ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಶನ್ ಶಕ್ತಿಯ ಹಿಂದೆ ಮನಮೋಹನ್ ಸಿಂಗ್: ಸಿದ್ದು ಅಭಿನಂದನೆ

|
Google Oneindia Kannada News

Recommended Video

lok sabha election 2019: ಮಿಶನ್ ಶಕ್ತಿಯ ಹಿಂದೆ ಮನಮೋಹನ್ ಸಿಂಗ್

ಬೆಂಗಳೂರು, ಮಾರ್ಚ್ 27: ಮಿಶನ್ ಶಕ್ತಿಯ ಮೂಲಕ ಹಳೆಯ ಉಪಗ್ರಹವನ್ನು ಹೊಡೆದುರುಳಿಸುವ ಉಪಗ್ರಹ ನಿಗ್ರಹ ಅಸ್ತ್ರವನ್ನು ಅಭಿವೃದ್ಧಿಪಡಿಸಿರುವ ಡಿಆರ್‌ಡಿಒ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತವು ಬಾಹ್ಯಾಕಾಶ ರಕ್ಷಣಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಮತ್ತು ದೇಶದ ವೈಜ್ಞಾನಿಕ ಬೆಳವಣಿಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಹಿತಿ ನೀಡಿದ್ದರು. ವಿಜ್ಞಾನಿಗಳ ಸಾಧನೆಗೆ ಶ್ಲಾಘನೆ ವ್ಯಕ್ತವಾದರೂ, ಈ ಸನ್ನಿವೇಶವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯ ಶ್ರೇಯಸ್ಸನ್ನು ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿದ್ದಾರೆ. ಇದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ರೂಪುಗೊಂಡ ಯೋಜನೆ. ಡಿಆರ್‌ಡಿಒದ ಈ ಮಹತ್ವಾಕಾಂಕ್ಷಿ ಯೋಜನೆಗೆ ಸಿಂಗ್ ಅವರು ಒತ್ತಾಸೆಯಾಗಿ ನಿಂತಿದ್ದರು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಏನಿದು ಮಿಷನ್ ಶಕ್ತಿ- Anti- ಉಪಗ್ರಹ ಕ್ಷಿಪಣಿ ಅಸ್ತ್ರ? ಏನಿದು ಮಿಷನ್ ಶಕ್ತಿ- Anti- ಉಪಗ್ರಹ ಕ್ಷಿಪಣಿ ಅಸ್ತ್ರ?

ಹಾಗೆಯೇ ಇದು ವಿಜ್ಞಾನಿಗಳು ಮತ್ತು ದೇಶದ ಸಾಧನೆಯೇ ಹೊರತು, ಒಂದು ಪಕ್ಷ ಅಥವಾ ಪ್ರಧಾನಿಯದ್ದಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಈ ಯಶಸ್ಸಿನ ಕುರಿತು ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

Array

ಡಿಆರ್‌ಡಿಒಗೆ ಅಭಿನಂದನೆ

ಉಪಗ್ರಹ ನಿಗ್ರಹ ಕ್ಷಿಪಣಿಯ ಸಫಲ ಪ್ರಯೋಗಕ್ಕಾಗಿ ಡಿಆರ್‌ಡಿಒದ ವಿಜ್ಞಾನಿಗಳಿಗೆ ಅಭಿನಂದನೆಗಳು ಎಂದು ಸಿದ್ದರಾಮಯ್ಯ ಯಶಸ್ವಿ ಪರೀಕ್ಷೆ ನಡೆಸಿದ ವಿಜ್ಞಾನಿಗಳನ್ನು ಕೊಂಡಾಡಿದ್ದಾರೆ.

ಡಿಆರ್‌ಡಿಓ ತ್ರಿವಿಕ್ರಮ : ಮೋದಿಗೆ ರಾಹುಲ್ ರಂಗಭೂಮಿ ದಿನದ ಶುಭಾಶಯ ಡಿಆರ್‌ಡಿಓ ತ್ರಿವಿಕ್ರಮ : ಮೋದಿಗೆ ರಾಹುಲ್ ರಂಗಭೂಮಿ ದಿನದ ಶುಭಾಶಯ

Array

ವಿಜ್ಞಾನಿಗಳು ಮತ್ತು ಹಿಂದಿನ ಪ್ರಧಾನಿಗೆ

ಅಭಿನಂದನೆ ಸಲ್ಲಬೇಕಾಗಿರುವುದು ವರ್ಷಗಳ ಕಾಲ ಈ ಒಂದು ತಂತ್ರಜ್ಞಾನದ ಅಭಿವದ್ಧಿಗಾಗಿ ಹಗಲಿರುಳು ಶ್ರಮಿಸಿದ ವಿಜ್ಞಾನಿಗಳು ಮತ್ತು ಇಂತಹದ್ದೊಂದು ಮುನ್ನೋಟ ಇಟ್ಟುಕೊಂಡು ಡಿಆರ್‌ಡಿಒದ ಪ್ರಯತ್ನಕ್ಕೆ ಒತ್ತಾಸೆಯಾಗಿ ನಿಂತ ಹಿಂದಿನ ಪ್ರಧಾನ ಮಂತ್ರಿಗಳಿಗೆ ಎಂದು ಇದರ ಶ್ರೇಯಸ್ಸು ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು ಎಂದಿದ್ದಾರೆ.

ಮೋದಿ ಹೇಳಿದ 'ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್' ತಂತ್ರಜ್ಞಾನ: ಏನಿದು ಎಲ್‌ಇಒ? ಮೋದಿ ಹೇಳಿದ 'ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್' ತಂತ್ರಜ್ಞಾನ: ಏನಿದು ಎಲ್‌ಇಒ?

ಒಂದು ಪಕ್ಷ, ಸರ್ಕಾರದ್ದಲ್ಲ

ಉಪಗ್ರಹ ನಿಗ್ರಹ ಕ್ಷಿಪಣಿಯ ಸಫಲ‌ ಪ್ರಯೋಗ ವಿಜ್ಞಾನಿಗಳ ಸಾಧನೆ, ದೇಶದ ಸಾಧನೆ. ಅದು ಒಂದು ಪಕ್ಷ, ಸರ್ಕಾರ ಇಲ್ಲವೆ ಪ್ರಧಾನಿಯದ್ದಲ್ಲ, ನೆನಪಿರಲಿ ಎಂದು ಟ್ವೀಟ್ ಮಾಡಿದ್ದಾರೆ.

ಮನಮೋಹನ್ ಸಿಂಗ್ ಅವರಿಗೂ ಸಲ್ಲಬೇಕು

ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೇ ಆಗಿನ ರಕ್ಷಣಾ ಇಲಾಖೆಯ ವೈಜ್ಞಾನಿಕ ಸಲಹೆಗಾರರಾಗಿದ್ದ ಡಾ.ವಿ.ಕೆ.ಸಾರಸ್ವತ್ ಉಪಗ್ರಹ ನಿಗ್ರಹ ಕ್ಷಿಪಣಿ ನಿರ್ಮಾಣಕ್ಕೆ ಬೇಕಾದ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸುತ್ತಿರುವುದಾಗಿ ಪ್ರಕಟಿಸಿದ್ದರು. ಅಭಿನಂದನೆ ಡಾ.ಮನಮೋಹನ್ ಸಿಂಗ್ ಅವರಿಗೂ ಸಲ್ಲಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

English summary
Former chief minister Siddaramaiah gives all credits of Mission Shakti A-SAT to former PM Manmohan Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X