ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಪಸಂಖ್ಯಾತರು ಪಕ್ಷದ ಕಚೇರಿಯ ಕಸ ಹೊಡೆದರೆ ಟಿಕೆಟ್- ಈಶ್ವರಪ್ಪ

|
Google Oneindia Kannada News

ಬೆಂಗಳೂರು, ಮಾರ್ಚ್ 10: ''ಅಲ್ಪಸಂಖ್ಯಾತರು ಬಿಜೆಪಿ ಪಕ್ಷದ ಕಚೇರಿಯ ಕಸ ಹೊಡೆದರೆ ಅವರಿಗೂ ಟಿಕೆಟ್ ನೀಡುತ್ತೇವೆ'' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಈಶ್ವರಪ್ಪ ಈ ಮಾತನ್ನು ಹೇಳಿದ್ದಾರೆ.

ನಿನ್ನೆ (ಸೋಮವಾರ) ವಿಧಾನಸಭೆ ಚರ್ಚೆ ಸಮಯದಲ್ಲಿ ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ್, ''ಇಂದು ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ನಿಮಗೆ ಅಧಿಕಾರ ನೀಡಿದ್ದು ಸಂವಿಧಾನ. ಆದರೆ, ಸಾಕಷ್ಟು ಚುನಾವಣೆಗಳಲ್ಲಿ ಬಿಜೆಪಿಯವರು ಅಲ್ಪಸಂಖ್ಯಾತ ಸಮುದಾಯದ ಒಬ್ಬ ಅಭ್ಯರ್ಥಿಗೂ ಸ್ಪರ್ಧೆಗೆ ಅವಕಾಶ ನೀಡದ ಉದಾಹರಣೆಗಳಿವೆ.'' ಎಂದು ಪ್ರಶ್ನೆ ಮಾಡಿದರು.

ಪ್ರವಾಹಪೀಡಿತ ತಾಲೂಕುಗಳ ರಸ್ತೆ ಅಭಿವೃದ್ಧಿಗೆ 1500 ಕೋಟಿ ರೂ. ಬಿಡುಗಡೆಪ್ರವಾಹಪೀಡಿತ ತಾಲೂಕುಗಳ ರಸ್ತೆ ಅಭಿವೃದ್ಧಿಗೆ 1500 ಕೋಟಿ ರೂ. ಬಿಡುಗಡೆ

ಪರಮೇಶ್ವರ್ ಮಾತಿಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ''ಈ ಸದನಕ್ಕೆ ಗೆದ್ದು ಬಂದಿರುವವರೆಲ್ಲಾ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿ ಬಂದವರು. ಹಾಗೇ ಅಲ್ಪಸಂಖ್ಯಾತರೂ ಬಂದು ಪಕ್ಷದ ಕಚೇರಿಯ ಕಸ ಹೊಡೆದರೆ ಖಂಡಿತ ಟಿಕೆಟ್ ನೀಡುತ್ತೇವೆ. ಮುಸಲ್ಮಾನರಿಗೆ ಬಿಜೆಪಿಯಿಂದ ಚುನಾವಣಾ ಸ್ಪರ್ಧೆಗೆ ಟಿಕೆಟ್ ಕೊಡುವುದಿಲ್ಲ ಎಂದಿಲ್ಲ.'' ಎಂದು ಉತ್ತರ ನೀಡಿದರು.

Minorities Will Get Ticket If They Sweep Bjp Office Says Eshwarappa

ಸ್ವಾತಂತ್ರ್ಯ ಹೋರಾಟಗಾರರು ಪಕ್ಷಾತೀತವಾಗಿರಬೇಕು: ಸಚಿವ ಈಶ್ವರಪ್ಪಸ್ವಾತಂತ್ರ್ಯ ಹೋರಾಟಗಾರರು ಪಕ್ಷಾತೀತವಾಗಿರಬೇಕು: ಸಚಿವ ಈಶ್ವರಪ್ಪ

ನಂತರ ಈಶ್ವರಪ್ಪ ಮಾತಿಗೆ ತಿರುಗೇಟು ನೀಡಿದ ಎಚ್ ಕೆ ಪಾಟೀಲ್ ನಿಮ್ಮೆ ಪಕ್ಷಕ್ಕೆ ಕೆಲ ತಿಂಗಳುಗಳ ಹಿಂದೆ ಬಂದ 15 ಜನ ಕೂಡ ಕಸ ಹೊಡೆದಿದ್ದರಾ ಎಂದರು. ಆಗ, ಈಶ್ವರಪ್ಪ ಇನ್ನು ಮುಂದೆ ಕಸ ಹೊಡೆಯುತ್ತಾರೆ. ನಾವು ಕಸ ಹೊಡೆಯುವುಂತೆ ಮಾಡುತ್ತೇವೆ ಎಂದರು.

English summary
Minorities will get ticket if they sweep BJP office says Rural Development and Panchayat Raj minister KS Eshwarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X