ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿಗೆ ಇ-ಟಾಯ್ಲೆಟ್ಸ್ ಕಳಿಸಿಕೊಡಿ ಪ್ಲೀಸ್: ಸಿಟಿ ರವಿ ಮನವಿ

By Manjunatha
|
Google Oneindia Kannada News

ಕೊಡಗು, ಆಗಸ್ಟ್ 20: ಕೊಡಗಿನ ನಿರಾಶ್ರಿತರಿಗಾಗಿ ಇ-ಟಾಯ್ಲೆಟ್‌ಗಳನ್ನು ಕಳಿಸಿಕೊಡುವಂತೆ ಬಿಜೆಪಿ ಶಾಸಕ ಸಿ.ಟಿ.ರವಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.

ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ

ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಸ್ಥಳೀಯ ಶಾಸಕರು, ವಿಧಾನಪರಿಷತ್ ಸದಸ್ಯರು, ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿರುವ ಅವರು, ನಿರಾಶ್ರಿತರ ಶಿಬಿರಗಳಿಗೆ ಶೀಘ್ರವಾಗಿ ಇ-ಟಾಯ್ಲೆಟ್‌ನ ಅವಶ್ಯಕತೆ ಇದೆ ಎಂಬುದನ್ನು ಮನಗೊಂಡು ಮನವಿ ಮಾಡಿದ್ದಾರೆ.

ಬಟ್ಟೆ, ಆಹಾರ, ದಿನ ಬಳಕೆ ವಸ್ತುಗಳನ್ನು ಭಾರಿ ಪ್ರಮಾಣದಲ್ಲಿ ಜನ ಕಳುಹಿಸಿಕೊಟ್ಟಿದ್ದಾರೆ, ಆದರೆ ಈಗ ನಿರಾಶ್ರಿತರ ಶಿಬಿರಗಳಿಗೆ ತ್ವರಿತವಾಗಿ ಇ-ಟಾಯ್ಲೆಟ್‌ಗಳು ಬೇಕಿವೆ, ಬೆಂಗಳೂರಿನ ಗೆಳೆಯರು ಕೂಡಲೇ ಇವುಗಳನ್ನು ಕಳುಹಿಸಿಕೊಡುವ ಉದಾರತೆ ತೋರಬೇಕು ಎಂದು ಹೇಳಿದ್ದಾರೆ.

MLA C.T.Ravi requested to send e-toilets to Kodagu

32 ನಿರಾಶ್ರಿತರ ಶಿಬಿರಗಳು ಕೊಡಗಿನಲ್ಲಿದ್ದು, ಪ್ರತಿ ಶಿಬಿರಕ್ಕೆ ಕನಿಷ್ಟ ಐದಾದರೂ ಇ-ಟಾಯ್ಲೆಟ್‌ ಅವಶ್ಯಕತೆ ಇದೆ ಎಂದು ರವಿ ಅವರ ಮನವಿ. ಜನರು ಬಹಿರ್ದಸೆಗೆ ಹೋಗಲು ತೊಂದರೆ ಪಡುವುದನ್ನು ಇದರಿಂದ ತಡೆಯಬಹುದು ಎಂಬುದು, ಅದರಿಂದ ಉಂಟಾಗಬಹುದ ಆರೋಗ್ಯ ಸಮಸ್ಯೆಗಳನ್ನೂ ಇದರಿಂದ ತಡೆಯಬಹುದು ಎಂಬುದು ಅವರ ಕಾಳಜಿ.

English summary
BJP MLA C.T.Ravi requested to send e-toilets to Kodagu which is facing flood. He requested through social media that, here is lot food and clothes but here people in relief camps need e-toilets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X