ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗಾಯತ ಪ್ರತ್ಯೇಕ ಧರ್ಮ : ಯಡಿಯೂರಪ್ಪಗೆ ಬಿಸಿತುಪ್ಪ

By Prasad
|
Google Oneindia Kannada News

Recommended Video

ಆ ಕಡೆ ಸಿದ್ದು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬ್ಯುಸಿ |ಈ ಕಡೆ ಯಡ್ಡಿ ಫುಲ್ ಸೈಲೆಂಟ್ | Oneindia kannada

ಬೆಂಗಳೂರು, ಮಾರ್ಚ್ 20 : ಲಿಂಗಾಯತ ಪಂಗಡಕ್ಕೆ ಪ್ರತ್ಯೇಕ ಧರ್ಮದ ಅಸ್ತಿತ್ವ ನೀಡಿ ಹಿಂದೂಗಳನ್ನು ಸಿದ್ದರಾಮಯ್ಯ ಒಡೆಯಲು ಹವಣಿಸುತ್ತಿದ್ದಾರೆ ಎಂದು ರಾಜ್ಯಾದ್ಯಂತ ಕೂಗೆದ್ದಿರುವ ಸಂದರ್ಭದಲ್ಲಿ, ಲಿಂಗಾಯತರ ಪರಮೋಚ್ಚ ನಾಯಕ ಎಂದು ಬಿಂಬಿತರಾಗಿದ್ದ ಯಡಿಯೂರಪ್ಪನವರು ಎಚ್ಚರಿಕೆಯ ನಡೆ ಇಟ್ಟಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

"ಭಾರತೀಯ ಜನತಾ ಪಾರ್ಟಿ ಮೊದಲಿನಿಂದಲೂ ಅಖಿಲ ಭಾರತ ವೀರಶೈವ ಮಹಾಸಭಾ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿದೆ ಎಂಬ ನಿಲುವು ತೆಗೆದುಕೊಂಡಿದ್ದೆವು. ಈಗ ರಾಜ್ಯ ಸರಕಾರದ ಈ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತುರ್ತಾಗಿ ಸಭೆ ಸೇರಿ, ಈ ಶಿಫಾರಸ್ಸಿನ ಸಾಧಕ-ಬಾಧಕಗಳ ಚರ್ಚೆ ನಡೆಸಿ, ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ವಿನಂತಿಸುತ್ತೇನೆ."

ಟ್ವೀಟ್ಸ್ : 'ಒಡೆದು ಆಳುವ ನೀತಿ ಕಾಂಗ್ರೆಸ್ಸಿಗೆ ಬ್ರಿಟಿಷರ ಕೊಡುಗೆ'ಟ್ವೀಟ್ಸ್ : 'ಒಡೆದು ಆಳುವ ನೀತಿ ಕಾಂಗ್ರೆಸ್ಸಿಗೆ ಬ್ರಿಟಿಷರ ಕೊಡುಗೆ'

ಎಂಬ ಹೇಳಿಕೆಯನ್ನು ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ. ಕೆಲವಾರು ತಿಂಗಳುಗಳಿಂದ ನಡೆಯುತ್ತಲೇ ಇದ್ದ ಪ್ರತ್ಯೇಕತಾವಾದ ಹೋರಾಟದುದ್ದಕ್ಕೂ ಯಡಿಯೂರಪ್ಪನವರು ದಿವ್ಯವಾದ ಮೌನವನ್ನು ಹೊತ್ತೇ ಇದ್ದಾರೆ. ಏಕೆಂದರೆ, ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎಂದು ಮೊದಲಿಗೆ (2013ರಲ್ಲಿ) ಹೋರಾಟ ನಡೆಸಿದ್ದೇ ಯಡಿಯೂರಪ್ಪನವರು.

Minority status to Lingayat : Why Yeddyurappa is silent

ಇದೀಗ, ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಕೇವಲ ತಿಂಗಳು ಇರುವಾಗ, ಸಿದ್ದರಾಮಯ್ಯ ಸರಕಾರದ ನಡೆ ಯಡಿಯೂರಪ್ಪನವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಶೇ.14ರಷ್ಟಿರುವ ಲಿಂಗಾಯತರ ಮತಗಳು ಯಾವ್ಯಾವ ಪಕ್ಷಗಳಿಗೆ ಹರಿದುಹಂಚಿಹೋಗಲಿವೆ ಎಂಬುದು ಮುಂದಿನ ಚುನಾವಣೆಯ ನಂತರವಷ್ಟೇ ಗೊತ್ತಾಗಲಿದೆ. ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿ, ಕೆಲ ಪರ್ಸೆಂಟುಗಳಷ್ಟಾದರೂ ಮತಗಳನ್ನು ಯಡಿಯೂರಪ್ಪನವರಿಂದ ಸಿದ್ದರಾಮಯ್ಯ ಕಸಿದುಕೊಂಡಿದ್ದಾರೆ.

English summary
Minority status to Lingayat : Why Yeddyurappa is silent? He has said, he will abide by the decision taken by All India Veerashaiva Mahasabha, after careful analysis of separate religion status given to Lingayat by Siddaramaiah govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X