ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಭೀರ ಸ್ವರೂಪ ಪಡೆದ ವೈದ್ಯರ ಮುಷ್ಕರ: ನಾಳೆ ರಾಜ್ಯದಾದ್ಯಂತ ಒಪಿಡಿ ಬಂದ್

|
Google Oneindia Kannada News

ಬೆಂಗಳೂರು, ನವೆಂಬರ್ 7: ರಾಜ್ಯದಾದ್ಯಂತ ಎಲ್ಲಾ ಆಸ್ಪತ್ರೆಗಳಲ್ಲೂ ಶುಕ್ರವಾರ ಒಪಿಡಿ ಬಂದ್ ಆಗಲಿದೆ.

ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಡೆಸಿರುವ ಹಲ್ಲೆ ಖಂಡಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮುಂದುವರೆದ ಸರ್ಕಾರಿ ವೈದ್ಯರ ಮುಷ್ಕರ: ಖಾಸಗಿ ವೈದ್ಯರ ಸಾಥ್ಮುಂದುವರೆದ ಸರ್ಕಾರಿ ವೈದ್ಯರ ಮುಷ್ಕರ: ಖಾಸಗಿ ವೈದ್ಯರ ಸಾಥ್

ಶುಕ್ರವಾರ ಎಲ್ಲಾ ಆಸ್ಪತ್ರಗಳ ಒಪಿಡಿ ಬಂದ್ ಮಾಡುವುದಾಗಿ ವೈದ್ಯರು ಎಚ್ಚರಿಕೆ ನೀಡಲಿದ್ದಾರೆ. ವೈದ್ಯರ ಬೇಡಿಕೆಗಳು ಈಡೇರುವವರೆಗೂ ಒಪಿಡಿ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Minto Doctors Strike OPD Bundh In All Over Karnataka

ಹಲ್ಲೆ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕ್ಷಮೆ ಕೇಳಬೇಕು ಹಾಗೂ ಅವರ ವಿರುದ್ಧ ಕಾನೂನಿನ ಅಡಿಯಲ್ಲಿ ಪೊಲೀಸರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘ, ಫನಾ ಸೇರಿದಂತೆ ವಿವಿಧ ಸಂಘಟನೆಗಳು ಸಾಥ್ ನೀಡುತ್ತಿವೆ. ಶುಕ್ರವಾರ ಬೆಳಗ್ಗೆ 6ರಿಂದ ಒಪಿಡಿ ಬಂದ್ ಮಾಡಲು ಐಎಂಎ ಕರೆ ನೀಡಿದೆ.

ಇವರಿಬ್ಬರ ಜಗಳದಿಂದ ಚಿಕಿತ್ಸೆಗೆ ಬರುತ್ತಿರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ. ಇನ್ನೂ ಶುಕ್ರವಾರದವರೆಗೆ ಕಾದು ನೋಡಲು ನಿರ್ಧರಿಸಿದ್ದ ಕಿರಿಯ ವೈದ್ಯರು, ರಾಜ್ಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡುವ ನಿರ್ಧಾರ ಮಾಡಿದ್ದಾರೆ.

English summary
Minto Doctors Strike OPD Bundh In All Over Karnataka, OPD in Hospital remained shut in November 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X