ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಹಗರಣ : ಶಾಸಕ ಸಿಟಿ ರವಿ ಮೇಲೆ ಎಫ್ಐಆರ್

By Mahesh
|
Google Oneindia Kannada News

ಚಿಕ್ಕಮಗಳೂರು, ಜು.30: ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸಿ.ಟಿ.ರವಿ ಸೇರಿದಂತೆ ಮೂವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಸಿಟಿ ರವಿ ಅವರಿಗೆ ಈ ಪ್ರಕರಣ ತಲೆನೋವಾಗಿ ಪರಿಣಮಿಸಿದೆ.

ಸಿ.ಟಿ.ರವಿ ಅವರು ಸಚಿವರಾಗಿದ್ದ ಅವಧಿಯಲ್ಲಿ ಸಂಬಂಧಿ ಸುದರ್ಶನ್ ಎಂಬುವರೊಂದಿಗೆ ಸೇರಿಕೊಂಡು ಹಿರೇಮಗಳೂರು ಸರ್ವೆ ನಂ.19 ರಲ್ಲಿ 6.3 ಗುಂಟೆ ಜಮೀನನ್ನು ಡಿನೋಟಿಫಿಕೇಷನ್ ಮಾಡಿಕೊಂಡಿದ್ದಾರೆ ಎಂದು ನಗರದ ಗೃಹ ಮಂಡಳಿ ನಿವಾಸಿ, ರೈತ ಕೆ.ಎನ್.ಸಣ್ಣಮಲ್ಲಪ್ಪ ಎಂಬುವರು ದೂರು ನೀಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕಮಗಳೂರು ಜಿಲ್ಲಾ ಸೆಷನ್ಸ್ ಕೋರ್ಟ್ ಆಗಸ್ಟ್ 6 ರೊಳಗೆ ಪ್ರಕರಣ ದಾಖಲಿಸಿಕೊಂಡು ತನಿಖಾ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿತ್ತು.[ಅಕ್ರಮ ಸಾಬೀತಾದರೆ ಜೀತ ಮಾಡುವೆ: ರವಿ]

MLA C.T. Ravi booked in land denotification case, Chikmagalur

ಉಪವಿಭಾಗಾಧಿಕಾರಿಗಳು 1990ರಲ್ಲಿ ಭೂ ಸ್ವಾಧೀನ ಕಾಯ್ದೆ ಕಲಂ 4(1)ರ ಅನ್ವಯ ಸ್ವಾಧೀನದ ಬಗ್ಗೆ ನೋಟಿಫಿಕೇಷನ್ ಮಾಡಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಸಣ್ಣಮಲ್ಲಪ್ಪ ಅವರು ಹೈಕೋರ್ಟ್‌ನಲ್ಲಿ ವಿಪ್ ಪಿಟಿಷನ್ ಸಲ್ಲಿಸಿ ಆದೇಶ ರದ್ದು ಪಡಿಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಭೂ ಸ್ವಾಧೀನ ಆದೇಶ ರದ್ದುಪಡಿಸಿ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಸೂಚಿಸಿತ್ತು.

ಆದರೆ ಉಪವಿಭಾಗಾಧಿಕಾರಿಗಳು ಕಂದಾಯ ವಿಭಾಗಕ್ಕೆ ಪತ್ರ ಬರೆದು ಸ್ವಾಧೀನ ಪ್ರಕ್ರಿಯೆ ಮುಂದುವರೆಸಿದ್ದರು. ಸಿ.ಟಿ.ರವಿ ಫಲವತ್ತಾದ ಕೃಷಿ ಭೂಮಿಯನ್ನು ಸಂಬಂಧಿ ಸುದರ್ಶನ್‌ಗೆ ಕೊಡಿಸುವ ಉದ್ದೇಶದಿಂದ ಸಣ್ಣ ಮಲ್ಲಪ್ಪ ಮತ್ತು ಇತರೆ ವಾರಸುದಾರರ ಸಹಿಯನ್ನು ನಕಲಿ ಮಾಡಿ 21.9.2007ರಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಕಲಿ ಅರ್ಜಿ ನೀಡಿದ್ದರು ಎಂದು ಎಫ್‌ಐಆರ್ ನಲ್ಲಿ ದಾಖಲಿಸಲಾಗಿದೆ.

ನ್ಯಾಯಾಲಯದಲ್ಲಿ ಆಗಿನ ಪ್ರಾಧಿಕಾರದ ಆಯುಕ್ತರಾಗಿದ್ದ ನಾಗಭೂಷಣ್ ಅವರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಸಿ.ಟಿ.ರವಿ ಮತ್ತು ಸುದರ್ಶನ್ ಅಧಿಕಾರ ದುರುಪಯೋಗ ಪಡಿಸಿಕೊಂಡು ನಾಗಭೂಷಣ್ ಅವರ ಮೂಲಕ ಭೂ ಪರಿವರ್ತನೆ ಮಾಡಿಸಿ ನಿವೇಶನಗಳನ್ನಾಗಿ ಮಾರ್ಪಡಿಸಿ ಮಾರಾಟ ಮಾಡಿದ್ದಾರೆ.

ಈ ಮೂವರು ಸರ್ಕಾರ ಮತ್ತು ಕಂದಾಯ ಇಲಾಖೆ ಗಮನಕ್ಕೆ ತಾರದೆ ಸುಮಾರು 14 ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆಂದು ಐಪಿಸಿ ಸೆಕ್ಷನ್ 406, 409, 420, 426, 469, 468, 471, 474 ಮತ್ತು 120 (ಬಿ) ಅಡಿ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಇನ್ಸ್‌ಪೆಕ್ಟರ್ ಸಂಪತ್ ನ್ಯಾಯಾಲಯಕ್ಕೆ ಎಫ್‌ಐಆರ್ ಸಲ್ಲಿಸಿದ್ದಾರೆ.

English summary
The Chikmagalur Lokayukta police have registered a case against three persons, including the former Minister and Chikmagalur MLA C.T. Ravi, based on a complaint that he had used his influence for denotifying a land for the benefit of his close associate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X