ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮೇಶ್ ಜಾರಕಿಹೊಳಿ ಇಂದು ಅಧಿಕೃತ ರಾಜೀನಾಮೆ ಸಲ್ಲಿಕೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಜುಲೈ 03: ಶಾಸಕ ರಮೇಶ್ ಜಾರಕಿಹೊಳಿ ಅವರು ನಿನ್ನೆ ಸಲ್ಲಿಸಿದ ರಾಜೀನಾಮೆ ಸ್ಪೀಕರ್ ಅವರನ್ನು ತಲುಪಿಲ್ಲ ಹಾಗಾಗಿ ಇಂದು ಅವರು ಅಧಿಕೃತವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಸ್ಪೀಕರ್ ರಮೇಶ್ ಕುಮಾರ್ ಅವರು ನಿನ್ನೆಯೇ ಬೆಂಗಳೂರಿಗೆ ಬಂದಿದ್ದು, ಇಂದು ಅವರನ್ನು ಖುದ್ದಾಗಿ ಭೇಟಿ ಆಗಲಿರುವ ಶಾಸಕ ರಮೇಶ್ ಕುಮಾರ್ ಅವರು ಅಧಿಕೃತವಾಗಿ ನಿಯಮದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.

ರಮೇಶ್ ಜಾರಕಿಹೊಳಿ ಮುಂದೆ 4 ಪ್ರಶ್ನೆ ಇಟ್ಟ ಅತೃಪ್ತ ಶಾಸಕರು!ರಮೇಶ್ ಜಾರಕಿಹೊಳಿ ಮುಂದೆ 4 ಪ್ರಶ್ನೆ ಇಟ್ಟ ಅತೃಪ್ತ ಶಾಸಕರು!

ಮೊನ್ನೆ (ಸೋಮವಾರ) ಕೈಬರಹದಲ್ಲಿ ರಾಜೀನಾಮೆ ಪತ್ರ ಬರೆದಿದ್ದ ರಮೇಶ್ ಜಾರಕಿಹೊಳಿ ಅವರು, ಅದನ್ನು ಸ್ಪೀಕರ್‌ಗೆ ಫ್ಯಾಕ್ಸ್‌ ಮೂಲಕ ಕಳುಹಿಸಿದ್ದಾಗಿ ಹೇಳಿದ್ದರು. ಆದರೆ ಆ ರೀತಿಯ ಯಾವುದೇ ರಾಜೀನಾಮೆ ಪತ್ರ ತಮಗೆ ಬಂದಿಲ್ಲವೆಂದು ರಮೇಶ್ ಕುಮಾರ್ ತಿಳಿಸಿದ್ದರು.

ಒತ್ತಡ ಹೇರಲು ರಾಜೀನಾಮೆ ಪ್ರಹಸಹ ಮಾಡಿದರೆ?

ಒತ್ತಡ ಹೇರಲು ರಾಜೀನಾಮೆ ಪ್ರಹಸಹ ಮಾಡಿದರೆ?

ರಮೇಶ್ ಕುಮಾರ್ ಅವರು ಕಾಂಗ್ರೆಸ್ ಮೇಲೆ ಒತ್ತಡ ಹೇರಲೆಂದು ರಾಜೀನಾಮೆ ಪತ್ರವನ್ನು ಮಾಧ್ಯಮಗಳಿಗೆ ಮಾತ್ರವೇ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ರಮೇಶ್ ಜಾರಕಿಹೊಳಿ ಅವರು ನಿಯಮಬದ್ಧವಾಗಿ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಸಂಜೆ ವೇಳೆಗೆ ರಾಜೀನಾಮೆ ನೀಡಲಿದ್ದಾರೆ ರಮೇಶ್

ಸಂಜೆ ವೇಳೆಗೆ ರಾಜೀನಾಮೆ ನೀಡಲಿದ್ದಾರೆ ರಮೇಶ್

ರಮೇಶ್ ಜಾರಕಿಹೊಳಿ ಅವರು ಪ್ರಸ್ತುತ ದೆಹಲಿಯಲ್ಲಿದ್ದಾರೆ ಎನ್ನಲಾಗಿದ್ದು, ಸಂಜೆ ವೇಳೆಗೆ ಬೆಂಗಳೂರಿಗೆ ಬಂದು ಖುದ್ದಾಗಿ ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

ರಮೇಶ್ ಜಾರಕಿಹೊಳಿ ರಾಜೀನಾಮೆಗೆ ತ್ರಿ ಈಡಿಯಟ್ಸ್‌ ಕಾರಣ! ರಮೇಶ್ ಜಾರಕಿಹೊಳಿ ರಾಜೀನಾಮೆಗೆ ತ್ರಿ ಈಡಿಯಟ್ಸ್‌ ಕಾರಣ!

ಆನಂದ್ ಸಿಂಗ್ ರಾಜೀನಾಮೆ ಅಂಗೀಕಾರವಾಗಲಿದೆ

ಆನಂದ್ ಸಿಂಗ್ ರಾಜೀನಾಮೆ ಅಂಗೀಕಾರವಾಗಲಿದೆ

ಆನಂದ್ ಸಿಂಗ್ ಅವರು ಸೋಮವಾರದಂದು ರಾಜೀನಾಮೆ ಸಲ್ಲಿಸಿದ್ದು, ಅವರ ರಾಜೀನಾಮೆ ಬಹುತೇಕ ಅಂಗೀಕಾರ ಆಗುವ ಸಾಧ್ಯತೆ ಇದೆ. ಅವರು ರಾಜ್ಯಪಾಲರಿಗೂ ರಾಜೀನಾಮೆ ಪತ್ರದ ಪ್ರತಿಯನ್ನು ಸಲ್ಲಿಸಿದ್ದಾರೆ.

ಇಂದು ಕೆಲವು ಶಾಸಕರ ರಾಜೀನಾಮೆ?

ಇಂದು ಕೆಲವು ಶಾಸಕರ ರಾಜೀನಾಮೆ?

ಎಷ್ಟು ಜನ ರಾಜೀನಾಮೆ ಸಲ್ಲಿಸಿದರೂ ನಾನು ಸ್ವೀಕರಿಸಲು ಸಿದ್ಧ ಎಂದು ರಮೇಶ್ ಕುಮಾರ್ ಹೇಳಿದ್ದು, ಇಂದು ಅಥವಾ ನಾಳೆ ಇನ್ನೂ ಕೆಲವು ಶಾಸಕರು ರಾಜೀನಾಮೆ ಸಲ್ಲಿಸುತ್ತಾರೆ ಎನ್ನಲಾಗಿದೆ.

ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿಲ್ಲ : ಸಿದ್ದರಾಮಯ್ಯ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿಲ್ಲ : ಸಿದ್ದರಾಮಯ್ಯ

English summary
Congress MLA Ramesh Jarkiholi may submit resignation to speaker Ramesh Kumar in person today. His resignation was not accepted earlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X