ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರ ಲೆಟರ್ ಫೋರ್ಜರಿ; 10 ಲಕ್ಷ ಸಾಲಕ್ಕಾಗಿ ಡಿಸಿಎಂಗೆ ಶಿಫಾರಸು!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16 : ಸಮಾಜ ಕಲ್ಯಾಣ ಸಚಿವ ಮತ್ತು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಶಾಸಕರ ಫೋರ್ಜರಿ ಪತ್ರ ನೋಡಿ ಗಾಬರಿಗೊಂಡಿದ್ದಾರೆ.10 ಲಕ್ಷ ರೂ. ಸಾಲ ಸೌಲಭ್ಯಕ್ಕಾಗಿ ಫೋರ್ಜರಿ ಪತ್ರದಲ್ಲಿ ಮನವಿ ಸಲ್ಲಿಸಲಾಗಿದೆ.

ಶಾಸಕರೊಬ್ಬರ ಲೆಟರ್ ಹೆಡ್ ಪೋರ್ಜರಿ ಮಾಡಿ 12 ಜನರಿಗೆ ತಲಾ 10 ಲಕ್ಷ ರೂ. ಸಾಲ ಸೌಲಭ್ಯ ನೀಡಬೇಕು ಎಂದು ಸಮಾಜ ಕಲ್ಯಾಣ ಸಚಿವರಿಗೆ ಶಿಫಾರಸು ಮಾಡಲಾಗಿತ್ತು. ವಿಧಾನಸೌಧದಲ್ಲಿ ಪತ್ರ ನೋಡಿ ಸಚಿವ ಗೋವಿಂದ ಕಾರಜೋಳ ಗಾಬರಿಗೊಂಡರು.

 ಸಾಲ ಪಾವತಿಸದ ರೈತರಿಗೆ ವಾರೆಂಟ್!: ಆತಂಕದಲ್ಲಿ ಪ್ರವಾಹಪೀಡಿತ ರೈತರು ಸಾಲ ಪಾವತಿಸದ ರೈತರಿಗೆ ವಾರೆಂಟ್!: ಆತಂಕದಲ್ಲಿ ಪ್ರವಾಹಪೀಡಿತ ರೈತರು

2019-20ನೇ ಸಾಲಿನ ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಐಎಸ್‌ಬಿ ಯೋಜನೆಯಡಿ ಸಾಲ ಸೌಲಭ್ಯ ನೀಡಬೇಕು ಎಂದು ಫೋರ್ಜರಿ ಮಾಡಿರುವ ಪತ್ರದಲ್ಲಿ ಮನವಿ ಮಾಡಲಾಗಿದೆ.

400 ಜಿಲ್ಲೆಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಮೇಳ: ನಿರ್ಮಲಾ ಸೀತಾರಾಮನ್400 ಜಿಲ್ಲೆಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಮೇಳ: ನಿರ್ಮಲಾ ಸೀತಾರಾಮನ್

Govind M.Karjol

ಫಲಾನುಭವಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗಕ್ಕೆ ಸೇರಿದ್ದಾರೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಇವರು ನನಗೆ ಪರಿಚಿತರು ಗಾರ್ಮೆಂಟ್ಸ್ ಉದ್ಯಮ ಆರಂಭಿಸಲು ಸಾಲ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿತ್ತು.

ಇನ್ಮುಂದೆ ಆಸ್ತಿ ಪತ್ರ ಫೋರ್ಜರಿ ಮಾಡಿದ್ರೆ ಸಿಕ್ಕಿ ಬೀಳ್ತೀರ ಹುಷಾರ್! ಇನ್ಮುಂದೆ ಆಸ್ತಿ ಪತ್ರ ಫೋರ್ಜರಿ ಮಾಡಿದ್ರೆ ಸಿಕ್ಕಿ ಬೀಳ್ತೀರ ಹುಷಾರ್!

ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಬಿಜೆಪಿ ಶಾಸಕ ಪ್ರೊ. ಎನ್. ಲಿಂಗಣ್ಣ ಲೆಟರ್ ಹೆಡ್ ಫೋರ್ಜರಿ ಮಾಡಲಾಗಿದೆ. ಸ್ವತಃ ಲಿಂಗಣ್ಣ ಈ ಕುರಿತು ಉಪ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳಗೆ ದೂರು ನೀಡಿದ್ದಾರೆ.

"ನನ್ನ ಲೆಟರ್ ಹೆಡ್ ಫೋರ್ಜರಿ ಮಾಡಲಾಗಿದೆ. ಯಾರು ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಸಾಲ ನೀಡುವಂತೆ ಯಾರಿಗೂ ಶಿಫಾರಸು ಪತ್ರ ನೀಡಿಲ್ಲ" ಎಂದು ದೂರಿನಲ್ಲಿ ಪ್ರೊ. ಎನ್. ಲಿಂಗಣ್ಣ ಹೇಳಿದ್ದಾರೆ.

"ದಾವಣಗೆರೆ ಜಿಲ್ಲಾ ಪೊಲೀಸರಿಗೆ ಈ ಕುರಿತು ದೂರು ನೀಡಿ. ಅವರು ಫೋರ್ಜರಿ ಮಾಡಿದವರನ್ನು ಪತ್ತೆ ಹಚ್ಚಲಿದ್ದಾರೆ" ಎಂದು ಗೋವಿಂದ ಕಾರಜೋಳ ಶಾಸಕ ಪ್ರೊ. ಎನ್. ಲಿಂಗಣ್ಣಗೆ ಸಲಹೆ ನೀಡಿದರು.

"ಶಾಸಕರ ಶಿಫಾರಸು ಪತ್ರ ಬಂದರೆ ತಿರಸ್ಕಾರ ಮಾಡಲಾಗುವುದಿಲ್ಲ. ಅದು ಫೋರ್ಜರಿ ಎಂದೂ ಗೊತ್ತಾಗುವುದಿಲ್ಲ" ಎಂದು ಗೋವಿಂದ ಕಾರಜೋಳ ಹೇಳಿದರು.

English summary
MLA forgery letter sent to Govind M.Karjol Deputy Chief Ministers Of Karnataka and request for loan of 10 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X