಜೆಪಿ ನಿಷ್ಟಾವಂತ ಕಾರ್ಯಕರ್ತರು. ಸಚಿವ ಸ್ಥಾನ ಸಿಗದಿದ್ದರೆ ರಾಜೀನಾಮೆ ಕೊಡುತ್ತಾರೆ. ಹೀಗಾಗಿ ಸರ್ಕಾರ ಮೊದಲು ಎಚ್ಚೆತ್ತುಕೊಳ್ಳಬೇಕು. ರಾಜ್ಯದ 12 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ‌ ಮತಗಳು ನಿರ್ಣಾಯಕ. ಒಟ್ಟು 40 ಲಕ್ಷದಷ್ಟಿರುವ ಮರಾಠ ಸಮುದಾಯಕ್ಕೆ ಅನ್ಯಾಯವಾಗಿದೆ. ಆದರೂ ನಾವು ಪಕ್ಷಕ್ಕೆ ಕಪ್ಪು ಚುಕ್ಕೆ ತರುವ ಪ್ರಯತ್ನ ಮಾಡುತ್ತಿಲ್ಲ. ನಾಯಕನಿಗೆ ಅನ್ಯಾಯವಾಗಿರೋದ್ರಿಂದ ಧ್ವನಿ ಎತ್ತಿದ್ದೇವೆ ಎಂದು ಮರಾಠ ಸಮುದಾಯದ ಮುಖಂಡ ಗಣೇಶ್ ಯಾಜಿ ಆಕ್ರೋಶ ವ್ಯಕ್ತಪಡಿಸಿದರು.

ಜೊತೆಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತರು. ಹೀಗಾಗಿ ಶಾಸಕ ಶ್ರೀಮಂತ ಪಾಟೀಲ್ ನಡೆಯ ಹಿಂದೆ ರಮೇಶ್ ಜಾರಕಿಹೊಳಿ ಅವರ ತಂತ್ರವಿರುತ್ತದೆ. ಆದರಿಂದ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಹೈಕಮಾಂಡ್ ಈ ವಿಚಾರನ್ನು ಗಂಭೀರವಾಗಿ ಪರಿಗಣಿಸುತ್ತದೆ ಎನ್ನಲಾಗಿದೆ.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ರಾಣೋಜಿರಾವ್ ಸಾಠೆ ಮತ್ತು ಕರ್ನಾಟಕ ಮರಾಠ ವೆಲ್ ಫೇರ್ ಅಸೋಸಸಸಿಯೇಷನ್ ಅಧ್ಯಕ್ಷ ಮನೋಜ್ ಕುಮಾರ್ ಹಾಗೂ ಮರಾಠ ಸಮುದಾಯದ ಮುಖಂಡರುಗಳಾದ ಗಣೇಶ್ ರಾವ್ ಕೇಸರ್ಕರ್, ಮಾರುತಿರಾವ್ ಮೋರೆ, ಕಮಲೇಶ್ ಪಡ್ತಾರೆ, ಪ್ರವೀಣ್ ಮಾನ್, ವೀರೂ ಫಿಶೆ, ಶೈಲೇಶ ನಾಜರೆ, ನಾಗೋಜಿರಾವ್ ಕರಾಡೆ, ಸತ್ಯನಾರಾಯಣ್ ಬಾಬಡೆ, ನಾಗರಾಜ್ ವನ್ಸ್, ತುಳಸಿರಾಮ್ ಒತ್ತಾಯಿಸಿದ್ದಾರೆ.

English summary
Karnataka Cabinet Expansion: Kagwad MLA Shrimant Patil decided to resign to BJP after not getting minister post in CM Basavarj Bommai cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X